ಹುಳಿಯಾರು ಹೋಬಳಿ ದಬ್ಬಗುಂಟೆ ಗ್ರಾಮದಲ್ಲಿ ಕಾಲು ಬಾಯಿ ಲಸಿಕೆ ಕಾರ್ಯಕ್ರಮಕ್ಕೆ ದಸೂಡಿ ಗ್ರಾ.ಪಂ. ಮಾಜಿ ಅ‘್ಯಕ್ಷ ದಬ್ಬಗುಂಟೆ ರವಿಕುಮಾರ್ ಚಾಲನೆ ನೀಡಿದರು.
ಇಂದು ಹೈನುಗಾರಿಕೆ ಲಾಭದಾಯಕವಾಗಿದ್ದು ರಾಸುಗಳನ್ನು ಸಾಕುವುದು ಉದ್ಯಮವಾಗಿ ಮಾರ್ಪಟ್ಟಿದೆ.ಉತ್ತಮ ಹಸುಗಳನ್ನು ಸಾಕಿ ಅವುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಪೋಷಿಸಿದಲ್ಲಿ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದರು.
ರೈತರು ರಾಸುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತಾಳಿದಲ್ಲಿ ರೋಗ ಉಲ್ಬಣವಾಗಿ ಸಾವನ್ನಪ್ಪಿದಾಗ ಜೀವನ ನಡೆಸಲಾಗದೆ ಪಶ್ಚಾತ್ತಾಪಪಡುವಂತಾಗುತ್ತದೆ. ಹಾಗಾಗಿ ಕೇವಲ ಹಾಲು ಕರೆಯುವಾಗ ಮಾತ್ರವಲ್ಲದೆ ಮೇವು ತಿನ್ನಿಸುವಾಗ, ನೀರು ಕುಡಿಸುವಾಗ ಸೇರಿದಂತೆ ಆಗಾಗ ಅದರ ಮೈ ಸವರುವ, ದೇಹದಲ್ಲಾಗುವ ಬದಲಾವಣೆ ಗಮನಿಸುವ ಮೂಲಕ ಅನಾರೋಗ್ಯದ ಬಗ್ಗೆ ಸುಳಿವು ಅರಿವು ತಕ್ಷಣ ಚಿಕಿತ್ಸೆ ಕೊಡಿಸುವುದನ್ನು ರೂಢಿಸಿಕೊಂಡರೆ ಒಳಿತು ಎಂದರು.
ದಬ್ಬಗುಂಟೆ ಪ್ರಾಥಮಿಕ ಪಶು ಚಿಕಿತ್ಸಾಲಯದ ಎಲ್.ರವೀಂದ್ರ ಅವರು ಮಾತನಾಡಿ ಲಸಿಕೆ ಹಾಕುವುದರಿಂದ ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿ ಆರೋಗ್ಯಕರವಾಗಿರಲು ಸಹಕಾರಿಯಾಗುತ್ತದೆ. ರೈತರು ತಮ್ಮ ರಾಸುಗಳ ಬಗ್ಗೆ ಗಮನ ನೀಡಬೇಕು, ಕಾಲುಬಾಯಿ ರೋಗ ಗಾಳಿ ಮುಖಾಂತರ ಹರಡುತ್ತದೆ, ಹಾಗಾಗಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು, ಕ್ರಿಮಿನಾಶಕ ದ್ರಾವಣ ಸಿಂಪಡಿಸುವುದು, ಮೃದು ಆಹಾರವಾದ ಗಂಜಿ, ಬಾಳೆಹಣ್ಣು, ರಾಗಿ ಅಂಬಲಿ ತಿನ್ನಿಸುವುದು, ರಾಸುಗಳ ಮುಂಜಾಗ್ರತಾ ಕ್ರಮವಾಗಿ ಪ್ರತಿ ಆರು ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ತಪ್ಪದೆ ಲಸಿಕೆ ಹಾಕಬೇಕೆಂದರು.
ಚಿ.ನಾ.ಹಳ್ಳಿ ಪಶುವೈದ್ಯ ಎಲ್.ಭರತ್, ಡಾ.ಕಾಂತರಾಜು, ಡಾ.ನಾಗರಾಜು ಹಾಲಿನ ಡೈರಿ ಕಾರ್ಯದರ್ಶಿ ಧನಂಜಯ ಮತ್ತಿತರರು ಇದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ