ಹುಳಿಯಾರು ಪಟ್ಟಣದ ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಕುಂಭಾಭಿಷೇಕ ಸಮಿತಿ ವತಿಯಿಂದ ಶ್ರೀವಾಸವಿ ಜೀರ್ಣಾಷ್ಠಬಂಧ ಪುನ: ಪ್ರತಿಷ್ಠಾಪನಾ ಸಹಿತ 108 ಕುಂಭಾಭಿಷೇಕ ಕಾರ್ಯ ನಾಳೆ(ತಾ.09) ಸೋಮವಾರ ಹಾಗೂ ತಾ.10ರ ಮಂಗಳವಾರ ಎರಡು ದಿನಗಳ ಕಾಲ ನಡೆಯಲಿದೆ.
ಇದರ ಅಂಗವಾಗಿ ಭಾನುವಾರ ಸಂಜೆ ಗ್ರಾಮದೇವರುಗಳ ಆಗಮನ,ತಾ.9ರ ಸೋಮವಾರ ಬೆಳಿಗ್ಗೆ ನಡೆಮುಡಿಯೊಂದಿಗೆ ಗಂಗಾ ಭಾಗೀರಥಿ ಪೂಜೆ,ಗುರುಗಣಪತಿ ದೇವತಾ ಪ್ರಾರ್ಥನೆ,ಗಣಪತಿ ಪೂಜೆ,ಸ್ವಸ್ತಿ ವಾಚನ,ದೇವನಾಂದಿ ಸಮಾರಾಧನೆ,ಚಪ್ಪರದ ಪೂಜೆ ನಡೆದು ನಂತರ ಮಧ್ಯಾಹ್ನ ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿದೆ. ಇದೇ ದಿನ ಸಂಜೆ ದೇವಾಲಯ ಪ್ರಾಂಗಣ ಶುದ್ದಿ,ಯಾಗಶಾಲ ಪ್ರವೇಶ,ಅಷ್ಠಾದಿಕ್ಪಾಲಕ ದೇವತಾ ಪ್ರಾರ್ಥನೆ,ಕುಂಭಾಭಿಷೇಕ ಮಂಡಲ ದರ್ಶನ, ಪ್ರಧಾನ ಸಂಕಲ್ಪ ಮಧುಪರ್ಕ,108 ಕುಂಭಸ್ಥಾಪನೆ, ರಾಕ್ಷೋಘ್ನ ವಾಸ್ತುಹೋಮ,ಸ್ಥಾನ ಶುದ್ದಿಹೋಮ,ಬಿಂಬ ಶುದ್ದಿಹೋಮ ಕಾರ್ಯದೊಂದಿಗೆ ಮಹಾಮಂಗಳಾರತಿ ನಡೆಯಲಿದೆ.
ತಾ.10 ರ ಮಂಗಳವಾರ ಬೆಳಿಗ್ಗೆ ಜೀರ್ಣಾಷ್ಠಬಂಧ ಪ್ರತಿಷ್ಠಾಪನೆ, ಗೋಪೂಜೆ, ಮಹಾಗಣಪತಿಹೋಮ,ನವಗ್ರಹೋಮ,ವಾಸವಿ ಮೂಲಮಂತ್ರ ಹೋಮ,ಚಂಡಿಕಾ ಹೋಮ,ಪರಿವಾರ ದೇವತಾ ಮೂಲಮಂತ್ರ ಹೋಮ,ತತ್ವಕಲಾ ಹೋಮ,ಚತುರ್ನವತಿ ಕಲಾವೃದ್ದಿ ಹೋಮ ನಡೆದು ನಂತರ ಪೂರ್ಣಾಹುತಿಯೊಂದಿಗೆ 108 ಕುಂಭಗಳ ಅಭಿಷೇಕ,ಪ್ರಸಾದವಿನೊಯೋಗ ಕಾರ್ಯ ಜರುಗಲಿವೆ. ಇದೇ ದಿನ ಕನ್ನಿಕಾಪರಮೇಶ್ವರಿಯ ರಾಜಬೀದಿ ಉತ್ಸವ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಸಮಿತಿಯ ಬಿ.ವಿ.ಶ್ರೀನಿವಾಸ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ