ಪಟ್ಟಣದಲ್ಲಿ ಮಂಗಳೂರು– ವಿಶಾಖಪಟ್ಟಣ ಹಾಗೂ ಬೀದರ್– ಶ್ರೀರಂಪಟ್ಟಣ ಎರಡು ರಾ.ಹೆದ್ದಾರಿ ಹಾದುಹೋಗಲಿದ್ದು ರಸ್ತೆ ವಿಸ್ತರಣೆಯಿಂದ ಮನೆ ಅಂಗಡಿಮುಂಗಟ್ಟುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು ಅನಗತ್ಯ ಭಯ ಆತಂಕ ಬೇಡ ಎಂದು ಶಾಸಕ ಸಿ.ಬಿ..ಸುರೇಶ್ ಬಾಬು ಮನವಿ ಮಾಡಿದರು.
ಹುಳಿಯಾರಿನ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಹೆದ್ದಾರಿ ಬಗ್ಗೆ ಕರೆಯಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಹುಳಿಯಾರಿನಲ್ಲಿ ಹಾದುಹೋಗುವ ರಾ.ಹೆದ್ದಾರಿ ಸಾಧಕ ಭಾದಕ ಕುರಿತಂತೆ ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿದರು. |
ಈಗಾಗಲೆ ಪಟ್ಟಣದಲ್ಲಿ ಕಳೆದ ಹಲವಾರು ದಿನಗಳಿಂದ ಹೆದ್ದಾರಿ ವಿಸ್ತರಣೆ ಬಗ್ಗೆ ಎದ್ದಿರುವ ಉಹಾಪೋಹಗಳು ನನ್ನ ಗಮನಕ್ಕೆ ಬಂದಿದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹೆದ್ದಾರಿ ಅಧಿಕಾರಿಗಳನ್ನು ನಿಮ್ಮ ಸ್ಥಳಕ್ಕೆ ಕರೆದುಕೊಂಡು ಬಂದಿದ್ದು ರಸ್ತೆ ಅಗಲೀಕರಣದ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.
ರಾಷ್ಟೀಯ ಹೆದ್ದಾರಿ ಅಗಲೀಕರಣ ಕುರಿತು ರಾ.ಹೆ.ಪ್ರಾಧಿಕಾರದ ತುಮಕೂರು ವಿಭಾಗದ ಎಇಇ ಶಿವಕುಮಾರ್ ಮಾಹಿತಿ ನೀಡಿ ಹುಳಿಯಾರು ಪಟ್ಟಣ ಬಳಸಿಕೊಂಡು ಎರಡು ರಾಷ್ಟ್ರೀಯ ಹೆದ್ದಾರಿ ಹಾದುಹೋಗಲಿದ್ದು ಹೆದ್ದಾರಿ ಸಂಖ್ಯೆ ೧೫೦ ಎ ಜೇವರ್ಗಿ ಯಿಂದ ಶ್ರೀರಂಗಪಟ್ಟಣಕ್ಕೆ ಹೋಗುವ ರಾಷ್ಟೀಯ ಹೆದ್ದಾರಿಯಾಗಿದ್ದು ಸದ್ಯ ಇದು ರಾಜ್ಯದ ಅತಿ ಉದ್ದದ ರಸ್ತೆಯಾಗಿದೆ. ಅಷ್ಠಪಥದ ರಸ್ತೆ ನಿರ್ಮಿಸಲು ಸರ್ವೆ ಕಾರ್ಯ ಆರಂಭವಾಗಿದ್ದು ಗ್ರಾಮಗಳಲ್ಲಿ ಹಾದುಹೋಗುವ ರಸ್ತೆ ನಿರ್ಮಾಣಮಾಡುವಾಗ ಸಾರ್ವಜನಿಕರಿಗೆ ಹೆಚ್ಚಿನ ಹಾನಿಯಾಗದಂತೆ ರೂಪುರೇಷೆ ಸಿದ್ದಪಡಿಸಲಾಗಿದೆ ಎಂದರು.ಪಟ್ಟಣ ಪ್ರದೇಶದಲ್ಲಿ ರಸ್ತೆ ಮದ್ಯದಿಂದ ೨೨.೫೦ ಮೀಟರ್ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಮಧ್ಯದಿಂದ ೪೦ಮೀ ರೋಡ್ ಮಾರ್ಜಿನ್ ಕಾಪಾಡಿಕೊಳ್ಳಿ ಎಂದರು.
ಅದೇರೀತಿ ಮತ್ತೊಂದು ಹೆದ್ದಾರಿ ೨೩೪ ಕೂಡ ಪಟ್ಟಣದಲ್ಲಿ ಹಾದುಹೋಗಲಿದ್ದು ಅನಿವಾರ್ಯ ಕಾರಣಗಳಿಂದ ಕಾಮಗಾರಿ ಸ್ಥಗಿತವಾಗಿದೆ.ಬಾಣಾವಾರದಿಂದ ಶಿರಾವರೆಗೆ ಕಾಮಗಾರಿ ಬಾಕಿಯಿದ್ದು ಹುಳಿಯಾರಿನಿಂದ ಶಿರಾವರೆಗೆ ನಾಲ್ಕುಪಥದ ರಸ್ತೆಗೆ ೧೬೦ ಕೋಟಿಗೆ ಟೆಂಡರ್ ಪ್ರಕ್ರಿಯೆ ಬಾಕಿಯಿದೆ ಎಂದರು. ಸದ್ಯ ಗುಂಡಿಮುಚ್ಚುವ ಕಾರ್ಯಕ್ಕೆ ೧.೯೦ಕೋಟಿ ಹಣ ಬಿಡುಗಡೆಯಾಗಿದ್ದು ತ್ವರಿತವಾಗಿ ಗುಂಡಿಮುಚ್ಚುವ ಕಾರ್ಯ ಕೈಗೊಳ್ಳಲಾಗುವುದೆಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಗಣೇಶ್, ಜಬೀಸಾಬ್, ಅಶೋಕ್ ಬಾಬು,ದಯಾನಂದ್,ತಾಪಂ ಸದಸ್ಯೆ ಬೀಬಿ ಫಾತೀಮಾ,ಜಹೀರ್ ಸಾಬ್,ರಾಘವೇಂದ್ರ,ಪುಟ್ಟಿಬಾಯಿ, ಹೇಮಂತ,ಬಡಗಿರಾಮಣ್ಣ ,ಜೆಡಿಎಸ್ ಯುವ ಘಟಕದ ಗೌಡಿ,ಸಮಗ್ರ ಅಭಿವೃದ್ದಿ ಫೋರಂ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರು,ಸಾರ್ವಜನಿಕರು ಪಾಲ್ಗೊಂಡಿದ್ದರು.
------------------------
ಪಟ್ಟಣದಲ್ಲಿ ಎರಡು ಹೆದ್ದಾರಿ ಹಾದು ಹೋಗುವುದರ ಪರಿಣಾಮ ರಸ್ತೆಯ ಒತ್ತಡ ತಪ್ಪಿಸಲು ೧೫೦ ಎ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದ್ದು ಬೈಪಾಸ್ ರಸ್ತೆ ಬಳ್ಳೆಕಟ್ಟೆಯಿಂದ ಕೆಂಕೆರೆವರೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ .ಅಲ್ಲದೆ ಬೈಪಾಸ್ ರಸ್ತೆ ನಿರ್ಮಿಸುವಾಗ ಕೂಡ ರೈತರ ಜಮೀನು ಮನೆಗಳಿಗೆ ಹಾನಿಯಾಗದಂತೆ ಸರ್ಕಾರಿ ಜಾಗದಲ್ಲೆ ನಿರ್ಮಿಸುವಂತೆ ಕ್ರಮಕೈಗೊಳ್ಳಲಾಗುವುದು.ಹಾಗಾಗಿ ರೈತಾಪಿ ಜನರು ಕೂಡ ಅನಗತ್ಯ ಭೀತಿ ಹೊಂದುವುದು ಬೇಡ :ಶಾಸಕ ಸಿ.ಬಿ.ಸುರೇಶ್ ಬಾಬು
---------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ