ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ತಡಪಾಲುಗಳನ್ನು ವಿತರಿಸಲಾಗುತ್ತಿದೆ ಎಂದರಿತ ರೈತರು ಕೊಳ್ಳಲು ನಾಮುಂದು ತಾಮುಂದು ಎಂದು ಜಮಾಯಿಸಿದ್ದರಿಂದ ಗೊಂದಲವುಂಟಾಗಿ ಕೊನೆಗೆ ಲಾಟರಿ ಮೂಲಕ ವಿತರಿಸಿದ ಪ್ರಸಂಗ ಸೋಮವಾರ ನಡೆಯಿತು.
ಪ್ರತಿ ಬಾರಿಯಂತೆ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ 168 ತಡಪಾಲುಗಳು ಬಂದಿದ್ದವು. ಟಾರ್ಪಲ್ ಪಡೆಯಲು ರೈತರು ಪಹಣಿ ಪತ್ರ,ಮತದಾನದಗುರುತಿನ ಚೀಟಿ,ಭಾವಚಿತ್ರ ಹಾಗೂ ಜಾತಿ ಪ್ರಮಾಣ ಪತ್ರ ಹಿಡಿದು ಬೆಳಗ್ಗಿನಿಂದಲೆ ರೈತ ಸಂಪರ್ಕ ಕೇಂದ್ರದ ಮುಂದೆ ಸರದಿ ಸಾಲಿನಲ್ಲಿ ನಿಂತು.ಕಾಯುತ್ತಿದ್ದರು.ಆದರೆ ಅವುಗಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು ಗೊಂದಲಕ್ಕೆ ಕಾರಣವಾಯಿತು.
ಹುಳಿಯಾರಿನ ರೈತ ಸಂಪರ್ಕ ಕೇಂದ್ರದ ಮುಂದೆ ತಡಪಾಲು ಕೊಳ್ಳಲು ಮುಗಿಬಿದ್ದಿದ್ದ ರೈತರು |
ಪರಿಶಿಷ್ಟ ಜಾತಿ ಕೋಟಾದಡಿ ಸುಮಾರು 20 ತಡಪಾಲುಗಳನ್ನು ವಿತರಿಸಿದ ನಂತರ ಇನ್ನು ಕೇವಲ 12 ಮಾತ್ರ ಇದ್ದು ಮತ್ತಿನ್ಯಾವಗಲೊ ಬರುವುದು ಎಂದರಿತ ರೈತರು ಸರದಿ ಸಾಲು ಬಿಟ್ಟು ಒಂದೇ ಬಾರಿ ನಮಗೆ ನಮಗೆ ಎಂದು ಮುಗಿಬಿದ್ದರು. ಸ್ಥಳದಲ್ಲಿದ್ದ ಸಹಾಯಕ ಕೃಷಿ ಅಧಿಕಾರಿ ಕರಿಬಸವಯ್ಯ ಕೇವಲ 168 ತಡಪಾಲುಗಳು ಬಂದಿದ್ದು ಅವುಗಳಲ್ಲಿ ಪರಿಶಿಷ್ಟ ಜಾತಿಗೆ 32, ಪರಿಶಿಸಷ್ಟ ಪಂಗಡಕ್ಕೆ 18 ಹಾಗೂ ಸಾಮಾನ್ಯ ವರ್ಗಕ್ಕೆ 118 ಮೀಸಲಿವೆ ಎಂದು ತಿಳಿ ಹೇಳಿದರೂ ಒಪ್ಪದ ಕೆಲ ರೈತರು ಪಂಚಾಯಿತಿವಾರು ವಿತರಣೆ ಮಾಡಿ ಎಂದು ಪಟ್ಟು ಹಿಡಿದರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಆ ರೀತಿ ಮಾಡಲು ಸಾಧ್ಯವಿಲ್ಲ .ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಸಾಮಾನ್ಯ ವರ್ಗದವರನ್ನು ಲಾಟರಿ ಮೂಲಕ ಆಯ್ಕೆ ಮಾಡಿ ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿಗಳಾದ ನೂರುಲ್ಲಾ, ತಿಪ್ಪೇಸ್ವಾಮಿ ಘೋಷಿಸಿದರು. ರೈತರ ಒಪ್ಪಿಗೆ ಪಡೆದು ಲಾಟರಿ ಮೂಲಕ ಆಯ್ಕೆ ಮಾಡಿ ವಿತರಿಸಲಾಯಿತು.
––––––––––––––––––––––––––––––––––––––––––
ಟಾರ್ಪಾಲ್ ವರ್ಷದಲ್ಲಿ ಸಾಕಷ್ಟು ಬಾರಿ ಬರುವುದರಿಂದ ರೈತರು ಮುಗಿ ಬಿದ್ದು ಪಡೆಯುವ ಅವಶ್ಯಕತೆ ಇಲ್ಲ.ಎಲ್ಲಾ ರೈತರಿಗೂ ಲಭ್ಯವಿದ್ದು ಕಾಯಬೇಕಷ್ಟೆ. ಒಮ್ಮೆ ಕೊಟ್ಟವರಿಗೆ ಮತ್ತೊಮ್ಮೆ ಕೊಡುವುದಿಲ್ಲ .ಹಾಗಾಗಿ ಮುಂದಿನ ಬಾರಿ ಉಳಿದ ರೈತರು ಪಡೆಯಬಹುದು : ಹೊನ್ನದಾಸೇಗೌಡ , ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ, ಚಿಕ್ಕನಾಯಕನಹಳ್ಳಿ
---------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ