ಹುಳಿಯಾರು ಹೋಬಳಿ ಭಟ್ಟರಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. |
ವಿದ್ಯುತ್ ತಂತಿ ತುಳಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ಭಟ್ಟರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತವ್ಯಕ್ತಿಯು ಭಟ್ಟರಹಳ್ಳಿ ವಾಸಿ ಶಿವಣ್ಣ (೫೦) ಎಂದು ಗುರುತಿಸಲಾಗಿದೆ. ಈತ ತಮ್ಮ ತೆಂಗಿನ ತೋಟಕ್ಕೆ ನಡೆದು ಹೋಗುತ್ತಿರುವಾಗ ಮಾರ್ಗಮಧ್ಯೆ ವಿದ್ಯುತ್ ಕಂಬದಿಂದ ಕೃಷಿ ಪಂಪಸೆಟ್‌ಗೆ ಎಳೆಯಲಾಗಿದ್ದ ಮೈನ್ಸ್ ವೈರ್ ಆಕಸ್ಮಿಕವಾಗಿ ಕಟ್ಟಾಗಿ ಬಿದ್ದಿದೆ. ಇದನ್ನು ಗಮನಿಸದ ಶಿವಣ್ಣ ವಿದ್ಯುತ್‌ನ ಮೈನ್ಸ್ ವೈರ್ ತುಳಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬೆಸ್ಕಾಂನ ಎ.ಇ.ಇ. ರಾಜಶೇಖರ್ ಹಾಗೂ ಹುಳಿಯಾರು ಪೊಲೀಸ್ ಸ್ಥಳಕ್ಕೆ ತೆರಳಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಎಪಿಎಂಸಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಅಶೋಕ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ