ಹುಳಿಯಾರು ಮುಂಗಾರು ಬೆಳೆ ವಿಮೆ ಪರಿಹಾರ ಪಡೆಯುವ ಸಲುವಾಗಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಪಹಣಿಯು ಸಹ ಒಂದಾಗಿದ್ದು, ಅದನ್ನು ಪಡೆಯಲು ಗುರುವಾರದಂದು ಪಟ್ಟಣದ ನಾಢಕಚೇರಿಯ ಆಟಲ್ ಜನಸ್ನೇಹಿಕೇಂದ್ರದ ಎದುರು ಉರಿಬಿಸಿಲಿನಲ್ಲೇ ನಿಂತ ರೈತರು ಪಹಣಿಗಾಗಿ ಪರದಾಡುತ್ತಿದ್ದು ಕಂಡುಬಂತು.
ರಾಜ್ಯ ಸರಕಾರ ರೈತರಿಗೆ ಬೆಳೆವಿಮೆ ತುಂಬಲು ಜೂನ್ 30 ಅಂತಿಮ ದಿನ ನಿಗದಿಪಡಿಸಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಪಹಣಿಯು ಮುಖ್ಯವಾಗಿದ್ದು ಅದನ್ನು ಪಡೆಯಲು ರೈತರು ಒಮ್ಮೆಲೇ ಮುಗಿಬಿದಿದ್ದಾರೆ. ಎಲ್ಲರೂ ಒಮ್ಮೆಲೇ ಬಂದು ಪಹಣೆ ಪಡೆಯಲು ಮುಂದಾಗಿರುವುದರಿಂದ ನಾಢಕಚೇರಿ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗಿ ಒಬ್ಬರಿಗೊಬ್ಬರು ಜಗಳವಾಡುವ ಹಂತಕ್ಕೂ ಪರಿಸ್ಥಿತಿ ತಲುಪ್ಪಿತ್ತು.
ಎಲ್ಲಾ ಕಡೆ ಒಮ್ಮೆಲೇ ಪಹಣಿ ತೆಗೆಯುತ್ತಿರುವುದರಿಂದ ಸರ್ವರ್ ನಿಧಾನವಾಗಿರುವುದಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸೇರಿದಂತೆ ಕೆಲ ತಾಂತ್ರಿಕ ತೊಂದರೆಗಳ ಹಿನ್ನಲೆಯಲ್ಲಿ ಪಹಣಿಗಳು ಬರುವುದು ಸಹ ನಿಧಾನವಾಗಿದೆ.ಇದರಿಂದಾಗಿ ಪಹಣಿ ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಪಹಣಿ ಪಡೆಯುವಂತಾಗಿದೆ.
ಹುಳಿಯಾರಿನ ನಾಢಕಚೇರಿಯ ಆಟಲ್ ಜನ ಸ್ನೇಹಿಕೇಂದ್ರದ ಎದುರು ಉರಿಬಿಸಿಲಿನಲ್ಲೇ ಸರದಿಯಲ್ಲಿ ನಿಂತಿರುವ ರೈತರು. |
ರಾಜ್ಯ ಸರಕಾರ ರೈತರಿಗೆ ಬೆಳೆವಿಮೆ ತುಂಬಲು ಜೂನ್ 30 ಅಂತಿಮ ದಿನ ನಿಗದಿಪಡಿಸಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಪಹಣಿಯು ಮುಖ್ಯವಾಗಿದ್ದು ಅದನ್ನು ಪಡೆಯಲು ರೈತರು ಒಮ್ಮೆಲೇ ಮುಗಿಬಿದಿದ್ದಾರೆ. ಎಲ್ಲರೂ ಒಮ್ಮೆಲೇ ಬಂದು ಪಹಣೆ ಪಡೆಯಲು ಮುಂದಾಗಿರುವುದರಿಂದ ನಾಢಕಚೇರಿ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗಿ ಒಬ್ಬರಿಗೊಬ್ಬರು ಜಗಳವಾಡುವ ಹಂತಕ್ಕೂ ಪರಿಸ್ಥಿತಿ ತಲುಪ್ಪಿತ್ತು.
ಎಲ್ಲಾ ಕಡೆ ಒಮ್ಮೆಲೇ ಪಹಣಿ ತೆಗೆಯುತ್ತಿರುವುದರಿಂದ ಸರ್ವರ್ ನಿಧಾನವಾಗಿರುವುದಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸೇರಿದಂತೆ ಕೆಲ ತಾಂತ್ರಿಕ ತೊಂದರೆಗಳ ಹಿನ್ನಲೆಯಲ್ಲಿ ಪಹಣಿಗಳು ಬರುವುದು ಸಹ ನಿಧಾನವಾಗಿದೆ.ಇದರಿಂದಾಗಿ ಪಹಣಿ ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಪಹಣಿ ಪಡೆಯುವಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ