ವಿಷಯಕ್ಕೆ ಹೋಗಿ

ಈ ಪಂಚಾಯ್ತಿ ಮಳಿಗೆಗಳಲ್ಲಿ ೧೮ ವರ್ಷದಿಂದ ಬಾಡಿಗೆ ವಸೂಲಿಯಾಗಿಲ್ಲ.

ಬಾಡಿಗೆಯು ಎಷ್ಟೆಂದು ನಿಗದಿಯೂ ಮಾಡಿಲ್ಲ
----------------------
ವರದಿ : ಡಿ.ಆರ್.ನರೇಂದ್ರ ಬಾಬು

ಹುಳಿಯಾರು ಪಂಚಾಯ್ತಿ ಹಣ ಬಳಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ಮಳಿಗೆಯ ಬಾಡಿಗೆ ವಸೂಲಿ ಮಾಡಲು ಪಂಚಾಯ್ತಿ ಅಧಿಕಾರಿಗಳು ಅಸಡ್ಡೆ ಮಾಡಿದ ಪರಿಣಾಮ ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನೆಂಟು ವರ್ಷಗಳಿಂದ ಗ್ರಾಪಂ ಮಳಿಗೆಗಳ ಬಾಡಿಗೆ ವಸೂಲಿಯಾಗದೆ ಲಕ್ಷಾಂತರ ರೂಪಾಯಿ ಬಾಕಿ ಬೆಳದಿದೆ.ಆ ಬಾಕಿಯನ್ನಾದರೂ ವಸೂಲಿ ಮಾಡೋಣವೆಂದರೆ ಯಾವ ಸಾಲಿನಿಂದ ಬಾಕಿ ನಿಂತಿದೆ,ಇವರುಗಳು ಇಟ್ಟಿರುವ ಠೇವಣಿಯಾದರೂ ಎಷ್ಟು ಎಂಬುದರ ಬಗ್ಗೆ ಸರಿಯಾದ ದಾಖಲೆಗಳೆ ಇಲ್ಲದಾಗಿದೆ.
ಹುಳಿಯಾರು ಬಸ್ ನಿಲ್ದಾಣದಲ್ಲಿನ ೬ ಮಳಿಗೆಗಳ ಲಕ್ಷಾಂತರ ರೂಪಾಯಿ ಬಾಕಿ ವಸೂಲಾತಿಗಾಗಿ ಮಳಿಗೆಗೆ ಬೀಗ ಜಡಿದರು.

ಲಭ್ಯವಿಲ್ಲ:ಇದಕ್ಕೆ ನಿಗದಿಪಡಿಸಲಾದ ಬಾಡಿಗೆ ಎಷ್ಟು,ಇದರ ಹಾಲಿ ಮಾಲೀಕರ್ಯಾರು,ಈ ಸಾಲಿನವರೆಗೂ ಇದರ ಬಾಡಿಗೆ ಬಾಕಿಯಿರುವುದೆಷ್ಟು ...ಉಹೂ..ಇದ್ಯಾವುದೆ ವಿವರ ಈ ಪಂಚಾಯ್ತಿಯಲ್ಲಿ ಸಿಗುವುದಿಲ್ಲ.ಹತ್ತಾರು ವರ್ಷದ ಹಿಂದಿನ ಪುಸ್ತಕವೊಂದರಲ್ಲಿ ಅರ್ಧಪುಟದಲ್ಲಿ ಹಿಂದಿನ ಕಾರ್ಯದರ್ಶಿ ಬರೆದಿರುವ ಮಳಿಗೆ ಲೆಕ್ಕದಲ್ಲಿ ಮಾತ್ರ ಬಾಡಿಗೆದಾರರ ಹೆಸರು ದಾಖಲಾಗಿರುವುದು ಬಿಟ್ಟರೆ ಇದುವರೆಗೂ ಅದರ ಪೋಸ್ಟಿಂಗ್ ಕೂಡ ಮುಂದಿನ ಪುಸ್ತಕಕ್ಕೆ ಆಗಿಲ್ಲ.ಸದ್ಯ ಲಭ್ಯವಿರುವ ಅರ್ಧಪುಟದ ಮಾಹಿತಿ ಪ್ರಕಾರ ಈ ಮಳಿಗೆಗಳ ಹದಿನೆಂಟು ವರ್ಷದಿಂದ ಬಾಕಿನಿಂತಿದೆ ಎಂದು ತಿಳಿದಬರುತ್ತದೆ

ಆ ಪ್ರಕಾರವೇ ಲೆಖ್ಕ ಹಾಕಿದರೆ ಪಂಚಾಯ್ತಿಗೆ ಇದರ ಬಾಬತ್ತಿನಿಂದ ಬರಬೇಕಿರುವ ಬಾಕಿಯೇ ಸುಮಾರು ಹತ್ತು ಲಕ್ಷವನ್ನು ಮೀರುತ್ತೆ.ಹಾಗಂತ ಇದರ ಮಾಲೀಕರುಗಳು ತೀರಾ ಬಡವರು ಅಲ್ಲ,ಕಟ್ಟಲಾರದ ಸ್ಥಿತಿಯಲ್ಲಿರುವವರು ಅಲ್ಲ.ಪಂಚಾಯ್ತಿಯಿಂದ ಮಳಿಗೆಗೆಳ ನಿರ್ಮಾಣ ಮಾಡಿದಾಗ ಸರಿಯಾಶ್ದ ಮೆಟ್ಟಿಲು ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದೆ ಸಮಸ್ಯೆಗೆ ಕಾರಣವಾಗಿದೆ. ನೀವು ವಿದ್ಯುತ್ ಸಂಪರ್ಕ ಕೊಡಿ,ಅಲ್ಲಿಯವರೆಗೂ ನಾವು ಬಾಡಿಗೆ ಪಾವತಿ ಮಾಡುವುದಿಲ್ಲ ಎಂದಿದ್ದೆ ಕಾರಣವಾಗಿ ಪಂಚಾಯ್ತಿಯವರು ಅಗತ್ಯ ಸೌಕರ್ಯ ಕಲ್ಪಿಸಲು ವಿಫಲವಾಗಿ ಇತ್ತ ತಿರುಗಿ ನೋಡದಂತಾದರು. ಕಡೇ ಪಕ್ಷ ಬಾಡೀಗೆಯನ್ನು ನಿಗದಿ ಮಾಡಲಾಗದ ಪರಿಣಾಮ ಬೆಟ್ಟದಷ್ಟು ಬಾಕಿ ಬೆಳೆದು ನಿಂತಿದೆ.

ಅವ್ಯವಸ್ಥೆ:ಮೇಲ್ಭಾಗದಲ್ಲಿರುವ ಈ ಮಳಿಗೆ ಹತ್ತಲು ನಿರ್ಮಿಸಿರುವ ಮೆಟ್ಟಿಲುಗಳು ತೀರಾ ಕಿರಿದಾಗಿದ್ದು ಇದನ್ನು ಹತ್ತುವುದೆ ತ್ರಾಸದಾಯಕ.ಅಂಗಡಿಗಳ ಮರೆಯಲ್ಲಿ ಮೆಟ್ಟಿಲಿರುವುದರಿಂದ ಎಷ್ಟೋ ಜನಕ್ಕಿದು ತುರ್ತು ಶೌಚಾಲಯದ ಸ್ಥಳವಾಗಿದೆ.ಹಾಗಂತ ಅಂಗಡಿದಾರರು ಸುಮ್ಮನಿಲ್ಲ.ಗೌಡನ್ ಗಾಗಿ ಈ ಸ್ಥಳ ಬಳಸಿಕೊಂಡಿದ್ದಲ್ಲದೆ ಇದರಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಇನ್ನುಳಿದವರು ಅದೇ ಜಾಗವನ್ನು ತಾವೇ ಬೇರೊಬ್ಬರಿಗೆ ಬಾಡಿಗೆ ನೀಡಿ ಸಾವಿರಾರು ರೂಪಾಯಿ ವಸೂಲಿ ಮಾಡುತಿದ್ದಾರೆ.
ಈ ಬಗ್ಗೆ ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಬಾಡಿಗೆ ಕಟ್ಟದಿದ್ದ ಮೇಲೆ ಬೀಗ ಹಾಕಿ ಠೇವಣಿ ಮುಟ್ಟುಗೋಲು ಹಾಕಲು ತೀರ್ಮಾನಿಸಿದ ಸದಸ್ಯರುಗಳು ತಾವೇ ಖುದ್ದಾಗಿ ನಿಂತು ಬೀಗ ಜಡಿದಿದ್ದಾರೆ.ಇವರುಗಳಿಗೆ ಪುನರ್ ನವೀಕರಣ ಮಾಡುವುದೆ ಬೇಡ ಎಂದು ವಸೂಲಾತಿಗಾಗಿ ಬಿಗಿ ನಿಲುವು ತೆಗೆದುಕೊಂಡಿದ್ದಾರೆ,
ಅಲ್ಪಸ್ವಲ್ಪ ಕಂದಾಯ ಬಾಕಿಉಳಿಸಿಕೊಂಡ ಬಡವರನ್ನು ಬಿಪಿಎಲ್ ಪಡಿತರ ಚೀಟಿ ನವೀಕರಣದಂತಹ ಅತ್ಯವಶ್ಯಕ ಸಮಯದಲ್ಲಿ ಸತಾಯಿಸುತ್ತಿದ್ದ ಹುಳಿಯಾರು ಪಂಚಾಯ್ತಿ ಕೊನೆಗೂ ಬಾಡಿಗೆ ವಸೂಲಾತಿಗಾಗಿ ಬೀಗ ಹಾಕಿದ ನಿರ್ಧಾರವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

---------------------------------------------------------
ಕೆರೆಅಂಗಳದಲ್ಲಿದ ಅಂಗಡಿಗಳನ್ನು ತೆರವುಗಿಒಳಿಸಿರುವುದರಿಂದ ವ್ಯಾಪಾರಕ್ಕೆ ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿರುವ ವ್ಯಾಪಾರಸ್ಥರು ಸಾಕಷ್ಟಿದ್ದಾರೆ.ಮಳಿಗೆ ಮರುಹಾರಾಜಿನ ನಿರ್ಧಾರವನ್ನು ತೆಗೆದುಕೊಂಡು ಪಂಚಾಯ್ತಿಗೆ ಆದಾಯಮೂಲ ಮಾಡಿಕೊಳ್ಳಬೇಕು:ವೆಂಕಟೇಶ್,ಗ್ರಾಪಂ ಸದಸ್ಯ
----------------------------
ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಾಲಾಗುವುದು.ಅಂಗಡಿದಾರರಿಗೆ ನೋಟೀಸ್ ನೀಡಿ ಮಳಿಗೆ ಬಾಡಿಗೆ ನೀಡದವರ ಠೇವಣಿ ಮುಟ್ಟುಗೋಲು ಹಾಕಿಕೊಂಡು ಮರು ಟೆಂಡರ್ ಕರೆದು ಮಳಿಗೆ ಹಂಚಿಕೆ ಮಾಡಲು ಕ್ರಮತೆಗೆದುಕೊಳ್ಳಲಾಗುವುದು : ಪಿಡಿಓ ಅಡವೀಶ್ ಕುಮಾರ್
------------------------------------------------------

ಈ ಹಿಂದೆ ಮೆಟ್ಟಿಲು ನಿರ್ಮಾಣಕ್ಕೆ ಹತ್ತು ಸಾವಿರ ರೂಪಾಯಿ ಹಾಗೂ ಅಭಿವೃದ್ಧಿ ಶುಲ್ಕವಾಗಿ ಎರಡು ಸಾವಿರ ರೂಪಾಯಿಗಳನ್ನು ಕೊಟ್ಟಾಗ್ಯೂ ಯಾವುದೇ ಸೌಕರ್ಯ ಕಲ್ಪಿಸಿಲ್ಲ..ಒಂದೆರಡು ಬಾರಿ ಈ ಬಗ್ಗೆ ಕೇಳಿದಾಗಲೂ ನಿಮ್ಮ ಮಳಿಗೆ ಬಾಡಿಗೆ ಎಷ್ಟೆಂದೆ ನಿಗದಿಯಾಗಿಲ್ಲ ಎಂದು ತಿಳಿಸಿದ್ದರಿಂದ ಬಾಡಿಗೆ ಬಾಕಿಯಿದೆ.ಬಾಕಿ ತಿಳಿಸಿದಲ್ಲಿ ಈ ಕ್ಷಣವೆ ಕಟ್ಟಲು ಸಿದ್ದ : ಮಳಿಗೆದಾರರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.