ಹುಳಿಯಾರು: ರೈತ ಸಂಘದ ಪುನರ್ ರಚನೆ ನಡೆದು ಹೋಬಳಿ ಘಟಕದ ನೂತನ ಅಧ್ಯಕ್ಷರ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷರಾದ ಚಂದ್ರಣ್ಣ ಮತ್ತು ಜಯಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಹೋಬಳಿ ಅಧ್ಯಕ್ಷರಾಗಿ ಎನ್. ಬಸವರಾಜು, ಉಪಾಧ್ಯಕ್ಷರಾಗಿ ಎಚ್. ಕೆ.ರಾಜಶೇಖರಯ್ಯ, ಕಾರ್ಯದರ್ಶಿಯಾಗಿ ಗೋಪಿನಾಯ್ಕ, ಪ್ರಧಾನ ಸಂಘಟನಾ ಸಂಚಾಲಕರಾಗಿ ರಂಗನಾಥ, ಸಂಚಾಲಕರಾದ ಕೆ.ಎಸ್.ಮೋಹನ್ ಕುಮಾರ್, ಕರಿಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಘಟಕದ ಅಧ್ಯಕ್ಷರಾಗಿ ಬಸವರಾಜು, ಪೊಚಕಟ್ಟೆ ಅಧ್ಯಕ್ಷ ನಾರಾಯಣಪ್ಪ, ಪದಾಧಿಕಾರಿಗಳಾದ ಹೊಸಳ್ಳಿ ಪಾಳ್ಯ ಗಂಗಣ್ಣ, ನಂದಿಹಳ್ಳಿ ಹನುಮಂತಯ್ಯ, ಜಯಣ್ಣ, ಎನ್.ಬಿ. ರಮೇಶ್, ಎಸ್‌ಎಂಪಿ ಲೋಕೇಶ್, ಬಳ್ಳೆಕಟ್ಟೆ ನಾಗಣ್ಣ, ಜಮಿವುಲ್ಲಾ, ಅಬೂಬ್‌ಖಾನ್, ಮಹಮದ್‌ಜಿಲಾನ್ ಮತ್ತಿತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ