ಪೋಲಿಸ್ ಠಾಣೆಯ ಮುಂದೆ ಜಮಾಯಿಸಿರುವ ಸಾರ್ವಜನಿಕರು. |
ಯುವಕನೊಬ್ಬ ಬಾಲಕಿಯನ್ನು ಹಿಡಿದು ಎಳೆದಾಡಿದ ಪರಿಣಾಮ ಸಾರ್ವಜನಿಕರಿಂದ ಗೂಸ ತಿಂದ ಪ್ರಕರಣ ಹುಳಿಯಾರಿನ ದುರ್ಗಮ್ಮನ ದೇವಾಲಯದ ಮುಂದೆ ರಾತ್ರಿ ಏಳೂವರೆ ಸುಮಾರಿಗೆ ಜರುಗಿತು.
ದೇವಾಲಯದ ಮುಂದೆ ನಿಂತಿದ್ದ ಬಾಲಕಿಯನ್ನು ಕೈಹಿಡಿದೆಳೆದಾಗ ಬಾಲಕಿ ಚೀರಾಡಿದ ಪರಿಣಾಮ ಆಕೆಯ ಕೈಬಿಟ್ಟು ತಪ್ಪಿಸಿಕೊಂಡು ಓಡುತ್ತಿದ್ದ ಆತನನ್ನು ಅಟ್ಟಿಸಿಕೊಂಡು ಬಸ್ ನಿಲ್ದಾಣದ ಬಳಿ ಹಿಡಿದ ಸಾರ್ವಜನಿಕರು ಸರಿಯಾಗಿ ಥಳಿಸಿ ಪೋಲಿಸರಿಗೊಪ್ಪಿಸಿದ್ದಾರೆ.ಆತ ಮಕ್ಕಳ ಕಳ್ಳನೆಂದೆ ದೇವಾಲಯದ ಮುಂದೆ ಸೇರಿದ್ದ ನೂರಾರು ಮಹಿಳೆಯರು ಪೋಲಿಸರೊಂದಿಗೆ ವಾಗ್ವಾದಕ್ಕಿಳಿದರು.
ಕಳೆದೊಂದು ವಾರದಿಂದ ಮಕ್ಕಳ ಅಪಹರಣಕಾರರ ಸುದ್ದಿಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ಈತನನ್ನು ಮಕ್ಕಳ ಕಳ್ಳನೆಂದೆ ಬಗೆದು ಪೋಲಿಸ್ ಠಾಣೆಯ ಮುಂದೆ ಜಮಾಯಿಸಿ ಆತನನ್ನು ತಮಗೊಪ್ಪಿಸುವಂತೆ ಇಲ್ಲವೇ ಸರಿಯಾಗಿ ಆತನ ವಿಚಾರಣೆ ಮಾಡುವಂತೆ ಒತ್ತಾಯಿಸಿದರು.
ಠಾಣೆಯ ಮುಂದೆ ಜಮಾಯಿಸಿದ್ದ ನೂರಾರು ಮಂದಿಯನ್ನು ನಿಭಾಯಿಸುವಷ್ಟರಲ್ಲಿ ಪೋಲಿಸರು ಹೈರಾಣಾದರು.ಇದೇ ವೇಳೆ ಜಮಾಯಿಸಿದ್ದ ಮಹೆಳೆಯರು ಮಕ್ಕಳ ಅಪಹರಣಕಾರರನ್ನು ಪೋಲಿಸರು ಶಿಕ್ಷಿಸದೆ ರಕ್ಷಿಸುತ್ತಿದ್ದಾರೆಂದು ಆರೋಪಿಸಿದರು.
ಸಧ್ಯ ನಡೆದ ವಿಚಾರಣೆ ವೇಳೆಯಲ್ಲಿ ಈತ ಸಿಂಗಾಪುರ ಗ್ರಾಮದವನಾಗಿದ್ದು ಬುದ್ದಿಮಾಂದ್ಯನೆಂದು ತಿಳಿದುಬಂದಿದ್ದು ಇದನ್ನೊಪ್ಪದ ಸಾರ್ವಜನಿಕರು ಪೋಲಿಸರು ಕ್ರಮ ಕೈಗೊಳ್ಳದೆ ಬಿಟ್ಟುಕಳುಹಿಸಲು ಈ ರೀತಿ ಹೇಳುತ್ತಿದ್ದಾರೆಂದು ಆರೋಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ