ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಚೆಕ್ ವಿತರಣೆ

ಹುಳಿಯಾರು ಹೋಬಳಿ ವ್ಯಾಪ್ತಿಯ ಹೊಯ್ಸಳಕಟ್ಟೆ,ದಸೂಡಿ,ಗಾಣದಾಳು,ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಒಂದು ಲಕ್ಷದ ಇಪ್ಪತೈದು ಸಾವಿರ ಧನ ಸಹಾಯ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ನೀಡಲಾಗಿದೆ ಎಂದು ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ತಿಳಿಸಿದರು ಅವರು ಹೊಯ್ಸಳಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ನೀಡಿ ಮಾತನಾಡಿದರು. ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ನೀಡಿದರು. ಸಂಸ್ಥೆಯು ಗ್ರಾಮೀಣ ಭಾಗದ ಬಡ ಜನರ ಆರ್ಥಿಕ ಸಬಲತೆಗೆ ಹೆಚ್ಚು ಶ್ರಮಿಸುತ್ತಿದ್ದು,ಗ್ರಾಮದಲ್ಲಿ ಹತ್ತು ಜನರ ಗುಂಪು ರಚಿಸಿಕೊಂಡು ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆಯಬಹುದು ಎಂದು ಸಲಹೆ ನೀಡಿದರು.ಹೊಯ್ಸಳಕಟ್ಟೆಯಲ್ಲಿ ಇನ್ನೊಂದು ವಾರದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಘಾಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ದಾನಿ ರಾಮದಾಸಪ್ಪ, ಹಾ.ಉ.ಸ.ಸ.ಅಧ್ಯಕ್ಷ ಜಯಲಿಂಗರಾಜು,ಕಾರ್ಯದರ್ಶಿ ಚಿದಾನಂದ್ , ಪಿಡಿಒ ರಮೇಶ್ ,ಶಿಕ್ಷಕ ವದ್ದಿಗಯ್ಯ, ಪ್ರಗತಿ ಬಂಧು ಒಕ್ಕೂಟ

ದಸೂಡಿಯ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ಜಾತ್ರೆ

ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ಶ್ರೀ ಕ್ಷೇತ್ರ ಮಲಕಾಪುರದಲ್ಲಿ ನೂತನ ವರ್ಷವಾದ ಜನವರಿ ಒಂದರಂದು ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವ ಜರುಗಲಿದೆ.ಮುಂಜಾನೆಯಿಂದ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು ಮಹಾಮಂಗಳಾರತಿ ನಂತರ ಪ್ರಸಾದವಿನಿಯೋಗ ನಡೆಯಲಿದೆ. ಆ ನಂತರ ದೇವಸ್ಥಾನದ ಸ್ಥಳ ಪುರಾಣ,ಕ್ಷೇತ್ರದ ಮಾಹಿತಿ, ಮುಂತಾದ ವಿವರವುಳ್ಳ ಸಾಮಾಜಿಕ ಜಾಲತಾಣಕ್ ಹಾಗೂ ವೆಬ್ ಸೈಟ್ಗೆ ಚಾಲನೇ ನೀಡಲಾಗುವುದು. ಸ್ಥಳ ಮಹಿಮೆ: ಶ್ರೀ ಕ್ಷೇತ್ರ ದಸೂಡಿ ಗ್ರಾಮದಿಂದ 3 ಮೈಲಿಗಳ ದೂರದಲ್ಲಿರುವ ಮಲಕಾಪುರ ಕ್ಷೇತ್ರವು ಭವ್ಯವಾದ ಇತಿಹಾಸವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ.ಹಿರಿಯರು ಹೇಳುವ ಪ್ರಕಾರ ರಾಮಾಯಣದಲ್ಲಿ ಬರುವ ಶ್ರೀ ರಾಮಚಂದ್ರನು ರಾವಣಾಸುರನನ್ನು ಸಂಹಾರ ಮಾಡಲು ತನಗೆ ಯುದ್ಧದಲ್ಲಿ ಸಹಾಯ ನೀಡಿದ್ದ ಸುಗ್ರೀವನಿಗೆ ಒಂದು ನೆಲೆಯನ್ನು ಸೂಚಿಸಲು ಈ ಬೆಟ್ಟದ ಮೇಲೆ ನಿಂತು ಬಾಣ ಹೂಡಿದನು ಎಂಬ ಪುರಾಣ ಐತಿಹ್ಯ ಈ ಜಾಗಕ್ಕಿದೆ. ಇಂತಹ ಪುರಾಣದ ಹಿನ್ನೆಲೆ ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ಶ್ರೀ ಮಲಕಾಪುರವು ಪುಣ್ಯಕ್ಷೇತ್ರದ ಜಾತ್ರೆಗೆ ಸಮಸ್ತರು ಆಗಮಿಸಿ ಸ್ವಾಮಿಯ ದರ್ಶನದೊಂದಿಗೆ ಕೃತಾರ್ಥರಾಗಬೇಕೆಂದು ಶ್ರೀ ಸೇನೆ, ದಸೂಡಿ ಸಮಿತಿಯವರು ಕೋರಿದ್ದಾರೆ.

ವಿದ್ಯಾವಾರಿಧಿಯಲ್ಲಿ ವಿಶ್ವಮಾನವ ದಿನಾಚರಣೆ

ಹುಳಿಯಾರು :ಪಟ್ಟಣದ ವಿದ್ಯಾವಾರಿಧಿಶಾಲೆಯಲ್ಲಿ ಜ್ಞಾನಪೀಠ ಪುರಷ್ಕೃತ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಮಕ್ಕಳಿಂದ ಕುವೆಂಪು ಅವರು ಬರೆದ ಗೀತೆಗಳ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಹುಳಿಯಾರಿನ ವಿದ್ಯಾವಾರಿಧಿಶಾಲೆಯಲ್ಲಿ ಮಂಗಳವಾರದಂದು ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್,ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಮಾತನಾಡಿ ಕುವೆಂಪುರವರು ಅಪೂರ್ವ ಲೇಖಕರಾಗಿದ್ದು ಅವರ ಕೃತಿಗಳು ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಕುವೆಂಪುರವರು ಮಾಡಿರುವ ಸಾಧನೆ ಅವಿಸ್ಮರಣೀಯವಾಗ್ಗಿದ್ದು ಅವರಾಗಲೀ, ಅವರ ಸಾಹಿತ್ಯವಾಗಲೀ ಜನಮಾನಸದಿಂದ ಮರೆಯಾಗಿಲ್ಲ. ಪಂಪ- ಕುಮಾರವ್ಯಾಸರಂತೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕುವೆಂಪುರವರ ಹೆಸರು ಮತ್ತು ಅವರು ನೀಡಿದ ಕೊಡುಗೆ ಚಿರಸ್ಥಾಯಿಯಾಗಿದೆ ಎಂದರು.  ಪ್ರಾಂಶುಪಾಲ ರವಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

ಹುಳಿಯಾರಿನಲ್ಲಿ ಜೆಡಿಎಸ್ ಗೆಲುವಿಗೆ ಸಂಭ್ರಮಾಚರಣೆ

ಹುಳಿಯಾರು:   ಸ್ಥಳಿಯ ಜೆಡಿಎಸ್ ಶಾಸಕ ಸುರೇಶ್ ಬಾಬುಗೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಗೆಲುವಿಗೆ ಪಕ್ಷದ ಮುಖಂಡರುಗಳು,ಕಾರ್ಯಕರ್ತರುಗಳು ಹಾಗೂ ಗ್ರಾಮಪಂಚಾಯ್ತಿ ಬಹುತೇಕ ಸದಸ್ಯರುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ತಾಲ್ಲೂಕ್ ಯುವ ಜೆಡಿಎಸ್ ಅಧ್ಯಕ್ಷ ಗೌಡಿ ಮಾತನಾಡಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಜೆಡಿಎಸ್ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ಮತ ಚಲಾವಣೆ ನಡೆದಿದ್ದು ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿರುವುದು ಸಂತಸ ತಂದಿದೆ ಎಂದರು. ಅಭಿಮಾನಿಗಳು ಪರಸ್ಪರ ಸಿಹಿ ಹಂಚಿದರು, ಕಾರ್ಯಕರ್ತರುಗಳು ಬೈಕ್ ಗಳಲ್ಲಿ ಪಟ್ಟಣದ ತುಂಬಾ ಸಂಚರಿಸಿ ಶಾಸಕ ಸುರೇಶ್ ಬಾಬು ಹಾಗೂ ಗೆದ್ದ ಬೆಮೆಲ್ ಕಾಂತರಾಜು ಪರ ಜಯಘೋಷ ಹಾಕಿ ಗೆಲುವಿಗೆ ಖಷಿಪಟ್ಟರು. ಸಂಭ್ರಮಾಚರಣೆಯಲ್ಲಿ ಜಿಪಂ ಸದಸ್ಯೆ ಮಂಜುಳಾ,ಗ್ರಾ.ಪಂ.ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ದಯಾನಂದ್,ಸಿದ್ದಗಂಗಮ್ಮ,ಗೀತಾ ಅಶೋಕ್ ಬಾಬು,ಬಾಲರಾಜು,ಅಹ್ಮದ್ ಖಾನ್,ಜಬೀಉಲ್ಲಾ ಇಮ್ರಾಜ್ ,ಶಿವನಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾಷೆ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ :ನಟರಾಜು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲೀಷು ನಿಘಂಟು ವಿತರಿಸಲಾಯಿತು. ಪ್ರಾಂಶುಪಾಲ ನಟರಾಜು ಹಾಗೂ ಉಪನ್ಯಾಸಕರುಗಳಾದ ಹೆಚ್.ಎಸ್.ನಾರಾಯಣ,ರಮೇಶ್,ರೇವಣ್ಣ,ಎನ್.ಕವಿತ ಇನ್ನಿತರರಿದ್ದರು.    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲೀಷ್ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ತಮ್ಮ ನಿತ್ಯಜೀವನದಲ್ಲಿ ಬಳಸುವಂತಾದಾಗ ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಟರಾಜು ಅಭಿಪ್ರಾಯಪಟ್ಟರು.    ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಹುಳಿಯಾರು ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲೀಷು ನಿಘಂಟು ವಿತರಿಸಿ ಅವರು ಮಾತನಾಡಿದರು.ನಿಘಂಟು ಇಂಗ್ಲೀಷ್ ಕಲಿಯುವವರಿಗೆ ಅನೇಕ ವಿವರವಾದ ಉದಾಹರಣೆಗಳು ಮತ್ತು ಆ ಮೂಲಕ ನಮ್ಮ ಭಾಷೆ ಮತ್ತು ವ್ಯಾಕರಣ ಕೌಶಲ್ಯ ಸುಧಾರಿಸಲು ಪರಿಪೂರ್ಣ ಸಾಧನವಾಗಿದೆ ಎಂದರು.       ಉಪನ್ಯಾಸಕರುಗಳಾದ ಹೆಚ್.ಎಸ್.ನಾರಾಯಣ,ರಮೇಶ್,ರೇವಣ್ಣ,ಎನ್.ಕವಿತ ಇನ್ನಿತರರಿದ್ದರು.

ಗುರುವಾರದಂದು ಹುಳಿಯಾರಿಗೆ ಮುಖ್ಯಮಂತ್ರಿ :ಸಿಂಗಾರಗೊಂಡ ಪಟ್ಟಣ

ವರದಿ: ಡಿ.ಆರ್.ನರೇಂದ್ರಬಾಬು ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು. ಹುಳಿಯಾರು : ಪರಿಷತ್ ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯನವರು ಇಂದು(ಗುರುವಾರ) ಪಟ್ಟಣಕ್ಕಾಗಮಿಸುತ್ತಿರುವ ಹಿನ್ನಲೆಯಲ್ಲಿ ಅವರು ಸಂಚರಿಸುವ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ತೇಪೆ ಹಚ್ಚಿ,ಕಸಕಡ್ಡಿ ತೆರವುಗೊಳಿಸಿ ಪಟ್ಟಣವನ್ನು ಸಿಂಗಾರಗೊಳಿಸಲಾಗಿದೆ.ಇದೇ ವೇಳೆ ರಸ್ತೆ ಗುಂಡಿಯ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದ ಲೋಕೋಪಯೋಗಿ ಇಲಾಖೆ ಇದೀಗ ಎಚ್ಚೆತ್ತು ಗುಂಡಿ ಮುಚ್ಚಲು ಮುಂದಾಗಿದ್ದು ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಕಳೆದೆರಡು ವರ್ಷಗಳಿಂದ ಅಪಘಾತಕ್ಕೆ ಕಾರಣವಾಗಿದ್ದ ಈ ರಸ್ತೆಗುಂಡಿ ಮುಚ್ಚಲು ನಡೆದ ಹೋರಾಟಗಳು ಸಫಲವಾಗದಿದ್ದು ಇದೀಗ ಮುಖ್ಯಮಂತ್ರಿಗಳ ಆಗಮನದ ಉದ್ದೇಶದಿಂದ ಗುಂಡಿಮುಕ್ತ ರಸ್ತೆಯಾಗಿಸಲು ಹೊರಟಿರುವ ಇಲಾಖೆಗೆ ಇದುವರೆಗೂ ಶ್ರೀಸಾಮಾನ್ಯರ ಸಾರ್ವಜನಿಕರ ಸಮಸ್ಯೆ ಕಾಡಿರಲಿಲ್ಲವೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬಂದಿದೆ. ಹುಳಿಯಾರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯ ಗುಂಡಿ ಮುಚ್ಚಿ ಡಾಂಬರೀಕರಣ ಮಾಡುತ್ತಿರುವುದು. ಹೌದು ಪಟ್ಟಣದಿಂದ ಹಾದುಹೋಗಿರುವ ಹೆದ್ದಾರಿಯ ಸಮಸ್ಯೆ ಇಂದುನಿನ್ನೆಯದಲ್ಲ.ಭಾರಿಗುಂಡಿಗಳಿಂದ ತುಂಬಿದ್ದ ಈ ರಸ್ತೆಯು ಬಳಸಲು ಯೋಗ್ಯವಾಗಿಲ್ಲದೆ ಇದಕ್ಕಾಗಿ ನಡೆ

ವಿ.ಪ ಚುನಾವಣೆ :ಪಕ್ಷೇತರ ಅಭ್ಯರ್ಥಿ ನಟರಾಜು ಪ್ರಚಾರ

ವಿಧಾನ ಪರಿಷತ್ ಚುನಾವಣೆ ತುಮಕೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಮಕೂರಿನ ಹೆಚ್.ಆರ್.ನಟರಾಜು ಗುರುವಾರ ಸಂಜೆ ಹುಳಿಯಾರಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ವಿಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಮಕೂರಿನ ಹೆಚ್.ಆರ್.ನಟರಾಜು ಹುಳಿಯಾರಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡರು.ಗ್ರಾಪಂ ಸದಸ್ಯರುಗಳು,ರೈತಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು. ಕಳೆದ ಹಲವಾರು ದಿನಗಳಿಂದ ಚುನಾವಣೆ ಸಿದ್ದತೆ ಮಾಡಿಕೊಂಡಿರುವ ತಾವು ಈಗಾಗಲೆ ಜಿಲ್ಲೆಯ ಶಿರಾ ,ಪಾವಗಡ ಹೊರತುಪಡಿಸಿ ಎಲ್ಲಡೆ ಒಂದು ಸುತ್ತಿನ ಪ್ರಚಾರ ನಡೆಸಿರುವುದಾಗಿ ತಿಳಿಸಿದರು.ಎಲ್ಲಡೆ ತಮಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಕಾರ್ಯಕರ್ತರ ,ಬೆಂಬಲಿಗರ ಪರಿಪೂರ್ಣ ಪರಿಶ್ರಮದಿಂದಾಗಿ ತಮಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ರೈತಸಂಘ,ರಕ್ಷಣ ವೇದಿಕೆ ಸೇರಿದಂತೆ ಹತ್ತುಹಲವಾರು ಕನ್ನಡಪರ ಸಂಘಟನೆಗಳು ತಮಗೆ ಬೆಂಬಲ ಸೂಚಿಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಸಂಘಟನೆಗಳ ಮೂಲಕ ಗ್ರಾಮಪಂಚಾಯ್ತಿ ಸದಸ್ಯರಾಗಿರುವವರ ಮತ ಕೊಡಿಸಲಿದ್ದಾರೆ ಎಂದರು.ಡಿ.೭ ರಂದು ತಾವು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು ಜಿಲ್ಲೆಯ ೪೩೦೦ ಗ್ರಾಮಪಂಚಾಯ್ತಿ ಸದಸ್ಯರುಗಳ ಪೈಕಿ ೧೩೦೦ ಗ್ರಾಮಪಂಚಾಯ್ತಿ ಸದಸ್ಯರುಗಳು ಬೇಷರತ್ ಬೆಂಬಲ ಸೂಚಿಸಿದ್ದು ಉಳಿದವರುಗಳನ್ನು ಶೀಘ್ರ ಭೇಟಿಯಾಗಿ ಮತಯಾಚನೆ ಮಾಡಲಿರುವುದಾಗಿ ತಿಳಿಸಿದರು.

ಮುಕ್ತಿಧಾಮಕ್ಕೆ ೭ ಲಕ್ಷ ಅನುದಾನ ಹಾಗೂ ಶವವಾಹನದ ಭರವಸೆ

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಅವರೊಂದಿಗೆ ಹುಳಿಯಾರಿನ ಮುಕ್ತಿಧಾಮ ಅಭಿವೃದ್ಧಿ ಸಮಿತಿ ಸದಸ್ಯರು. ಪಟ್ಟಣದಲ್ಲಿರುವ ಮುಕ್ತಿಧಾಮಕ್ಕೆ ಅಗತ್ಯ ಸೌಲಭ್ಯವುಳ್ಳ ಚಿತಾಗಾರಕ್ಕೆ ೭ ಲಕ್ಷದ ಅನುದಾನ ಹಾಗೂ ಶವ ಸಾಗಿಸಲು ವಾಹನ ಸೌಕರ್ಯ ಕಲ್ಪಿಸಿಕೊಡುವುದಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಭರವಸೆಯಿತ್ತರು. ಪಟ್ಟಣದಲ್ಲಿನ ಮುಕ್ತಿಧಾಮದಲ್ಲಿ ದಹನ ಕಾರ್ಯಕ್ಕೆ ಕೆಲವೊಂದು ಮೂಲಸೌಕರ್ಯವಿಲ್ಲದೆ ಅಂತ್ಯಕ್ರಿಯೆ ನಡೆಸುವುದು ಕಷ್ಟಕರವಾಗಿ ಪರಿಣಮಿಸಿದ್ದು ಅಲ್ಲದೆ ರುದ್ರಭೂಮಿಯು ಪಟ್ಟಣದಿಂದ ಎರಡು ಕಿಮೀ ದೂರವಿದ್ದು ಶವ ಸಾಗಿಸಲು ವಾಹನವೊಂದರ ಅವಶ್ಯಕತೆಯಿದ್ದು ಸಮಿತಿಯ ಸದಸ್ಯರುಗಳು ಧಾರ್ಮಿಕ ದತ್ತಿ ಇಲಾಖೆಯ ಮೊರೆಹೊಕ್ಕಿದ್ದರು. ರುದ್ರಭೂಮಿ ಅಭಿವೃದ್ಧಿ / ನವೀಕರಣ ಯೋಜನೆಯಡಿಯಲ್ಲಿ ಇಲಾಖೆಯು ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು. ಇಲ್ಲಿಯ ಸಮಸ್ಯೆ ಮನಗಂಡ ಜಿಲ್ಲಾ ಉಸ್ತುವಾರಿ ಸಚಿವರು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ರುದ್ರಭೂಮಿ ಅಭಿವೃದ್ಧಿಗಾಗಿ ತಾವೀಗಾಗಲೆ ೭ ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಹಾಗೂ ಶೀಘ್ರವೇ ಶವ ಸಾಗಿಸುವ ವಾಹನದ ಸೌಕರ್ಯ ಕೂಡ ಕಲ್ಪಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಕ್ತಿಧಾಮ ಸಮಿತಿಯ ಅಧ್ಯಕ್ಷ

ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಾಗಾರ ೭ ರಂದು

ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಹುಳಿಯಾರಿನ ಕನಕದಾಸ ಪ್ರೌಢಶಾಲೆಯಲ್ಲಿ ದಿನಾಂಕ ೭ ರಂದು ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦.೩೦ರಿಂದ ೧.೩೦ರವರೆಗೆ ೮,೯ ನೇ ತರಗತಿಯ ಹಳಗನ್ನಡ ಗದ್ಯ ಮತ್ತು ಪದ್ಯಗಳ ರಸಗ್ರಹಣ ಮತ್ತು ವಿಶ್ಲೇಷಣೆ ಹಾಗೂ ಮ.೨.೩೦ ರಿಂದ ೪.೩೦ ರವರೆಗೆ ೧೦ ನೇ ತರಗತಿಯ ಹಳೆಗನ್ನಡ ಗದ್ಯ ಮತ್ತು ಪದ್ಯಗಳ ರಸಗ್ರಹಣ ಮತ್ತು ವಿಶ್ಲೇಷಣೆ ನಡೆಯಲಿದೆ. ತಿಪಟೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಮುರಳಿಧರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.  ಕಾರ್ಯಾಗಾರಕ್ಕೆ ಆಗಮಿಸುವ ಶಿಕ್ಷಕರು ತರಗತಿಯ ಕನ್ನಡ ಪುಸ್ತಕದೊಂದಿಗೆ ಆಗಮಿಸಬೇಕು ಹಾಗೂ ತಾಲ್ಲೂಕಿನ ಎಲ್ಲಾ ಕನ್ನಡ ಭಾಷಾ ಬೋಧಕರು ತಪ್ಪದೇ ಹಾಜರಾಗಬೇಕೆಂದು ಬೋಧಕರ ಸಂಘದ ಅಧ್ಯಕ್ಷ ಕೆ.ವೀರಣ್ಣ ಮನವಿ ಮಾಡಿದ್ದಾರೆ.

ಮೈಲಾರಲಿಂಗೇಶ್ವರ ಜಾತ್ರ ಮಹೋತ್ಸವ

ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರ ಸ್ವಾಮಿಯವರ ೨೩ ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರದಂದು ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮ, ಕೆಂಕೆರೆ ಕಾಳಮ್ಮ ಹಾಗೂ ಗೌಡಗೆರೆ ದುರ್ಗಮ್ಮ ದೇವತೆಗಳ ಕೂಡೂಭೇಟಿಯೊಂದಿಗೆ ಆರಂಭವಾಗಿದೆ.ಭಾನುವಾರದಂದು ಮುಂಜಾನೆ ಗಂಗಾಸ್ನಾನದ ನಂತರ ನಡೆಮುಡಿಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಗುವುದು.ನಂತರ ಹುಳಿಯಾರು ಬುಡಕಟ್ಟು ಜನಾಂಗದವರಿಂದ ದೋಣಿಸೇವೆ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರೆವೇರಿಸಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯ ಸಮಿತಿಯವರು ಕೋರಿದ್ದಾರೆ.

ಪಂಚಾಯ್ತಿ ಕಾರ್ಯವೈಖರಿಗೆ ಬೇಸತ್ತು ಸದಸ್ಯನಿಂದಲೇ ಪ್ರತಿಭಟನೆ

ಏಕಾಂಗಿ ಹೋರಾಟಕ್ಕೆ ತಾರ್ಕಿಕ ಅಂತ್ಯ -------------------- ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ಅಭಿವೃದ್ಧಿ ವಿಚಾರವಾಗಿ ಸದಸ್ಯ ನಾಗರಾಜು ನಡೆಸಿದ ಧರಣಿ ಸ್ಥಳದಲ್ಲಿ ಇಓ ಕೃಷ್ಣಮೂರ್ತಿ ಆಗಮಿಸಿ ಸಮಸ್ಯೆ ಆಲಿಸಿ ಪಿಏಇಓ ಮೂಲಕ ಪಟ್ಟಿ ಮಾಡಿಸಿದರು.ರಾಜ್ಯರೈತಸಂಘದ ಸತೀಶ್,ಮೆಹಬೂಬ್ ಸಾಬ್ ಚಿತ್ರದಲ್ಲಿದ್ದಾರೆ. ಹುಳಿಯಾರು ಸಮೀಪದ ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ಜನರ ನಿರೀಕ್ಷೆಗೆ ತಕ್ಕ ಕೆಲಸವಾಗುತ್ತಿಲ್ಲ,ಹೊಸ ಸದಸ್ಯರು ಆಯ್ಕೆಯಾಗಿ ಆರು ತಿಂಗಳಾಗುತ್ತಾ ಬಂದಿದ್ದು ಕಳೆದ ಆರು ತಿಂಗಳ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಮೌಲ್ಯಮಾಪನ ಸಾರ್ವಜನಿಕರ ಎದುರಲ್ಲೆ ಆಗಲಿ ಎಂದು ಗ್ರಾಪಂ ಸದಸ್ಯ ಎಂ.ನಾಗರಾಜು(ಕಾಡಿನರಾಜ) ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದ ಘಟನೆ ಕೆಂಕೆರೆ ಪಂಚಾಯ್ತಿ ಆವರಣದಲ್ಲಿ ನಡೆಯಿತು. ಈ ಬಗ್ಗೆ ಮಾತನಾಡಿದ ಅವರು ಕೆಂಕೆರೆ ಗ್ರಾಪಂನಲ್ಲಿ ಹಿರಿಯ ಪಂಚಾಯ್ತಿ ಸದಸ್ಯರಾಗಿರುವ ನಾನು ಈ ಹಿಂದೆ ಕೂಡ ಎರಡು ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೆ.ನಯಾಪೈಸೆ ಖರ್ಚಿಲ್ಲದೆ ಈ ಬಾರಿ ಕೂಡ ಗೆದ್ದು ಬಂದಿರುವ ನನಗೆ ಸಾರ್ವಜನಿಕರ ಆಶೋತ್ತರಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ,ಯಾವುದೇ ಕೆಲಸಗಳಿಗೂ ಪಂಚಾಯ್ತಿಯಲ್ಲಿ ಸಹಕಾರ ದೊರೆಯದ ಕಾರಣ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದು ಈ ಬಗ್ಗೆ ಸಾರ್ವಜನಿಕರ ಎದುರಿನಲ್ಲೆ ಸಮಸ್ಯೆ ಪರಿಹಾರಕ್ಕೆ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ತಿಳಿಸಿದರು. ಆರೋಪ ಏನು:

ಜೆಡಿಎಸ್ ನೊಂದಿಗೆ ಮೈತ್ರಿ ಬೇಡ: ಕಾಂಗ್ರೆಸ್ ಮುಖಂಡ ಸಾಸಲು ಸತೀಶ್

ಮುಂಬರುವ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವಕಾಶವಾದಿ ಜೆಡಿ.ಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ತಾ|| ಕಾಂಗ್ರೆಸ್ ಮುಖಂಡ ಸಾಸಲು ಸತೀಶ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.   ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಎರಡು ಪಕ್ಷಗಳ ಮೈತ್ರಿ ಮಾಡಿಕೊಳ್ಳುವುದರಿಂದ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದು ಅಂಥವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.ಕಾಂಗ್ರೆಸ್ಸಿನಿಂದ ಯಾವುದೇ ಕಾರ್ಯಕರ್ತರು ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸಿದರೆ ಜಿಲ್ಲೆಯ ಎಲ್ಲ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಹುಳಿಯಾರಮ್ಮನ ಸನ್ನಿಧಿಯಲ್ಲಿ ವಿಜೃಂಭಣೆಯ ಕೃತಿಕೋತ್ಸವ

ಹುಳಿಯಾರು  ಪಟ್ಟಣದ ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಕೃತಿಕೋತ್ಸವ ಬುಧವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕೃತಿಕೋತ್ಸವ ಅಂಗವಾಗಿ ಅಮ್ಮನವರಿಗೆ ವಿಪ್ರಮಹಿಳಾ ಸಂಘದಿಂದ ದೀಪಾರತಿ ಹಾಗೂ ಲಲಿತ ಸಹಸ್ರನಾಮ ಪಠಣ ನಡೆಯಿತು. ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದ ದಿನ ಆಚರಿಸಲಾಗುವ ಕೃತಿಕೋತ್ಸವವು ಈ ಬಾರಿ ಲಕ್ಷ್ಮೀ ಸುಬ್ರಮಣ್ಯ ಅವರ ಸೇವಾರ್ಥದಲ್ಲಿ ನಡೆಯಿತು.ಅಮ್ಮನವರಿಗೆ ಅಭಿಷೇಕ,ಅರ್ಚನೆ ನಡೆಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ವಾದ್ಯಮೇಳದೊಂದಿಗೆ ಹೊರಡಿಸಿ ಕರುಗ ಸುಡುವ ಕಾರ್ಯ ನಡೆಸಲಾಯಿತು.ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.ವಿಪ್ರ ಮಹಿಳೆಯರಿಂದ ಲಲಿತಾಸಹಸ್ರನಾಮ ಪಾರಾಯಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಸೀತಾರಾಮ ಪ್ರತಿಷ್ಠಾನದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್, ವಿಪ್ರ ಸಂಘದಲೋಕೇಶಣ್ಣ,ರಾಜಣ್ಣ,ರಂಗನಾಥ ಪ್ರಸಾದ್,ಅಶ್ವತ್ಥ್,ಗುಂಡಣ್ಣ. ಸೇರಿದಂತೆ ಅಪಾರ ಸಂಖ್ಯೆ ಭಕ್ತಾಧಿಗಳು ಹಾಜರಿದ್ದು ಅಮ್ಮನವರ ಕೃತಿಕೋತ್ಸವವನ್ನು ಕಣ್ತುಂಬಿಕೊಂಡರು. ಗಾಂಧಿಪೇಟೆಯ ಕನ್ನಿಕಪರಮೇಶ್ವರಿ ದೇವಾಲಯದಲ್ಲಿ ಬಿ.ವಿ.ಶ್ರೀನಿವಾಸ್ ಸೇವಾರ್ಥದಲ್ಲಿ ಕನ್ನಿಕಾಪರಮೇಶ್ವರಿಗೆ ಹಾಗೂ ಬನಶಂಕರಿ ಮತ್ತು ಶ್ರೀ ಅನಂತಶಯನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಭಕ್ತಾಧಿಗಳಿಂದ ಅಲಂಕಾರ,ಪೂಜಾ ಕಾರ್ಯಗಳನ್ನು ನಡೆದು ಪಾಗು ಸುಡುವುದರ ಮೂಲಕ ಆ ಬೆಳಕ

ವಿವಿಧೆಡೆ ಹುಣ್ಣಿಮೆ ಪೂಜೆ

ಪಟ್ಟಣದಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ,ಬನಶಂಕರಿ ದೇವಾಲಯದಲ್ಲಿ, ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ,ಕೆಂಕೆರೆ ಪುರದಮಠದಲ್ಲಿ ,ತಿರುಮಲಾಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆ ಪೂಜೆಯು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬನಶಂಕರಿ ಹಾಗೂ ಸಾಯಿಬಾಬಾ ಮಂದಿರದಲ್ಲಿ ಸತ್ಯನಾರಾಯಣಪೂಜೆ ನಡೆದರೆ ಮಾರುತಿನಗರದ ಆಂಜನೇಯ ಸ್ವಾಮಿ ಪುರದಮಠದಲ್ಲಿ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ಸಣ್ಣದುರ್ಗಮ್ಮನ ದೇವಾಲಯದಲ್ಲಿ ಕಾರ್ತಿಕ ದೀಪ ಏರಿಸಲಾಯಿತು.ದೇವರುಗಳಿಗೆ ಮಾಡಿದ್ದ ಅಲಂಕಾರ ನೋಡಲು ಹಾಗೂ ಪೂಜಾಧಿಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರದಿದ್ದರು. ಭಜನೆ ಹಾಗೂ ಪ್ರಸಾದ ವಿನಿಯೋಗವಾಯಿತು.

ಹುಳಿಯಾರು ಗ್ರಾಪಂ ಮೇಲ್ದರ್ಜೆಗೆ:ಸಚಿವ ಜಯಚಂದ್ರ ಭರವಸೆ

೩೯ ಗ್ರಾಮಪಂಚಾಯ್ತಿ ಸದಸ್ಯರನ್ನೊಳಗೊಂಡು ಜಿಲ್ಲೆಯ ಅತಿದೊಡ್ಡ ಪಂಚಾಯ್ತಿಯ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವ ವಿಚಾರ ವಿಧಾನಸಭಾಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದು ಗ್ರಾಪಂ ಸದಸ್ಯ ಧನುಷ್ ರಂಗನಾಥ್ ತಿಳಿಸಿದ್ದಾರೆ. ಸೋಮವಾರದಂದು ವಿಧಾನಸೌಧದಲ್ಲಿ ಸಚಿವ ಜಯಚಂದ್ರರನ್ನು ಹುಳಿಯಾರಿನಿಂದ ತೆರಲಿದ್ದ ನಿಯೋಗ ಭೇಟಿ ಮಾಡಿ ಒತ್ತಾಯಿಸಿದ್ದರ ಫಲವಾಗಿ ಅಗತ್ಯ ದಾಖಲೆಗಲನ್ನು ತುರ್ತು ತರಿಸಿಕೊಂಡು ಪರಮಾರ್ಶಿಸಿದ ಸಚಿವರು ನಾಳಿನ ಕಲಾಪದಲ್ಲಿ ಚರ್ಚೆಗೆ ಮಂಡಿಸಲು ಆದೇಶಿಸಿದ್ದಾರೆಂದು ಸದಸ್ಯ ರಂಗನಾಥ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪೌರಾಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ಲಾ ಇಸ್ಲಾಂ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ ಸಚಿವ ಜಯಚಂದ್ರರವರು ಹುಳಿಯಾರು ಪಟ್ಟಣ ಪಂಚಾಯ್ತಿಯಾಗಲು ಈ ಹಿಂದೆಯೆ ತೀರ್ಮಾನಿಸಲಾಗಿದ್ದರೂ ಸಹ ಪಟ್ಟಿಯಿಂದ ಕೈಬಿಟ್ಟಿದ್ದ ಪರಿಣಾಮ ಗ್ರಾಪಂ ಆಗಿಯೇ ಮುಂದುವರಿದಿತ್ತು. ಸಂಬಂಧಪಟ್ಟವರ ಗಮನಕ್ಕೆ ಈ ವಿಚಾರತಂದಿದ್ದು ಈ ಬಾರಿಯ ಕಲಾಪದಲ್ಲಿ ಒಪ್ಪಿಗೆ ಪಡೆಯಲಾಗುವುದೆಂದು ತಿಳಿಸಿದ್ದಾರೆಂಬ ಮಾಹಿತಿ ನೀಡಿದರು. ಹುಳಿಯಾರು ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಧನುಷ್ ರಂಗನಾಥ್ . ಎಸ್ ಆರ್ ಎಸ್ ದಯಾನಂದ್ .ಎಸ್ ಪುಟ್ಟರಾಜ್ ಅವರುಗಳು ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ ವಾಟಾಳ್ ನಾಗರಾಜ್ ಅವರ

ದೀಪಾವಳಿಗೂ ಏರದ ಕೊಬ್ಬರಿ ಬೆಲೆ

ಕೊಬ್ಬರಿ ಮಾರುಕಟ್ಟೆ ಇತಿಹಾಸದಲ್ಲೇ ಕ್ವಿಂಟಲ್‌ಗೆ ಗರಿಷ್ಟ ರೂ. ೧೯,೦೫೦ಕ್ಕೆ ಮಾರಾಟವಾಗಿ ಇಪ್ಪತ್ತರ ಗಡಿ ತಲುಪುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ವರ್ಷದ ಆರಂಭದಿಂದಲೂ ಇಳಿಮುಖವಾಗುತ್ತ ಬಂದಿರುವ ಧಾರಣೆ ಈ ದೀಪಾವಳಿಯಲ್ಲೂ ಸಹ ಏರಿಕೆ ಕಾಣದ ರೈತರನ್ನು ನಿರಾಸೆ ಮಡುವಿನಲ್ಲೇ ಮುಳುಗಿಸಿದೆ.. ಕಳೆದ ವರ್ಷ ಕೊಬ್ಬರಿ ಧಾರಣೆ ಏರುಮುಖ ಕಂಡು ಸಮಾಧಾನಪಟ್ಟಿದ್ದ ರೈತರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಮತ್ತೆ ಇಳಿಯುತ್ತಿರುವ ಕೊಬ್ಬರಿ ಧಾರಣೆ ಕುಸಿತ ಕಳವಳಕ್ಕೀಡು ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಕ್ವಿಂಟಲ್ ಕೊಬ್ಬರಿ ಧಾರಣೆ ಐದು-ಆರು ಸಾವಿರ ರೂ.ದಾಟದೆ ತೆವಳುತ್ತಿದ್ದರಿಂದ ರೈತರು ನಿರಾಶರಾಗಿದ್ದರು. ತದನಂತರ ಅನಿರೀಕ್ಷಿತವಾಗಿ ಧಾರಣೆ ದಿಢೀರ್ ಚೇತರಿಸಿಕೊಂಡು ಏರುಗತಿಯಲ್ಲಿ ಸಾಗಿ, ಕಳೆದ ವರ್ಷ ಆಗಸ್ಟ್- ಸೆಪ್ಟಂಬರ್ ನಲ್ಲಿ ೧೯,೦೫೦ ರೂ.ಗೆ ಏರಿ ಧಾರಣೆ ಸರ್ವಕಾಲಿಕ ದಾಖಲೆಯಾಗಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ೨೦೦೦೦ ರೂ. ದಾಟಿ ೨೫,೦೦೦ ತಲುಪುವುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಂತರ ಏರಿಳಿತ ಕಾಣತೊಡಗಿ ಇದೀಗ ೧೧ ಸಾವಿರದ ಅಜುಬಾಜಿಗೆ ಬಂದು ನಿಂತಿದೆ. ಮಾರ್ಚ್‌ನಲ್ಲಿ ಕುಸಿತ ಕಂಡರೂ ಮತ್ತೆ ಚೇತರಿಸಿಕೊಂಡು ಜೂನ್ ಅಂತ್ಯದ ವೇಳೆ ೧೫ ಸಾವಿರ ಆಸುಪಾಸಿನಲ್ಲಿ ಸ್ಥಿರತೆ ಕಂಡಿತ್ತು. ದೀಪಾವಳಿ ಸಮಯದಲ್ಲಿ ಏರಿಕೆ ನಿರೀಕ್ಷಿಸಲಾಗಿತ್ತಾದರೂ ಸಹ ಲೆಕ್ಕಾಚಾರ ಉಲ್ಟಾಆಗಿ ಕುಸಿತ ಕಾಣುಯ್ಯಾ ಬಂದು ದ

ವೆಂಕಟೇಶ್ ಆಯ್ಕೆ

ಹುಳಿಯಾರು ಹೋಬಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್.ವೆಂಕಟೇಶ್ ಆಯ್ಕೆಯಾಗಿದ್ದಾರೆ. 

ರಂಗೋಲಿಸ್ಪರ್ಧೆ

ಹುಳಿಯಾರು ಸಮೀಪದ ಭಟ್ಟರಹಳ್ಳಿಯ ಶ್ರಿಸಿದ್ದರಾಮೇಶ್ವರ ಸ್ವಾಮಿ ದಸರಾ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.(ಚಿತ್ರ:ಮಹೇಶ್ ಭಟ್ಟರಹಳ್ಳಿ)

ಸಾಧಕರ ಆದರ್ಶ ದಾರಿದೀಪವಾಗಬೇಕು: ಶಿವರಾಜು

ಶಿಲ್ಪಕಲಾಕೃತಿಗಳ ಮೂಲಕ ಆದರ್ಶಪುರುಷರನ್ನು ನಮ್ಮೆದುರಿಗೆ ಕಡೆದು ನಿಲ್ಲಿಸಿದ್ದು ಈ ಸಾಧಕರ ಆದರ್ಶ ಜೀವನ ನಮಗೆ ಮಾರ್ಗದರ್ಶಕವಾಗಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಜೆ.ಬಿ.ಶಿವರಾಜು ಹೇಳಿದರು.                   ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಸೇವಾ ಸಂಸ್ಥೆ ಅವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಹಾಗೂ ಸೇವಾ ಚೇತನಾ ಸಂಸ್ಥೆ ಬೋರನ ಕಣಿವೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹದಿನೈದು ದಿನಗಳ ಕಾಲದ ರಾಜ್ಯ ಮಟ್ಟದ ಸಮಕಾಲೀನ ಶಿಲ್ಪಕಲಾ ಶಿಬಿರದ ಸಮಾರೋಪ ಹಾಗೂ ಶಿಲ್ಪಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.                  ಮುಂಚಿನ ದಿನಗಳಲ್ಲಿ ಕಲಾಕೃತಿಗಳನ್ನು ನಿರ್ಮಿಸಲು ವರ್ಷಾನುಗಟ್ಟಲೆ ಹಿಡಿಯುತ್ತಿದ್ದು ಶಿಲ್ಪಕಲಾ ಅಕಾಡೆಮಿ ಇಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ೧೫ ದಿನದಲ್ಲೆ ಇಲ್ಲಿ ಹಿರಿಯ ಕಿರಿಯ ಕಲಾವಿದರ ಉಳಿಯಿಂದ ಅನೇಕ ಅದ್ಭುತ ಕಲಾಕೃತಿಗಳು ಮೂಡುತ್ತಿರುವುದು ಶ್ಲಾಘನೀಯ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಶಿಲ್ಪಕಲಾ ಅಕಾಡೆಮಿ ನಿರ್ಮಿಸಿರುವ ಕಾಷ್ಠ ಕಲಾಕೃತಿಗಳು ನಮ್ಮ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸುತ್ತಿದೆ ಎಂದರು. ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಸೇವಾ ಸಂಸ್ಥೆ ಅವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಏರ್ಪಡಿಸಿದ್ದ ಹದಿನೈದು ದಿನಗಳ ಕಾಲದ ರಾಜ್ಯ ಮಟ್ಟದ ಸಮಕಾಲೀನ ಶಿಲ್ಪಕಲಾ ಶಿಬಿರದ ಸಮಾರೋಪದಲ್ಲಿ ಸಾಹಿತಿ ಎಸ್.ಜೆ.

ಮಳೆ ಬಂತು:ರಾಗಿಗೆ ಜೀವಕಳೆ ತಂತು

ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಬಂದ ಮಳೆಯಿಂದ ರಾಗಿ ಬೆಳೆ ಚೇತರಿಸಿಕೊಂಡಿದ್ದು ತಡ ಬಿತ್ತನೆ ಪೈರುಗಳಿಗೆ ಜೀವಕಳೆ ಬಂದಂತಾಗಿದೆ.ಕಳೆದ ೨೨ದಿನಗಳಿಂದ ಮಳೆಯಿಲ್ಲದೆ ಕಾಳುಗಟ್ಟುವ ಸ್ಥಿತಿಯಲ್ಲಿದ್ದ ರಾಗಿ ನೆಲಕಚ್ಚಿತು ಎಂದು ಹತಾಶರಾಗುತ್ತಿದ್ದಾಗಲೆ ಮೊನ್ನೆ ಬಂದ ಮಳೆಯಿಂದಾಗಿ ಪೂರ್ಣ ಫಸಲು ರೈತರ ಕೈ ಸೇರಲಿದೆ ಎಂಬಾ ಆಶಾಭಾವನೆ ವ್ಯಕ್ತವಾಗಿದೆ. ತಡವಾಗಿ ಬಿತ್ತನೆ ಮಾಡಿದ ರಾಗಿ ತಾಕುಗಳಿಗೆ ಒಂದು ಹದ ಮಳೆ ಬೇಕಾಗಿದ್ದು ಬಾರದ ಮಳೆಯಿಂದಾಗಿ ರೈತರು ಅತಂಕದಲ್ಲಿದ್ದರು.ಅಲ್ಲದೆ ನವಣೆ, ಹಿಂಗಾರು ಜೋಳ, ಹುರುಳಿ ಮತ್ತಿತ್ತರ ಬೀಜಗಳನ್ನು ಬಿತ್ತಿದ್ದ ರೈತರು ಮಳೆ ಕೈ ಕೊಟ್ಟಿದ್ದರಿಂದ ಕೈಕೈ ಹಿಸುಕಿಕೊಳ್ಳುವಂತಾಗಿತ್ತು. ಭಾನುವಾರ ತಡರಾತ್ರಿ ಹಾಗೂ ಸೋಮವಾರ ರಾತ್ರಿ ಬಂದ ತುಂತುರು ಮಳೆಯಿಂದಾಗಿ ಭೂಮಿ ಹದವಾಗಿದ್ದು ತಡವಾಗಿ ಬಿತ್ತನೆಯಾಗಿರುವ ರಾಗಿ, ನವಣೆ, ಹುರುಳಿ, ಸಜ್ಜೆ ಸೇರಿದಂತೆ ಇತರ ಬೆಳೆಗಳಿಗೆ ಅನುಕೂಲವಾಗಿದೆ. ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬಂದ ಮಳೆಯಿಂದಾಗಿ ನಳನಳಿಸುತ್ತಿರುವ ರಾಗಿ ತಾಕು ಕೆಲವರು ಜುಲೈ ಮೊದಲ ಭಾಗದಲ್ಲೆ ಬಿತ್ತನೆ ಮಾಡಿದ್ದ ನವಣೆ, ಸಾವೆ ಈಗಾಗಲೆ ಕಟಾವಿನ ಹಂತಕ್ಕೆ ಬಂದಿದ್ದು ಈಗ ಬಂದಿರುವ ಮಳೆ ಕಟಾವಿಗೆ ಅಲ್ಪಸ್ವಲ್ಪ ತೊಂದರೆಯಾಗಲಿದೆ.ಉಳಿದಂತೆ ದ್ವಿದಳ ಧಾನ್ಯಗಳಿಗೆ ಈ ಮಳೆ ಪೂರಕವಾಗಿದ್ದು ರಾಗಿ ಬಂಪರ್‌ ಇಳುವರಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಕೊಳವೆಬಾವಿ

ಹುಳಿಯಾರುಪಟ್ಟಣದ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಂಗನಾಥ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ  ಕೊಳವೆಬಾವಿ ಕೊರೆಯಲಾಯಿತು.ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಇಂಜಿನಿಯರ್ ಶಿವಾನಂದ್ ಈ ಯೋಜನೆಯಡಿ ಹುಳಿಯಾರು ಪಟ್ಟಣದ ಮಾರುತಿನಗರ,ಆಜಾದ್ ನಗರ ಹಾಗೂ ಇಂದಿರಾನಗರದಲ್ಲಿ ಒಟ್ಟು ಮೂರು ಕೊಳವೆಬಾವಿ ಕೊರೆಯಲಾಗಿದ್ದು ಕಿರುನೀರು ಸರಬರಾಜು ಯೋಜನೆಯಡಿ ಸುರಕ್ಷಿತ ನೀರು ಪೂರೈಸಲಾಗುತ್ತಿದೆ ಎಂದರು. ತಲಾ ನಾಲ್ಕರಿಂದ ಐದು ಲಕ್ಷ ರೂ ವೆಚ್ಚದಲ್ಲಿ ಘಟಕ ಸ್ಥಾಪಿಸಲಾಗುತ್ತಿದ್ದು ಪ್ರತಿದಿನ ಪ್ರತಿ ವ್ಯಕ್ತಿಗೆ ತಲಾ ೫೫ ಲೀಟರ್ ನಂತೆ ನೀರು ಪೂರೈಸಲಾಗುವುದೆಂದರು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹುಳಿಯಾರು ರಂಗನಾಥ ಸ್ವಾಮಿ ದೇವಾಲಯದ ಪ್ರಾಂಗಂಅದಲ್ಲಿ ಕೊಳವೆ ಬಾವಿ ಕೊರೆಯಲಾಯಿತು.ದೇವಾಲಯ ಸಮಿತಿಯ ರಂಗನಾಥ್,ವಿಶ್ವನಾಥ್,ಶೇಷಾದ್ರಿ ಮತ್ತಿತರರಿದ್ದಾರೆ. ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗನಾಥ ಶೆಟ್ರು,ಸಿ.ವಿಶ್ವನಾಥ್,ಗ್ರಾಪಂ ಸದಸ್ಯ ರಂಗನಾಥ್ ,ಅರ್ಚಕ ಪದ್ಮರಾಜು,ಶೇಷಾದ್ರಿ ಮತ್ತಿತರರಿದ್ದರು.

ತೋಟದ ಮನೆಯಲ್ಲಿ ವೃದ್ಧ ದಂಪತಿಯ ಕೊಲೆ

ತಾಲ್ಲೂಕಿನ ಹಂದನಕೆರೆ ಪೊಲೀಸ್ ಠಾಣೆ ಸರಹದ್ದಿನ ರಾಮಘಟ್ಟ ಗ್ರಾಮದ ತೋಟದ ಮನೆಯಲ್ಲಿ ಮಲಗಿದ್ದ ವೃದ್ಧ ದಂಪತಿಯ ಕೊಲೆಗೈದ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಸೋಮವಾರ ಸಂಜೆ ಅಲ್ಲಿಂದ ಅವರ ತೋಟಕ್ಕೆ ಶವ ತಂದು ಸಂಜೆ ಸಂಬಂಧಿಗಳ ಸಮಕ್ಷಮದಲ್ಲಿ ಶವಸಂಸ್ಕಾರ ನೆರೆವೇರಿತು. ಹಂದನಕೆರೆ ಹೋಬಳಿಯ ರಾಮಘಟ್ಟೆ ಗ್ರಾಮದ ತೋಟದ ಮನೆಯಲ್ಲಿ ಕೊಲೆಯಾದ ವೃದ್ದ ದಂಪತಿಗಳಾದ ಲಕ್ಕಪ್ಪ ಹಾಗೂ ಮೀನಾಕ್ಷಮ್ಮ ವಿವರ:ರಾಮಘಟ್ಟ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಲಕ್ಕಪ್ಪ (75) ಹಾಗೂ ಮೀನಾಕ್ಷಿ (60) ಎಂಬುವರೇ ಕೊಲೆಯಾಗಿರುವ ದುರ್ದೈವಿಗಳಾಗಿದ್ದು ತೋಟದ ಮನೆಯಲ್ಲಿ ಇವರಿಬ್ಬರೆ ವಾಸವಿದ್ದು, ಇವರ ಮೂರು ಜನ ಮಕ್ಕಳು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದಾರೆಂದು ಹೇಳಲಾಗಿದೆ.ಸೀಮೆಎಣ್ಣೆ ಸ್ಟವ್​ನಿಂದ ಹೊಡೆದು ಕೊಲೆ ಮಾಡಲಾಗಿದ್ದು ಸೊಳ್ಳೆ ಪರದೆಯೊಳಗೆ ಮೀನಾಕ್ಷಮ್ಮ ಕೊಲೆಯಾಗಿದ್ದರೆ, ಲಕ್ಕಪ್ಪ ಸೊಳ್ಳೆ ಪರದೆ ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕೊಲೆ ಶನಿವಾರ ರಾತ್ರಿ ನಡೆದಿದ್ದರೂ ಭಾನುವಾರ ಸಂಜೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ವೈಯಕ್ತಿಕ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ರಾತ್ರಿ 7.30ರಲ್ಲಿ ಪರಿಚಯಸ್ಥರೊಂದಿಗೆ ಲಕ್ಕಪ್ಪ ದಂಪತಿ ಮಾತನಾಡಿದ್ದು ಭಾನುವಾರ ಬೆಳಗ್ಗೆ ಮನೆಯಿಂದ ಎದ್ದು ಬಂದಿಲ್ಲ.ಅನುಮಾನಗೊಂಡು ಗ್ರಾಮದ ಕೆಲವರು ತೋಟದ ಮನೆಯ ಹತ್ತಿರ ಹೋಗಿ ನೋಡಿದ

ಕನ್ನಡ ಪುಸ್ತಕ ಮಾರಾಟ ಮಾಡುವ ಮೂಲಕ ರಾಜ್ಯೋತ್ಸವ ಆಚರಣೆ

ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾಹಿತಿ ಬೆಳಿಗೆರೆ ಕೃಷ್ಣಮೂರ್ತಿಯವರು ಕವಿಗೋಷ್ಟಿ ಏರ್ಪಡಿಸಿದಲ್ಲದೆ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.ಕನ್ನಡ ರಾಜ್ಯೋತ್ಸವ ಬರಿಯ ಭಾಷಣಕ್ಕೆ ಸೀಮಿತವಾಗಬಾರೆದೆಂದು ತಮ್ಮ ಸುತ್ತಾಟ ಸಂಘಟನೆಯ ಮೂಲಕ ನಿಲ್ದಾಣದಲ್ಲಿ ಷಾಮಿಯಾನ ಹಾಕಿ ಸಾಹಿತ್ಯಿಕ ಪುಸ್ತಕಗಳನ್ನು ಓದುಗರಿಗೆ ಸಾಹಿತ್ಯಾಭಿಮಾನಿಗಳಿಗೆ ತಲುಪಿಸುವ ಪ್ರಯತ್ನ ಮಾಡಿದರು.ಬಸ್ ಗಳಲ್ಲೂ ಕೂಡಪುಸ್ತಕ ಮಾರಾಟಕ್ಕೆ ಮುಂದಾದರು. ಹುಳಿಯಾರು ಬಸ್ ನಿಲ್ದಾಣದಲ್ಲಿ ಸುತ್ತಾಟ ಸಂಘಟನೆಯ ಮೂಲಕ ಸಾಹಿತಿ ಬೆಳಿಗೆರೆ ಕೃಷ್ಣಮೂರ್ತಿಯವರು ಕವಿಗೋಷ್ಟಿ ಏರ್ಪಡಿಸಿದಲ್ಲದೆ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ಸರ್ಕಾರಿ ಬಿಎಂಎಸ್ ಪ್ರಥಮ ದರ್ಜೆ ಕಾಲೇಜು, ಸುತ್ತಾಟ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಬಸ್ ಸ್ಟಾಂಡ್ ಕವಿಗೋಷ್ಠಿ ಕೂಡ ನಡೆಯಿತು.ಈ ಬಗ್ಗೆ ಮಾತನಾಡಿದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸರ್ಕಾರ ಬಹುಮುಖ್ಯವಾಗಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಕರ ಮೇಲಿರುವ ಹೆಚ್ಚಿನ ಹೊರೆಗಳಾದ ಗಣತಿ ಕಾರ್ಯ ಹಾಗೂ ಬಿಸಿಯೂಟದಿಂದ ಮುಕ್ತಿಗೊಳಿಸಬೇಕು. ಅಲ್ಲದೆ ಎಲ್ಲ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಅಲ್ಲದೆ ತತ್ವಪದ ತಾವೇ ಹಾಡುವ ಮೂಲಕ

ವೈಭವದ ಸಿದ್ದರಾಮೇಶ್ವರ ಸ್ವಾಮಿ ತೆಪ್ಪೋತ್ಸವ

ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಯ ಸಿದ್ದರಾಮೇಶ್ವರ ಸ್ವಾಮಿಯ ತೆಪ್ಪೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು.ಯಳನಡು ಅರಸೀಕೆರೆ ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರೆವೇರಿತು.  ಹುಳಿಯಾರುಹೋಬಳಿಯ ತಮ್ಮಡಿಹಳ್ಳಿಯ ಸಿದ್ದರಾಮೇಶ್ವರ ಸ್ವಾಮಿಯ ತೆಪ್ಪೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು. ಸಿದ್ದರಾಮೇಶ್ವರ ಸ್ವಾಮಿ ದೇಗುಲದಲ್ಲಿ ಪುಣ್ಯಹ, ಗಂಗಾಸ್ನಾನ, ಫಲಹಾರಸೇವೆ ಜರುಗಿತು.ನಂತರ ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕರಿಯಮ್ಮ ದೇವಿಯನ್ನು ನಡೆಮುಡಿ ಉತ್ಸವದಲ್ಲಿ ಕೆರೆಯ ಬಳಿ ಕರೆತಂದು ವಿಶೇಷ ಪೂಜೆ ಸಲ್ಲಿಸಿ ನೆರದಿದ್ದ ಭಕ್ತಾಧಿಗಳಿಗೆ ಫಲಹಾರ ಹಂಚಲಾಯಿತು.ಬ್ಯಾರೆಲ್,ಹಲಗೆ ಜೋಡಿಸಿ ಪುಷ್ಪಗಳೊಂದಿಗೆ ಅಲಂಕೃತಗೊಂಡ ತೆಪ್ಪದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸ್ವಾಮೀಜಿಗಳೊಂದಿಗೆ ಮೂರು ಸುತ್ತು ಕೆರೆಯಲ್ಲಿ ಪ್ರದಕ್ಷಿಣೆ ಹಾಕಿಸಲಾಯಿತು.ಬಳಿಕ ಗ್ರಾಮದೇವತೆ ಕರಿಯಮ್ಮನ ತೆಪ್ಪೋತ್ಸವ ನೆರವೇರಿಸಲಾಯಿತು. ಲಾಗಾಯ್ತಿನಿಂದಲೂ ಸ್ವಾಮಿಯ ಜಾತ್ರೆ ನಡೆದುಕೊಂಡು ಬರುತ್ತಿದ್ದು ಕೆರೆಕೋಡು ಬಿದ್ದ ಸಂದರ್ಭದಲ್ಲಿ ತೆಪ್ಪೋತ್ಸವ ಮಾಡಿಕೊಂಡು ಬರುತ್ತಿದ್ದು ಈ ಬಾರಿ ಕೂಡ ೧೬ ವರ್ಷಗಳ ನಂತರ ಕೆರೆಕೋಡಿ ಬಿದ್ದ

ಬೋರನಕಣಿವೆ ಬಳಿ ರಾಜ್ಯಮಟ್ಟದ ಸಮಕಾಲೀನ ಶಿಲಾ ಶಿಲ್ಪಕಲಾ ಶಿಬಿರ

ನಾಡಿನ ವಿವಿಧ ಜಿಲ್ಲೆಗಳಿಂದ ಶಿಲ್ಪಿಗಳ ಆಗಮನ ------------------------------------------ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ರಾಜ್ಯಮಟ್ಟದ ಶಿಬಿರವೊಂದು ಬೋರನಕಣಿವೆಯಂತಹ ಕುಗ್ರಾಮದಲ್ಲಿ ಆಯೋಜಿಸಲಾಗಿದ್ದು ನಾಡಿನ ವಿವಿಧ ಜಿಲ್ಲೆಗಳಿಂದ ಶಿಲ್ಪಿಗಳು ಇಲ್ಲಿಗೆ ಆಗಮಿಸಿರುವುದು ಗ್ರಾಮೀಣಭಾಗದಲ್ಲೂ ಸಹ ಕಲೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಹುಳಿಯಾರು ಸಮೀಪದ ಬೋರನಕಣಿವೆಯ ಸೇವಾಚೇತನ ಟ್ರಸ್ಟ್ ನ ಅಧ್ಯಕ್ಷ ಹಾಗೂ ಸಾಹಿತಿಗಳಾದ ಪ್ರೋ ಎಸ್.ಜಿ.ಸಿದ್ದರಾಮಯ್ಯ ಹಾಗೂ ಕಾರ್ಯದರ್ಶಿ ವಿಠಲ್ ಅವರ ಪ್ರಯತ್ನದ ಫಲವಾಗಿ ರಾಜ್ಯಮಟ್ಟದ ಎರಡುವಾರಗಳ ಕಾಲದ ಶಿಬಿರ ನಡೆಯುತ್ತಿದ್ದು ಇಲ್ಲಿ ಹಿರಿಯ ಕಿರಿಯ ಕಲಾವಿದರ ಉಳಿಯಿಂದ ಅನೇಕ ಅದ್ಭುತ ಕಲಾಕೃತಿಗಳು ಮೂಡುತ್ತಿದೆ. ಕೆತ್ತನೆಯಲ್ಲಿ ತೊಡಗಿಕೊಂಡಿರುವ ಶಿಲ್ಪಿಗಳು ಹಿರಿಯ ಶಿಲ್ಪಿಗಳಾಗಿರುವ ಚಿತ್ರದುರ್ಗ ಜಿಲ್ಲೆಯ ತುಪ್ಪದಹಳ್ಳಿಯ ಹಿರಿಯ ಶಿಲ್ಪಿ ಟಿ.ಎಂ.ತೀರ್ಥಾಚಾರ್ ಸಂಚಾಲಕತ್ವದ ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಮಂದಿ ಹಿರಿಯ ಶಿಲ್ಪಿಗಳು ಹಾಗೂ ಹತ್ತು ಮಂದಿ ಕಿರಿಯ ಶಿಲ್ಪಿಗಳು ಭಾಗವಹಿಸಿದ್ದು ನೆಲಮಂಗಲದ ಶಿಲ್ಪಿ ಎಸ್.ಮರಿಸ್ವಾಮಿ ಶಿಬಿರದ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ಹುಳಿಯಾರು ಹೋಬಳಿಯ ಬೋರನಕಣಿವೆಯ ಸೇವಾಚೇತನದಲ್ಲಿ ಅ.೧೯ರಿಂದ ನ.೨ ಎರಡು ವಾರಾವಧಿ ಶಿಲಾ ಶಿ

ತಮ್ಮಡಿಹಳ್ಳಿಯಲ್ಲಿ ನ.೧ರಂದು ತೆಪ್ಪೋತ್ಸವ

16ವರ್ಷಗಳ ನಂತರ ನಡೆಯುತ್ತಿರುವ ಅಪರೂಪದ ಕಾರ್ಯಕ್ರಮ ------------------------------- ಹುಳಿಯಾರು:ಹೋಬಳಿಯ ತಮ್ಮಡಿಹಳ್ಳಿಯಲ್ಲಿ ನವಂಬರ್ 1ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಸಿದ್ದರಾಮೇಶ್ವರ ಸ್ವಾಮಿಯವರ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ 16ವರ್ಷಗಳ ನಂತರ ಕೆರೆ ತುಂಬಿದ್ದು ಈ ನಿಮಿತ್ತ ಶ್ರೀಸಿದ್ದರಾಮೇಶ್ವರ ಸ್ವಾಮಿಯವರನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕೂರಿಸಿ ಊರಮುಂದಿರುವ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗುವುದು. ಈ ಅಪರೂಪದ ಕಾರ್ಯಕ್ರಮಕ್ಕೆ ಯಳನಾಡು-ಅರಸಿಕೆರೆ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು,ತಿಪಟೂರು ತಾಲ್ಲೂಕ್ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶಿಕೇಂದ್ರಮಹಾಸ್ವಾಮಿಗಳು,ವಿರಕ್ತಮಠ ಕುಪ್ಪೂರು ತಮ್ಮಡಿಹಳ್ಳಿಯ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳು ಆಗಮಿಸಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಈ ಅಪರೂಪದ ದೃಶ್ಯವನ್ನು ಕಣ್ ತುಂಬಿಕೊಳ್ಳಲು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.

ನಾಳೆಯಿಂದ ಭಟ್ಟರಹಳ್ಳಿಯಲ್ಲಿ ದಸರಾ ಮಹೋತ್ಸವ

ಹುಳಿಯಾರು:ಹೋಬಳಿಯ ಭಟ್ಟರಹಳ್ಳಿಯಲ್ಲಿ ಅ.೩೧ರಿಂದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವ ಆರಂಭವಾಗಲಿದ್ದು ನ.೪ರವರೆಗೆ ನಡೆಯಲಿದೆ. ಅ.೩೧ರಂದು ಹಣ್ಣುಕಾಯಿ ಸೇವೆ,ಅಡ್ಡಪಲ್ಲಕ್ಕಿ ಉತ್ಸವ,ರಾತ್ರಿ ಆರತಿ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ನ.೧ರಂದು ಸ್ವಾಮಿಯನ್ನು ಮರಾಠಿ ಪಾಳ್ಯಕ್ಕೆ ಕರೆದೊಯ್ದು ಹಣ್ಣುಕಾಯಿ ಸೇವೆ,ಫಲಹಾರ ಸೇವೆ ನಡೆಸಲಾಗುವುದು.ರಾತ್ರಿ ಚಂದ್ರಮಂಡಲೋತ್ಸವ,ಉಯ್ಯಾಲೋತ್ಸವ ಹಾಗೂ ಅನ್ನ ಸಂತರ್ಪಣೆ ಮತ್ತು ಭಜನೆ ಏರ್ಪಡಿಸಲಾಗಿದೆ. ನ.೨ ರಂದು ತೋಟದಸೂರೆ ಹಾಗೂ ರಾತ್ರಿ ಬಿಲ್ವವೃಕ್ಷವಾಹನೋತ್ಸವದ ನಂತರ ಮಹಿಳಾ ವೀರಗಾಸೆ ನೃತ್ಯ ನಡೆಯಲಿದೆ. ನ>೩ರಂದು ತೋಟದ ಸೂರೆ ಮುಗಿಸಿ ಎಂ.ವಿ.ಹಟ್ಟಿಗೆ ದಯಮಾಡಿಸುವುದು.ರಾತ್ರಿ ಕೈಲಾಸೋತ್ಸವ,ಆರ್ಕೇಸ್ಟ್ರಾ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ನ.೪ರ ಬೆಳಿಗ್ಗೆ ಬಸವನ ಉತ್ಸವ ನಡೆದು ಮದ್ಯಾಹ್ನ ಫಲಾಹಾರ ಸೇವೆ ನಂತರ ಸಂಜೆ ಉತ್ಸವ ನಡೆದು ಶ್ರೀ ಸ್ವಾಮಿಯವರನ್ನು ಮೂಲಸ್ಥಾನಕ್ಕೆ ಕರೆತರಲಾಗುವುದು.

ಸೊಪ್ಪಿನ ಬೆಲೆಯಲ್ಲೂ ತೀವ್ರ ಏರಿಕೆ

ಗುರುವಾರದಂದು ನಡೆದ ವಾರದ ಸಂತೆಯಲ್ಲಿ ನಿತ್ಯ ಬಳಕೆಗೆ ಬೇಕಾದ ತರಕಾರಿ,ಸೊಪ್ಪಿನ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ತಲೆ ನೋವಾಗಿದೆ. ಈ ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿ ದರ ಹೆಚ್ಚಳಕ್ಕೆ ಕಾರಣವಾಗಿದೆ.ತರಕಾರಿಗಳ ದರ ಕಳೆದೊಂದು ತಿಂಗಳಿನಿಂದ ತುಸು ಹೆಚ್ಚೆಇದ್ದು ಇಂದಿನ ಸಂತೆಯಲ್ಲಿ ಸೊಪ್ಪಿನ ಬೆಲೆ ಕೂಡ ಏರಿಕೆಯಾಗಿದ್ದು ತರಕಾರಿ ಬದಲು ಸೊಪ್ಪು ಕಾಳು ಉಪಯೋಗಿಸಲು ಹೊರಟ ಗ್ರಾಹಕರಿಗೆ ಬೆಲೆ ಏರಿಕೆ ಗಾಬರಿ ಉಂಟುಮಾಡಿದೆ. ಪ್ರಮುಖವಾಗಿ ದಿನನಿತ್ಯ ಅಗತ್ಯವಾಗಿ ಬಳಸುವ ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು,ಪಾಲಕ್,ದಂಟಿನ ಸೊಪ್ಪು,ಕರಿಬೇವು ಸೇರಿದಂತೆ ಎಲ್ಲಾ ರೀತಿಯ ಸೊಪ್ಪುಗಳ ಬೆಲೆ ಕಳೆದ ವಾರಕ್ಕಿಂತ ಈ ವಾರ ವಿಪರೀತ ಏರಿಕೆಯಾಗಿದೆ.ಹೆಚ್ಚುಕಮ್ಮಿ ಎರಡು ರೂಪಾಯಿಗೆ ಕಂತೆಯೊಂದಕ್ಕೆ ಸಿಗುತ್ತಿದ್ದ ಮೆಂತೆ, ಪಾಲಕ್‌, ಸಬಸೀಗೆ,ಕೊತ್ತಂಬರಿ ಸೊಪ್ಪು ಐದು ರೂಪಾಯಿಗಿಂತ ಕಡಿಮೆ ಸಿಗದಂತಾಗಿದೆ.ಹತ್ತುರೂಪಾಯಿಗೆ ಎರಡು ಕಂತೆ ಸೊಪ್ಪು ಚೌಕಾಸಿಗೆ ಅವಕಾಶವಿಲ್ಲದಂತೆ ಮಾರುತ್ತಿದ್ದರು. ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ತರಕಾರಿ, ಸೊಪ್ಪು ಬೆಳೆ ನಾಶವಾಗಿ ಬೇಡಿಕೆಗೆ ತಕ್ಕಂತೆ ಸೊಪ್ಪು ಪೂರೈಕೆಯಾಗದೆ ತರಕಾರಿ ದುಬಾರಿಯಾಗಿದ್ದು ಇದರಿಂದಾಗಿ ತರಕಾರಿ ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.

ಹುಳಿಯಾರು ಹೋಬಳಿ ಅಂಬಾಪುರ ಗ್ರಾಮದ 25 ಎಕರೆ ಅರಣ್ಯಭೂಮಿ ಕಬಳಿಕೆ!

25 ಎಕರೆ ಅರಣ್ಯಭೂಮಿ ಕಬಳಿಕೆ! -------------------------- ವಿಜಯವಾಣಿಯಲ್ಲಿ ವಿಶೇಷ ವರದಿ :ಜಗನ್ನಾಥ್ ಕಾಳೇನಹಳ್ಳಿ --------------------------------------------- ತುಮಕೂರು: 225 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸುವ ಭೂಗಳ್ಳರ ಸಂಚು ಇದೀಗ ಬಯಲಾಗಿದೆ. ತಹಸೀಲ್ದಾರ್ ಸೇರಿ ಇತರ 8 ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವ ಸಂಬಂಧ ವಿಜಯವಾಣಿಗೆ ದಾಖಲೆಗಳು ಲಭ್ಯವಾಗಿವೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಅಂಬಾಪುರ ಗ್ರಾಮದ ಸರ್ವೆ ನಂ.46ರ 421.35 ಎಕರೆ ಸರ್ಕಾರಿ ಭೂಮಿಯಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ 225 ಎಕರೆ ಭೂಮಿಯನ್ನು ಕಬಳಿಸುವ ಯತ್ನ ನಡೆದಿದೆ.  ಬಡವರು, ದಲಿತರಿಗೆ ಮಂಜೂರಾದ ಭೂಮಿಯನ್ನು ಕೆ.ಬಿ.ಕ್ರಾಸ್ನ ಎಸ್.ರುದ್ರೇಶ್ ಎಂಬುವರು ಜಿಪಿಎ ಮಾಡಿಸಿಕೊಂಡು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ (2014ರ ಅವಧಿಯಲ್ಲಿ)ಆಗಿದ್ದ ಕಾಮಾಕ್ಷಮ್ಮ ಸೇರಿ 8 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ್ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಯಾರ್ಯಾರ ವಿರುದ್ಧ ಕ್ರಮಕ್ಕೆ ಶಿಫಾರಸು? --------------------------------- ಕಾಮಾಕ್ಷಮ್ಮ-ತಹಸೀಲ್ದಾರ್(ಚಿಕ್ಕನಾಯಕನಹಳ್ಳಿ) , ಇ.ಪ್ರಕಾಶ್-ಭೂದಾಖಲೆಗಳ ಉಪನಿರ್ದೇಶಕ (ಡಿಸಿ ಕಚೇರಿ), ಮಂಜುನಾ

ಬೆಂಗಳೂರು ಬಸ್ ಗಳು ರಶೋ.......ರಶ್

                                           ಪರದಾಡಿದ ಪ್ರಯಾಣಿಕರು                                            --------------------------- ದಸರಾ ಹಬ್ಬಕ್ಕೆ ಸಾಲಾಗಿ ರಜೆ ಸಿಕ್ಕ ಹಿನ್ನಲೆಯಲ್ಲಿ ತಂತಮ್ಮ ಗ್ರಾಮಗಳಿಗೆ ಆಗಮಿಸಿದ್ದವರು ಇಂದು ವಾಪಸ್ ತೆರಳಲು ಬಸ್ ಗಳು ಸಿಗದೆ ಪರಿಪಾಟಲು ಪಡುವಂತಾಯಿತು.ದಸರಾ,ಆಯುಧಪೂಜೆ ಸಾಲು ರಜೆಗಳು ಮುಗಿದ ಹಿನ್ನಲೆಯಲ್ಲಿ ಸೋಮವಾರ ಮುಂಜಾನೆ ಬೆಂಗಳೂರಿಗೆ ತೆರಳುವವರು ಅಪಾರ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು. ಹುಳಿಯಾರು ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ಪ್ರಯಾಣಿಕರು. ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು ಹಬ್ಬಕ್ಕೆಂದು ತಂತಮ್ಮ ಊರುಗಳಿಗೆ ಬಂದಿದ್ದರು. ಹಬ್ಬ ಹಾಗೂ ಭಾನುವಾರದ ರಜೆ ಮುಗಿಸಿ ಸೋಮವಾರದಂದು ವಾಪಸ್ಸ್ ಕೆಲಸಕ್ಕೆ ಹಾಜರಾಗಲು ಬಸ್ ನಲ್ಲಿ ತೆರಳಲು ಬಂದಿದ್ದರಿಂದ ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಬಸ್ ನಿಲ್ದಾಣ ಗಿಜುಗುಟ್ಟುತ್ತಿತ್ತು. ಎಲ್ಲಾ ಬಸ್ಸುಗಳು ಹೊಸದುರ್ಗದಿಂದ ಬರುತ್ತಿದ್ದವಾದ್ದರಿಂದ ಹುಳಿಯಾರಿಗೆ ಬರುವಷ್ಟರಲ್ಲೇ ಬಸ್ ಸೀಟ್ ಗಳೆಲ್ಲಾ ತುಂಬಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಬರುತ್ತಿದ್ದ ಬಸ್ ಗೆ ಒಮ್ಮೆಲೆ ಎಲ್ಲಾ ಪ್ರಯಾಣಿಕರು ನುಗ್ಗುತ್ತಿದ್ದರಿಂದ ಬಸ್ ಹತ್ತುವುದೆ ತ್ರಾಸದಾಯಕವಾಗಿತ್ತು. ಸ

ತನುಷ ರಾಜ್ಯಮಟ್ಟಕ್ಕೆ ಆಯ್ಕೆ

ಹುಳಿಯಾರಿನ ವಾಸವಿ ಶಾಲೆಯ ಎಂ.ಎನ್.ತನುಷ (7ನೇ ತರಗತಿ) ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಗಾಣಧಾಳು ಗ್ರಾ.ಪಂ. ಕಚೇರಿಗೆ ಬೀಗ

ಶುಕ್ರವಾರ ಬೀಗ ತೆರವು  ಹುಳಿಯಾರು ಹೋಬಳಿ ಗಾಣಧಾಳು ಗ್ರಾಮ ಪಂಚಾಯ್ತಿಗೆ ನರೇಗಾ  ಕಾಮಗಾರಿ ಬಿಲ್ ಪಾವತಿಸಲು                                      ಒತ್ತಾಯಿಸಿ ಬೀಗಜಡಿದು ಪ್ರತಿಭಟಿಸಿದರು. ಉದ್ಯೋಗಖಾತ್ರಿ ಕಾಮಗಾರಿಗಳ ಹಣ ಬಿಡುಗಡೆ ವಿಳಂಬ ಖಂಡಿಸಿ ಫ‌ಲಾನುಭವಿಗಳು ಗ್ರಾ.ಪಂಗೆ   ಬೀಗ ಜಡಿದು ಪ್ರತಿಭಟಿಸಿದ ಘಟನೆ ಹೋಬಳಿಯ ಗಾಣಧಾಳು ಗ್ರಾಮದಲ್ಲಿ ಗುರುವಾರ ನಡೆಯಿತು. ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಸರಸ್ವತಿಬಾಯಿ ಸಾಮಾನ್ಯ ಸಭೆ ಕರೆದಿದ್ದರು.  ವಿಷಯ ತಿಳಿದ ಗ್ರಾಮಸ್ಥರು ಸಭೆಯ ನಡುವೆಯೇ ಉದ್ಯೋಗ ಖಾತ್ರಿ ಹಣ ಪಾವತಿಗೆ ಒತ್ತಾಯಿಸಿದರು. ‘ಮೊದಲು ನಮ್ಮ ಕೂಲಿ ಹಣ ಕೊಡಿ, ಆಮೇಲೆ ನಿಮ್ಮ ಸಭೆ ನಡೆಸಿ’ ಎಂದಾಗ ಗ್ರಾಪಂ ಸದಸ್ಯರುಗಳು ಅವರುಗಳ ಬೆಂಬಲಕ್ಕೆ ನಿಂತರು. ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಹುದಿ– ಬದು ನಿರ್ಮಾಣ, ಕೊಟ್ಟಿಗೆ ಮನೆ, ಇಂಗುಗುಂಡಿ ಸೇರಿದಂತೆ ಅನೇಕ ಕಾಮಗಾರಿ ಪೂರ್ಣಗೊಂಡು 2 ವರ್ಷ ಕಳೆದರೂ ರೈತರಿಗೆ ಹಣ ಸಂದಾಯವಾಗಿಲ್ಲ ಎಂದು ದೂರಿ ಕಾಮಗಾರಿಯ ಹಣ ಪಾವತಿಗೆ ಪಟ್ಟು ಹಿಡಿದರು. ಗ್ರಾಪಂ ಕಾರ್ಯದರ್ಶಿಯಿಂದ ಸಮಂಜಸವಾದ ಉತ್ತರ ಬಾರದಿದ್ದರಿಂದ ಸದಸ್ಯರೂ ಸಭೆಯಿಂದ ಹೊರಬಂದರಿಂದ ರೊಚಿಗೆದ್ದ ಫಲಾನುಭವಿಗಳು ಕಚೇರಿಗೆ ಬೀಗ ಜಡಿದು ಹಣ ಪಾವತಿ ಆಗುವವರೆಗೂ ಬೀಗ ತೆರೆಯುವುದಿಲ್ಲವೆಂದು ಪಟ್ಟು ಹಿಡಿದರು. 2012-13 ನೇ ಸಾಲಿನ 172 ಮಂದಿಗೆ ಶೌಚಾಲಯದ ಸಪ್ಲೆ ಬಿಲ್‌ 1199 ರೂ. ಪಾವತಿ ಆಗಿಲ್ಲ. 2012-13 ನೇ ಸಾಲಿನ ಕೆಲ

ಹುಳಿಯಾರಿನಲ್ಲಿ ಸಂಭ್ರಮದ ಗಣಪತಿ ವಿಸರ್ಜನೋತ್ಸವ

ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಸ್ಥಾಪಿಸಲಾಗಿದ್ದ ಪಾರ್ವತಿ ಪರಮೇಶ್ವರ ಸಹಿತ ಗಣಪತಿ ಹಾಗೂ ಗಜಾನನ ಯುವಕ ಸಂಘದಿಂದ ಪ್ರತಿಷ್ಟಾಪಿಸಲಾಗಿದ್ದ ಬೆಂಕಿ ಗಣಪತಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಶುಕ್ರವಾರದಂದು ವಿಸರ್ಜಿಸಲಾಯಿತು.           ಕಳೆದ ಮೂರು ದಿನಗಳಿಂದ ಈ ಸಂಬಂಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಹೋಮಹವನಾದಿಗಳನ್ನು ನಡೆದು ಅನ್ನಸಂತರ್ಪಣೆ ಮಾಡಿದರೆ ಗುರುವಾರದಂದು ಸಾಂಸ್ಕೃತಿಕಕಾರ್ಯಕ್ರಮ ಹಾಗೂ ಸಂಜೆ ಉತ್ಸವ ,ಮೆರವಣಿಗೆ ಏರ್ಪಡಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿದ ತರವಾಯು ಭವ್ಯವಾದ ಹೂವಿನ ಮಂಟಪದಲ್ಲಿ ಅಲಂಕೃತ ಗಣಪತಿಯನ್ನು ಕೂರಿಸಿ ಅಲಂಕರಿಸಿ ಪಟ್ಟಣದ ಗಾಂಧಿಪೇಟೆ,ಬಸ್ ನಿಲ್ದಾಣ,ರಾಂಗೋಪಾಲ್ ಸರ್ಕಲ್ ಮುಂತಾದ ಬೀದಿಗಳಲ್ಲಿ ಭಕ್ತಾದಿಗಳೊಂದಿಗೆ ಮೆರವಣಿಗೆ ನಡೆಸಿ ಶುಕ್ರವಾರ ಮುಂಜಾನೆ ಸಮೀಪದ ತಿರುಮಲಾಪುರದ ಕೆರೆಯಲ್ಲಿ ಮೂರ್ತಿಯ ಗಂಗಾಪ್ರವೇಶ ಮಾಡಲಾಯಿತು.             ಮೆರವಣಿಗೆ ಸಂದರ್ಭದಲ್ಲಿ ವೀರಗಾಸೆ, ಗೊಂಬೆ ಕುಣಿತ, ಚಿಟ್ಟಿಮೇಳ, ನಾದಸ್ವರ, ಸ್ಯಾಕ್ಸೋಪೋನ್ ವಾದನಗಳು ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.           ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ನ

ಇಂದು ಗಣೇಶ ಉತ್ಸವ

ಹುಳಿಯಾರಿನ ಶ್ರೀಗಜಾನನ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಇಂದಿರಾನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮಹೋ ತ್ಸವದ ಅಂಗವಾಗಿ ಅ.೮ರಂದು ರಾತ್ರಿ ರಾಜಬೀದಿ ಉತ್ಸವ ಏರ್ಪಡಿಸಲಾಗಿದೆ. ಉತ್ಸವದ ಅಂಗವಾಗಿ ಅಭಿಷೇಕ, ನವಗ್ರಹಪೂಜೆ, ಕುಂಕುಮಾರ್ಚನೆ ಮತ್ತಿ ತರ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗುವುದು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಿದೆ. ದರ್ಬಾರ್ ಮುತ್ತಿನ ಮಂಟಪದಲ್ಲಿ ಕುಳ್ಳಿರಿಸಿ ಉತ್ಸವ ಮಾಡಲಾಗುತ್ತದೆ.

ಜನವಸತಿ ಜಾಗದಲ್ಲಿ ಮೊಬೈಲ್ ಟವರ್

ಗಡುವು ಮುಗಿದರೂ ಸ್ಥಳಾಂತರಿಸದ ಟವರ್ ವಿದ್ಯುತ್ ಸಂಪರ್ಕ ಕಡಿತ ------------------------ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಿಸಿದಲ್ಲದೆ ಇದರ ಸೂಕ್ತ ನಿರ್ವಹಣೆಗೆ ವಿಫಲರಾಗಿ ಆಗಾಗ್ಗೆ ಸಮಸ್ಯೆಗೆ ಕಾರಣವಾಗುತ್ತಿದ್ದ ಟವರ್ ನವರಿಗೆ ನೀಡಿದ್ದ ಅಂತಿಮ ಗಡುವು ನೀಡಿದ್ದಾಗ್ಯೂ ಸ್ಥಳಾಂತರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಟವರ್ ಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕವನ್ನು ಗ್ರಾಮ ಪಂಚಾಯ್ತಿಯವರು ಕಡಿತಗೊಳಿಸಿದ ಘಟನೆ ಹುಳಿಯಾರಿನಲ್ಲಿ ನಡೆದಿದೆ. ಹುಳಿಯಾರಿನ ಜನವಸತಿ ಪ್ರದೇಶದಲ್ಲಿ ಸ್ಥಾಪಿಸಿರುವ ಮೊಬೈಲ್ ಟವರ್ ಸ್ಥಳಾಂತರವಾಗಬೇಕೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.ಈ ಸಂದರ್ಭದಲ್ಲಿ ಬಡಾವಣೆಯ ಸಾಕಷ್ಟು ಜನ ಸೇರಿದ್ದರು. ಸಮಸ್ಯೆ ಏನು : ಜನ ವಸತಿ ಪ್ರದೇಶದಲ್ಲಿ ದೂರ ಸಂಪರ್ಕ ಸ್ಥಾವರ ಅಳವಡಿಸಲು ನ್ಯಾಯಾಲಯ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ದೂರಸಂಪರ್ಕ ಸ್ಥಾವರ ನಿರ್ಮಿಸಲು ಸ್ಥಳಿಯ ಪಂಚಾಯ್ತಿ ಪರವಾನಿಗೆ ಅಗತ್ಯವಾಗಿದ್ದು ಸಾರ್ವಜನಿಕ ಸುರಕ್ಷತೆ ಹಾಗೂ ಆರೋಗ್ಯದ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶವಿದೆ.ಹಾಗಿದ್ದು ಕೂಡ ಬೆಂಗಳೂರಿನ ಇಂಡಸ್ ಟವರ್ಸ್ ಸಂಸ್ಥೆಯವರು ಪಟ್ಟಣದ ನಾಲ್ಕನೇ ಬ್ಲಾಕಿನಲ್ಲಿ ನಿರ್ಮಿಸಿರುವ ಟವರ್ ಗೆ ಸೂಕ್ತ ಸುರಕ್ಷತ ಕ್ರಮ ಕೈಗೊಂಡಿಲ್ಲ ಹಾಗೂ ಯಾವುದೋ ಜಾಗದ ಪರವಾನಿಗೆ ಪಡೆದು ಸುಳ್ಳು ಮಾಹಿತಿ ನೀಡಿ ಟವರ್ ನಿರ್ಮಿಸಿದ್ದಾರೆಂಬುದು ಇಲ್ಲ