ಮಂಗಳವಾರದಂದು ಅಂಗಾರಕ ಸಂಕಷ್ಟಹರ ಚತುರ್ಥಿ ಬಂದಿರುವುದು ವಿಶೇಷವಾಗಿದ್ದು ದೇವಾಲಯಗಳಿಗೆ ಹೆಚ್ಚು ಭಕ್ತಾಧಿಗಳು ಆಗಮಿಸಿ ಗಣೇಶನಿಗೆ ಮೋದಕ ಅರ್ಪಿಸಿ ಪೂಜಿಸುವ ಮೂಲಕ ಆಚರಿಸಿದರು. ಸತ್ಯನಾರಾಯಣ ಮೇಸ್ಟ್ರು ಹಾಗೂ ರಾಜಣ್ಣ ಅವರ ಪೌರೋಹಿತ್ಯದಲ್ಲಿ ಹೋಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಪುಣ್ಯಾಹ, ದೇವನಾಂದಿ, ಪಂಚಾಮೃತಾಭಿಷೇಕ, ನವಗ್ರಹ ಹೋಮ,ಮೃತ್ಯುಂಜಯ ಹೋಮ,ಅಂಗಾರಕ ಗಣಪತಿ ಗಣಪತಿ ಹೋಮ ನಡೆದು ಪುರ್ಣಾಹುತಿ ಹಾಗೂ ಮಹಾಮಂಗಳಾರತಿ ಸಮರ್ಪಿಸಿದ ನಂತರ ಪಾನಕ ಪನಿವಾರ ವಿತರಿಸಲಾಯಿತು.
ಹೂವಿನಬಸವರಾಜು,ನಟರಾಜು,ಶ್ರೇಯಸ್ ದಂಪತಿಗಳು ಹೋಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಂಕಷ್ಟಹರದ ಉಪವಾಸ ವೃತ ಕೈಗೊಂಡ ಮಹಿಳೆಯರು ಪಾಲ್ಗೊಂಡು ಗಣೇಶನಿಗೆ ಪೂಜೆ ಸಲ್ಲಿಸಿದರು.ದೇವಾಲಯ ಸಮಿತಿಯ ಸುದರ್ಶನಚಾರ್,ತಮ್ಮಯ್ಯ ,ಚೇತನ್ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ