ಜಿಲ್ಲೆಯಲ್ಲೇ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ, ತಾಲ್ಲೂಕಿನ ಅರ್ಹತೆ ಹೊಂದಿದ್ದರೂ ಪಟ್ಟಣವಾಗೇ ಉಳಿದಿರುವ , ಜಿಲ್ಲೆಯಲ್ಲಿಯೇ 33 ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿಯಾಗಿರುವ ಹುಳಿಯಾರಿನಲ್ಲಿ ಕಸದ್ದೇ ಕಾರುಬಾರಾಗಿದ್ದು , ಪಟ್ಟಣದ ತುಂಬೆಲ್ಲಾ ಕಸದ ರಾಶಿ ರಾಶಿ ರಾರಾಜಿಸುತ್ತಿದ್ದು, ಜನತೆ ಅಸಹ್ಯಪಟ್ಟುಕೊಂಡು ಓಡಾಡುವಂತಾಗಿದೆ. ಆಸ್ಪತ್ರೆಯ ಪ್ರವೇಶದ್ವಾರದಲ್ಲೆ ಕಾಣಸಿಗುವ ಕಸದ ರಾಶಿ . ಹೌದು .ಹದಿಮೂರು ವಾರ್ಡ್ ಗಳನ್ನು ಹೊಂದಿ ಸರಿಸುಮಾರು 17 ಸಾವಿರ ಜನ ಸಂಖ್ಯೆಯನ್ನು ಮೀರಿರುವ ಪಟ್ಟಣದಲ್ಲಿ ಕಸವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವಾರ್ಡ್ ನಲ್ಲೂ ಕಸ ಶೇಖರಣೆಗೆ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಗುಂಡಿಗಳು,ಚರಂಡಿ ಬದಿ ಹಾಗೂ ಖಾಲಿ ನಿವೇಶನಗಳೇ ಕಸ ಸಂಗ್ರಹಗಾರವಾಗಿ ನಿವಾಸಿಗಳು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯದಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಕಸದ ಸಂಗ್ರಹಗಾರವಾಗಿರುವ ಕೆರೆ ಅಂಗಳ ಪಟ್ಟಣದ ಬಸ್ ನಿಲ್ದಾದ ಅಂಗಡಿಗಳ ಬಳಿ , ರಾಜ್ ಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಡ್ ಬಳಿ, ಹುಳಿಯಾರಮ್ಮದೇವಿ ವೃತ್ತ,ಅಜಾದ್ ನಗರ,ಕೆಂಚಾಂಬ ನಗರ,ರಾಂಗೋಪಾಲ್ ಸರ್ಕಲ್, ಕೆಇಬಿ ಕಚೇರಿಯ ಕಾಂಪೌಡ್ ಬಳಿ , ಹುಳಿಯಾರು ಅಮಾನಿಕೆರೆ ಏರಿಯ ಪಕ್ಕ ಸೇರಿದಂತೆ ಎಲ್ಲಾ ವಾರ್ಡ್ ಗಳ ಗಲ್ಲಿಯೂ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದರೂ ಸಹ ಕಂಡರು ಕಾಣದಂತೆ ಜನ ಇಲ್ಲಿಯೇ ಸಂಚರಿಸುತ್ತ...