ತಾನು ಎಸ್ ಬಿಐ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಮೊಬೈಲ್ ಕರೆ ಮಾಡಿ ಮಾತನಾಡಿ ಖಾತೆದಾರನ ಎಟಿಎಂ ಕಾರ್ಡ್ ನಂಬರ್ ಹಾಗೂ ಪಾಸ್ ವರ್ಡ್ ಪಡೆದು ಕ್ಷಣಾರ್ಧದಲ್ಲೆ ಆತನ ಖಾತೆಯಿಂದ ಹನ್ನೆರಡು ಸಾವಿರಐದುನೂರು ರೂಪಾಯಿ ಲಪಾಟಾಯಿಸಿರುವ ಘಟನೆ ಪಟ್ಟಣದ ಎಸ್ ಬಿಐ ನಲ್ಲಿ ಜರುಗಿದೆ.
ಪಟ್ಟಣದ ಕೋಳಿ ವ್ಯಾಪಾರಿ ಮುಬಾರಕ್ ಪಾಷ ಎಂಬುವರೆ ಹಣ ಕಳೆದುಕೊಂಡವರು.ಈತ ಎಸ್ ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಖಾತೆಯಿಂದ ಮೊದಲು ಐದು ಸಾವಿರ ನಂತರ ಏಳು ಸಾವಿರದ್ ಐದುನೂರು ರೂಪಾಯಿಗಳು ಪಾಸ್ ವರ್ಡ್ ಹೇಳಿದ ಒಂದೇ ನಿಮಿಷದಲ್ಲಿ ಕಳೆದುಕೊಂಡಿದ್ದಾನೆ.ಈ ಹಣ ಮುಂಬಯಿಯ ಖಾತೆಯೊದಕ್ಕೆ ಜಮಾವಾಗಿರುವ ಮೆಸೇಜ್ ಬಂದಿದೆ.
ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನಂಬರ್ ಕೊಟ್ಟು ವಂಚನೆಗೊಳಪಟ್ಟ ಹುಳಿಯಾರಿನ ಮುಬಾರಕ್ ಪಾಷ |
ಈತ ಕೋಳೀ ವ್ಯಾಪಾರಕ್ಕೆ ಕೋಳಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲ್ಲಿ ಈತನ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ತಾನು ಎಸ್ ಬಿಐ ಬ್ಯಾಂಕಿನ ಸಿಬ್ಬಂದಿ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ನಿನ್ನ ಎಟಿಎಂ ಕಾರ್ಡಿನಲ್ಲಿನ ತಾಂತ್ರಿ ಸಮಸ್ಯೆಯಿಂದ ಕಾರ್ಡ್ ಲಾಕ್ ಮಾಡಲಾಗುತ್ತದೆ ಎಂದು ಹೇಳಿದ್ದಾನೆ.ಲಾಕ್ ಆದರೆ ಸಮಸ್ಯೆಯಾಗುತ್ತದೆ ಇದಕ್ಕೇನು ಮಾಡಬೇಕೆಂದು ಕೇಳಿದಾಗ ಅದನ್ನು ಸರಿಮಾಡಲು ನಿಮ್ಮ ಎಟಿಎಂ ನಂಬರ್ ಹಾಗೂ ಮೆಸೇಜ್ ನಲ್ಲಿ ಬರುವ ಓಟಿಪಿ ನಂಬರ್ ತಿಳಿಸುವಂತೆ ಹೇಳಿದ್ದಾನೆ.ಆತ ಹೇಳಿದಂತೆ ಎಟಿಎಂ ನಂಬರ್ ಹಾಗೂ ಪಾಸ್ ವರ್ಡ್ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಈತನ ಖಾತೆಯಿಂದ ಹಣ ಡ್ರಾ ಮಾಡಿರುವ ಮೆಸೇಜ್ ಬಂದಿದೆ.
ಕೂಡಲೇ ಎಚ್ಚೆತ್ತ ಮುಬಾರಕ್ ಬ್ಯಾಂಕಿಗೆ ಬರುವಷ್ಟರಲ್ಲೇ ಖಾತೆಯಲ್ಲಿ ಉಳಿದಿದ್ದ ಏಳುವರೆ ಸಾವಿರ ರೂಪಾಯಿಗಳನ್ನು ಜಮಾ ಮಾಡಿಕೊಂಡಿವ ಮೆಸೆಜ್ ಬಂದಿದೆ. ಕೂಡಲೇ ಬ್ಯಾಂಕ್‌ಗೆ ತೆರಳಿ ಖಾತೆ ಪರಿಶೀಲಿಸಿದಾಗ ಹಣ ಕಳೆದುಕೊಂಡಿರುವುದು ಖಾತ್ರಿಯಾಗಿದೆ. ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರಲ್ಲಿ ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇದೇ ರೀತಿ ಕೆನರಾ ಬ್ಯಾಂಕಿನಲ್ಲೂ ಪಾಸ್ ವರ್ಡ್ ಪಡೆದು ವಂಚಿಸಿರುವ ಘಟನೆ ಜರುಗಿದ್ದು ಪಟ್ಟಣದಲ್ಲಿ ಕಳೆದೊಂದು ವಾರದಲ್ಲಿ ಏಳೆಂಟು ಮಂದಿ ಈ ರೀತಿಯಾಗಿ ಹಣ ಕಳೆದುಕೊಂಡ ಘಟನೆ ವರದಿಯಾಗಿದೆ.
-------------------------------------------------
ಎಟಿಎಂ ನಂಬರ್ ಕೇಳಿ ಕರೆ ಮಾಡುವ ಪರಿಪಾಠ ಯಾವುದೇ ಬ್ಯಾಂಕಿನಲಿಲ್ಲ. ಎಟಿಎಂ ಕಾರ್ಡ್ ನಂಬರ್ ಕೇಳಿ ತಿಳಿದುಕೊಂಡು ನಿಮ್ಮ ಖಾತೆಯಿಂದ ಹಣ ಲಪಾಟಿಯಿಸುವ ಜಾಲ ಹೆಚ್ಚುತ್ತಿದೆ.
ದಯಮಾಡಿ ಇಂತಹ ಕರೆ ಯಾರೇ ಮಾಡಿದರೂ ನಿಮ್ಮ ಎಟಿಎಂ ನಂಬರ್ ಕೊಡಬೇಡಿ.ಯಾವುದೇ ಕರೆಗಳಿಗೆ ಉತ್ತರಿಸಬೇಡಿ.:ರಾಧಕೃಷ್ಣ, ವ್ಯವಸ್ಥಾಪಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ