ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲು ಹುಳಿಯಾರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಶ್ರೀಮತಿ ಹೆಚ್.ಎಸ್.ಗೀತಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮುಂಜಾನೆ ೧೧ ಗಂಟೆಗೆ ಗ್ರಾಮ ಸಭೆ ಕರೆಯಲಾಗಿದೆ.ಈಗಾಗಲೆ ಆಯಾ ವಾರ್ಡ್ ಗಳಲ್ಲಿ ಸಭೆಗಳ ಮೂಲಕ ಆರ್ಜಿ ಸ್ವೀಕರಿಸಲಾಗಿದ್ದು ಫಲಾನುಭವಿಗಳ ಅಂತಿಮ ಆಯ್ಕೆಯಷ್ಟೆ ಬಾಕಿಯಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಜಯಚಂದ್ರ,ಸಂಸದ ಮುದ್ದಹನುಮೇಗೌಡ,ಶಾಸಕ ಸುರೇಶ್ ಬಾಬು,ತಾಪಂ ಅಧ್ಯಕ್ಷೆ ಜಯಲಕ್ಷ್ಮಿ,ಉಪಾಧ್ಯಕ್ಷ ನಿರಂಜನಮೂರ್ತಿ,ಜಿಪಂ ಸದಸ್ಯೆ ಮಂಜುಳಾ,ತಾಪಂ ಸದಸ್ಯರಾದ ಬೀಬಿ ಫಾತೀಮಾ,ನವೀನ್,ಗ್ರಾಪಂ ಉಪಾಧ್ಯಕ್ಷ ಗಣೇಶ್,ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಆಗಮಿಸಲಿದ್ದಾರೆ.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ