ತಾಲ್ಲೂಕ್ ಮಟ್ಟಕ್ಕೆ ಸರಿಸಮಾನಾಗಿರುವ ಹುಳಿಯಾರಿನ ಅಭಿವೃದ್ಧಿಗೆ ತಾವು ಹೆಚ್ಚು ಒತ್ತು ನೀಡಿದ್ದು ಅಗತ್ಯ ಸೌಲಭ್ಯ ಒದಗಿಸಲು ತಾವು ಬದ್ದವಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ನುಡಿದರು.
ಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಬೆಂಗಳೂರಿನ ಪೆಂಟಾಪ್ಯೂರ್ ಕಂಪನಿ ಹಾಗೂ ಗ್ರಾಪಂ ಸಂಯುಕ್ತಾಶ್ರಯಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹುಳಿಯಾರಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು.ಜಿಪಂ ಸದಸ್ಯೆ ಮಂಜುಳಮ್ಮ,ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಮ್ಮ,ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ಉಪಾಧ್ಯಕ್ಷ ಗಣೇಶ್,ವಾರ್ಡ್ ಸದಸ್ಯ ಧನುಷ್ ರಂಗನಾಥ್,ದಯಾನಂದ್ ಚಿತ್ರದಲ್ಲಿದ್ದಾರೆ.
|
ಹುಳಿಯಾರು ಭಾಗದಲ್ಲಿ ನೀರಿನ ಸಮಸ್ಯೆ ತೀವ್ರತರವಾಗಿದ್ದು ಇಲ್ಲಿ ದೊರೆಕುವ ನೀರಿನ ಟಿಡಿಎಸ್ ಗರಿಷ್ಟ ಮಟ್ಟಮುಟ್ಟಿದ್ದು ಫ್ಲೋರೈಡ್‌ಯುಕ್ತ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಇಲ್ಲಿನ ಜನರಿಗೆ ಶುದ್ದ ಕುಡಿಯುವ ನೀರು ಕೊಡಲು ಸಂಕಲ್ಪಮಾಡಿದ ಫಲವಾಗಿ ಇಂದು ಎರಡು ರೂಪಾಯಿಗೆ ಹತ್ತು ಲೀಟರ್ ನೀರು ಕೊಡುವ ಈ ಘಟಕಕ್ಕೆ ಚಾಲನೆ ನೀಡಲಾಗಿದೆ.ಈ ಘಟಕದ ನೀರು ಸುರಕ್ಷಿತವಾಗಿದ್ದು ಅತಿ ಕಡಿಮೆ ದರಕ್ಕೆ ನೀರು ಸಿಗುವ ಜತೆಗೆ ಶುದ್ಧ ನೀರಿನಿಂದ ಜನರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.ಈ ನೀರೀನ ಘಟಕದಿಂದ ಎಲ್ಲರೂ ಅನುಕೂಲ ಹೊಂದಬೇಕೆಂದರು.
ತಾಲ್ಲೂಕಿನಲ್ಲಿ ಒಟ್ಟು ೪೮ ನೀರಿನ ಘಟಕಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯಿಂದ ಮಂಜೂರಾತಿ ಪಡೆಯಲಾಗಿದ್ದು ಹುಳಿಯಾರಿನ ಜನ ಸಾಂದ್ರತೆಗೆ ಅನುಗುಣವಾಗಿ ಇಂತಹ ಮತ್ತೆರಡು ಘಟಕವನ್ನು ಎಪಿಎಂಸಿ ಭಾಗದಲ್ಲಿ ಹಾಗೂ ವಾಸವಿ ಶಾಲೆ ಬಳಿ ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
ಈ ಘಟಕದ ನಿರ್ವಹಣೆಯನ್ನು ಮುಂದಿನ ಏಳು ವರ್ಷಗಳ ಕಾಲ ಪೆಂಟಾಪ್ಯೂರ್ ಕಂಪನಿಯೇ ನಿಭಾಯಿಸಲಿದ್ದು ಗ್ರಾಮ ಪಂಚಾಯ್ತಿಯವರೂ ಸಹ ಸದಸ್ಯರನೊಳಗೊಂದ ಸಮಿತಿ ರಚಿಸಿಕೊಂಡು ಜನರಿಗೆ ತೊಂದರೆಯಾಗದ ರೀತಿ ಇದನ್ನು ನಿಭಾಯಿಸಬೇಕೆಂದರು.
ಗ್ರಾಮೀಣ ಕುಡಿಯುವ ನೀರು ಇಲಾಖೆಯ ಶಿವಾನಂದ್ ಮಾತನಾಡಿ ನೀರಿನ ಸಮಸ್ಯೆ ನಿವಾರಿಸಲು ಕಳೆದೆರಡು ತಿಂಗಳಿನಿಂದ ಹುಳಿಯಾರಿನಲ್ಲಿ ಹನ್ನೆರಡು ಕೊಳವೆ ಬಾವಿಗಳನ್ನು ಕೊರಯಲಾಗಿದೆ.ಪ್ರತಿ ಕೊಳವೆ ಬಾವಿಯಲ್ಲೂ ನೀರಿನ ಟಿಡಿಎಸ್ ಹೆಚ್ಚಿದ್ದು ಶುದ್ದುಕುಡಿಯುವ ನೀರು ಒದಗಿಸಬೇಕೆಂಬ ಹಿನ್ನಲೆಯಲ್ಲಿ ಈ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದರು.
ಜಿಪಂ ಸದಸ್ಯೆ ಮಂಜುಳಮ್ಮ,ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷೆ ಯಳನಾಡು ಜಯಲಕ್ಷ್ಮಮ್ಮ,ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ವಾರ್ಡ್ ಸದಸ್ಯ ಧನುಷ್ ರಂಗನಾಥ್,ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಶ್ಪಟಾಕಿ ಶಿವಣ್ಣ,ಕಲಾವಿದ ಗೌಡಿ ಮಾತನಾಡಿದರು.
ಉಪಾಧ್ಯಕ್ಷ ಗಣೇಶ್,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್, ಗ್ರಾಪಂ ಸದಸ್ಯರುಗಳಾದ ಶಂಕರ್,ದಯಾನಂದ್,ರಾಘವೇಂದ್ರ,ಸಿದ್ದಗಂಗಮ್ಮ,ಕೋಳಿ ಶ್ರೀನಿವಾಸ್,ಹೇಮಂತ್ ಕುಮಾರ್,ಗೀತಾ ಅಶೋಕ್ ಬಾಬು,ಕೆಂಪಮ್ಮ, ಪುಟ್ಟಮ್ಮ, ಶಶಿಕಲಾ ಸೇರಿದಂತೆ ಎಲ್ಲಾಸದಸ್ಯರುಗಳು ಉಪಸ್ಥಿತರಿದ್ದರು.
--------------------------------
ಹುಳಿಯಾರನ್ನು ಶೀಘ್ರ ಪಟ್ಟಣ ಪಂಚಾಯ್ತಿಯನ್ನಾಗಿ ಮಾಡಲು ತಾವು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಮತನಾಡಿದ್ದು ಸರ್ಕಾರ ಪಂಚಾಯ್ತಿಗಳ ಪುನರ್ ರಚನೆಗೆ ಮುಂದಾದಾಗ ಹುಳಿಯಾರು ಹೆಸರು ಮೊದಲೆಯದಾಗಿ ಪಟ್ಟಿಯಲ್ಲಿರುತ್ತದೆ.ಈ ಬಗ್ಗೆ ಸಂಶಯವೇ ಬೇಡ : ಶಾಸಕ ಸುರೇಶ್ ಬಾಬು
-------------------------------------
ಶಿಷ್ಟಾಚಾರ ಉಲ್ಲಂಘನೆ: ಇಂದು ನಡೆದ ಶುದ್ಧ ಕುಡಿಯುವ ನೀರಿನ ಘಟಕಕ್ಕೆಉದ್ಘಾಟನ ಸಮಾರಂಭವು ಸರ್ಕಾರಿ ಕಾರ್ಯಕ್ರಮವಾಗಿದ್ದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ರುದ್ರಮುನಿಯವರು ಈ ಬಗ್ಗೆ ಆಹ್ವಾನ ಪತ್ರಿಕೆಯನ್ನು ಮುದ್ರಿಸದೆ ,ಜಿಲ್ಲಾ ಸಚಿವರಿಗೂ,ಸಂಸದರಿಗೂ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.ಈ ಬಗ್ಗೆ ಇಲಾಖೆಗೆ ದೂರು ಸಲ್ಲಿಸುವೆ:ಕಾಂಗ್ರೆಸ್ ವಕ್ತಾರ ಪ್ರಸನ್ನ ಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ