ಪಶ್ಚಿಮಘಟ್ಟ ಉಳಿಸಿ ಅಭಿಯಾನ,ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಹಾಗೂ ಹುಳಿಯಾರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಅಪ್ಪಿಕೋ ೩೨ ,ಎಂಟನೇ ವರ್ಷದ ಸಹ್ಯಾದ್ರಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಹುಳಿಯಾರಿನ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕುವೆಂಪು ವಿವಿಯ ಪ್ರೊ .ಬಿ.ಬಿ.ಹೊರಟ್ಟಿ ಉದ್ಘಾಟಿಸಲಿದ್ದು ಬಯಲು ಸೀಮೆಯಲ್ಲಿ ನೀರಿನ ಸುಸ್ಥಿರ ಬಳಕೆ ಬಗ್ಗೆ ಮಳೆಕೊಯ್ಲು ತಜ್ಞರಾದ ವಿಶ್ವನಾಥ್ ಮಾಹಿತಿ ನೀಡಲಿದ್ದಾರೆ.
ಸಂತೆಕಡೂರು ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಎ.ಎಸ್.ಚಂದ್ರಶೇಖರ್,ಪ್ರೊ ಎನ್.ಇಂದಿರಮ್ಮ,ಶ್ರೀಕಾಂತ್ ಅನಗೊಂಡನಹಳ್ಳಿ,ಮುರಳಿಧರ ಗುಂಗುರುಮಳೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಅಧ್ಯಕ್ಷತೆ ವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಪ್ಪಿಕೋ ಚಳುವಳಿಯ ಕಾರ್ಯಕರ್ತ ಶಿರಸಿಯ ಪಾಂಡುರಂಗ ಹೆಗ್ಗಡೆ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ