ಕಾಂಗ್ರೆಸ್ ನ ಸಿದ್ಧರಾಮಯ್ಯ ಗೆಲುವು
====================
====================
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ಬಿಗಿ ಪೊಲೀಸ್ ಬಂದೋ ಬಸ್ತ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಸಿ.ಸಿದ್ಧರಾಮಯ್ಯ ಗೆಲುವು ಸಾಧಿಸಿದ್ದಾರೆ.
ಇದುವರೆಗೂ ಅಧ್ಯಕ್ಷರಾಗಿದ್ದ ಬಿಜೆಪಿಯ ಸಣ್ಣಯ್ಯ ಅವರು ದಿಢೀರ್ ರಾಜೀನಾಮೆ ನೀಡಿದ್ದರಿಂದ ಶುಕ್ರವಾರದಂದು ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಸಿ.ಸಿದ್ಧ ರಾಮಯ್ಯ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಬಸವರಾಜು ನಡುವೆ ಹಣಾಹಣಿಯ ಸ್ಪರ್ಧೆ ನಡೆಯಿತು.
ಹುಳಿಯಾರು ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಸಿ.ಸಿದ್ಧರಾಮಯ್ಯ ಅವರನ್ನು ಅಭಿಮಾನಿಗಳು ಅಭಿನಂದಿಸಿದರು
|
ಒಟ್ಟು ಸ್ಥಾನ :ಹುಳಿಯಾರು ಎಪಿಎಂಸಿಗೆ ಹಾಲಿ ಸರ್ಕಾರದ ನಾಮ ನಿರ್ದೇಶನದ ೪ ಸದಸ್ಯರು ಸೇರಿ ಒಟ್ಟು ೧೫ ಮಂದಿ ಸದಸ್ಯರಿದ್ದು ಇವರಲ್ಲಿ ಸಿದ್ಧರಾಮಯ್ಯ ಅವರಿಗೆ ೮ ಹಾಗೂ ಬಸವರಾಜು ಅವರಿಗೆ ೭ ಮತ ಲಭಿಸಿದ್ದು ಸಿದ್ದರಾಮಯ್ಯವರು ೧ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗೆದಿದ್ದು ಹೀಗೆ:ಎಪಿಎಂಸಿಯಲ್ಲಿ ಈ ಹಿಂದೆ ಕೇವಲ ಒಂದು ಸ್ಥಾನ ಹೊಂದಿದ್ದ ಕಾಂಗ್ರೆಸ್‌ಗೆ ಕಳೆದ ಚುನಾವಣೆ ನಂತರ ಸಣ್ಣಯ್ಯನವರು ಸೇರಿ ೩ ಮಂದಿ ಅಧಿಕೃತವಾಗಿ ಸೇರ್ಪಡೆಗೊಂಡು ನಾಲ್ಕಕ್ಕೆ ಏರಿತ್ತು.ಸರ್ಕಾರದ ನಾಮ ನಿರ್ದೇಶನದ ೩ ಮಂದಿ ಸೇರಿ ಒಟ್ಟು ಕಾಂಗ್ರೆಸ್ ಪರ ೭ ಸದಸ್ಯರ ಬಲವಿತ್ತು. ಬಿಜೆಪಿ ಪರವಾಗಿ ಏಳು ಸದಸ್ಯರು ಹಾಗೂ ಕಾಂಗ್ರೆಸ್ ಪರ ಏಳು ಸದಸ್ಯರಿಂದಾಗಿ ಸಮಬಲದ ಚುನಾವಣೆಯು ಕುತುಹಲ ಮೂಡಿಸಿತ್ತು. ಕಡೆಗೂ ಜೆಡಿಎಸ್ ಬೆಂಬಲಿತ ಒಬ್ಬ ಸದಸ್ಯನ ಬೆಂಬಲ ಪಡೆದ ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಸಫಲವಾಯಿತು.
ಕಾಂಗ್ರೆಸ್ ಮುಖಂಡ ಹಾಗೂ ತುಮಕೂರು ವಿವಿ ಸಿಂಡಿಕೆಟ್ ಸದಸ್ಯ ಸಾಸಲು ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೆಂಕಟೇಶ್, ಸಿ.ಬಸವರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ, ಶೇಷಾನಾಯ್ಕ, ಜಿಪಂ ಮಾಜಿ ಅಧ್ಯಕ್ಷ ರಘುನಾಥ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಮಾಜಿ ಅಧ್ಯಕ್ಷ ಬೀರಪ್ಪ, ಟಿಎಪಿಎಂಸಿ ಸದಸ್ಯ ಶಿವಕುಮಾರ್, ಗ್ರಾಪಂ ಸದಸ್ಯರಾದ ಎಲ್. ಆರ್.ಚಂದ್ರಶೇಖರ್, ವೆಂಕಟೇಶ್, ಶಶಿಕಲಾ ಮತ್ತಿತರರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ