ಪಟ್ಟಣದ ಕನಕದಾಸ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ನಡೆದ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. |
ಈ ಸಂಧರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಯಿದ್ದು ಅವಕಾಶ ಸಿಕ್ಕಾಗ ಅದನ್ನು ವ್ಯಕ್ತಪಡಿಸಬೇಕು ಎಂದರು. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಇತರ ಯಾವುದೇ ಚಟುವಟಿಕೆಗಳಿಗೆ ಗಮನಗೊಡದೆ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿತರುವಂತೆ ಆಶಿಸಿದರು. ಓದು ಮುಗಿದು ಯಾವುದಾದರೊಂದು ಕೆಲಸಕ್ಕೆ
ಸೇರಿದ ನಂತರ ತಾವು ಓದಿದ ಶಾಲೆಯನ್ನು ಮರೆಯದೆ ಆ ಶಾಲೆಯಲ್ಲಿನ ಮಕ್ಕಳಿಗೆ ತಮ್ಮಿಂದಾಗುವ ಸಹಾಯವನ್ನು ಮಾಡುವ ಮೂಲಕ ಆ ಮಕ್ಕಳಲ್ಲೂ ಪ್ರೇರೇಪಿಸಬೇಕು ಎಂದರು. ಹಿರಿಯ ವಿದ್ಯಾರ್ಥಿ ಸಂಘವನ್ನು ಕಟ್ಟಿ ಬೆಳೆಸಲು ಸಹರಿಸಿದ ಎಲ್ಲಾ ಸದಸ್ಯರನ್ನು,ಅದಕ್ಕೆ ಪ್ರೋತ್ಸಾಹ ನೀಡಿದ ಸಂಸ್ಥೆಯ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು.ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ, ತಮ್ಮ ವಿದ್ಯಾರ್ಥಿ ಜೀವನದ ಹೇಗಿತ್ತು ಹಾಗೂ ಈಗಿನ ವಿದ್ಯಾರ್ಥಿ ಜೀವನ ಯಾವರೀತಿಯಲ್ಲಿದೆ ಎಂಬುದನ್ನು ತಿಳಿಸಿದರಲ್ಲದೆ,ಓದು ಮುಗಿದ ನಂತರ ಮನೆಯಲ್ಲಿ ಕೂರುವುದಕ್ಕಿಂತ ಯಾವುದಾರು ಒಂದು ಸ್ವಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಕಿವಿಮಾತು ಹೇಳಿದರು
ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್, ಮುಖ್ಯಶಿಕ್ಷಕ ಕೃಷ್ಣಯ್ಯ,ಪ್ರಾಚಾರ್ಯ ದಯಾಂದ್, ಹಿರಿಯ ವಿದ್ಯಾರ್ಥಿ ಸಂಘದ ದುರ್ಗರಾಜ್, ಸುಭ್ರಮಣ್ಯ, ಪುಷ್ಪಲತಾ, ರಾಜೇಂದ್ರ, ಭೈರೇಶ್, ರಂಗನಾಥ್, ಕಿರುತೆರೆ ಕಲಾವಿದ ಗೌಡಿರಂಗನಾಥ್,ಪ್ರದೀಪ್,ಶಿವಣ್ಣ ಸೇರಿದಂತೆ ಶಾಲಾ ಸಿಬ್ಬಂದ್ದಿಯವರು ಉಪಸ್ಥಿತರಿದ್ದರು.
ಹುಳಿಯಾರಿನ ಕನಕದಾಸ ಶಾಲೆಯ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಶಂಕರ್ ಹಾಗೂ ರವಿ ಉಚಿತ ನೋಟ್ ಪುಸ್ತಕ ವಿತರಿಸಿದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ