ಪಟ್ಟಣದ ಗಾಂಧಿಪೇಟೆಯಲ್ಲಿರುವ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾಂಪೌಡ್ ಪಕ್ಕ ರಾಶಿರಾಶಿ ಕಸ ಬಿದ್ದಿದ್ದರೂ ಸಹ ಎದುರಲ್ಲೇ ಇರುವ ಪಂಚಾಯ್ತಿವರಾಗಲಿ, , ಹಾಸ್ಟೆಲ್ ಅಧಿಕಾರಿಗಳಾಗಲಿ ಇತ್ತ ಗಮನಕೊಡದೆ ನಿರ್ಲಕ್ಷಿಸಿದ್ದಾರೆ.
ಸಮಾಜಕಲ್ಯಾಣ ಇಲಾಖೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಮುಖ್ಯದ್ವಾರದ ಕಾಂಪೌಂಡ್ ಬದಿಯ ಜಾಗ ತಿಪ್ಪೆಯಾಗಿ ಬಳಸುತ್ತಿದ್ದು, ಕಲ್ಲಿನ ರಾಶಿ,ಪ್ಲಾಸ್ಟಿಕ್ ಚೀಲ ,ಕಸ ಸೇರಿದಂತೆ ಇತರ ತ್ಯಾಜ್ಯಗಳನ್ನು ಇಲ್ಲಿ ತಂದು ಸುರಿಯುತ್ತಿದ್ದು ತಿರುಗಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಕಸದ ರಾಶಿಯನ್ನು ಶೀಘ್ರವೇ ತೆರವುಗೊಳಿಸದೇ ಹೋದಲ್ಲಿ ಮಳೆಬಂದಾಗ ಕೊಳೆತು ಸಾಂಕ್ರಾಮಿಕರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ರಸ್ತೆಯಲ್ಲಿ ತಿರುಗಾಡುವ ಸ್ಥಳೀಯ ಗ್ರಾ.ಪಂ ಯವರು ಎಚ್ಚೆತ್ತು ಕಸದ ರಾಶಿಯನ್ನು ಶೀಘ್ರವೇ ತೆರವುಗೊಳಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಹುಳಿಯಾರಿನ ಗಾಂಧಿಪೇಟೆಯಲ್ಲಿರುವ ಹಾಸ್ಟೆಲ್ ಮುಂಭಾಗ ಬಿದ್ದಿರುವ ತ್ಯಾಜ್ಯದ ರಾಶಿರಾಶಿ. |
ಸಮಾಜಕಲ್ಯಾಣ ಇಲಾಖೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಮುಖ್ಯದ್ವಾರದ ಕಾಂಪೌಂಡ್ ಬದಿಯ ಜಾಗ ತಿಪ್ಪೆಯಾಗಿ ಬಳಸುತ್ತಿದ್ದು, ಕಲ್ಲಿನ ರಾಶಿ,ಪ್ಲಾಸ್ಟಿಕ್ ಚೀಲ ,ಕಸ ಸೇರಿದಂತೆ ಇತರ ತ್ಯಾಜ್ಯಗಳನ್ನು ಇಲ್ಲಿ ತಂದು ಸುರಿಯುತ್ತಿದ್ದು ತಿರುಗಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಕಸದ ರಾಶಿಯನ್ನು ಶೀಘ್ರವೇ ತೆರವುಗೊಳಿಸದೇ ಹೋದಲ್ಲಿ ಮಳೆಬಂದಾಗ ಕೊಳೆತು ಸಾಂಕ್ರಾಮಿಕರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ರಸ್ತೆಯಲ್ಲಿ ತಿರುಗಾಡುವ ಸ್ಥಳೀಯ ಗ್ರಾ.ಪಂ ಯವರು ಎಚ್ಚೆತ್ತು ಕಸದ ರಾಶಿಯನ್ನು ಶೀಘ್ರವೇ ತೆರವುಗೊಳಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ