ಕಳೆದ ಹದಿನೈದು ದಿನಗಳಿಂದ ಚಿಕೂನ್ ಗುನ್ಯಾ ಶಂಕೆಯಿಂದ ನರಳುತ್ತಿದ್ದ ಹೋಬಳಿಯ ರಂಗನಕೆರೆ ಗ್ರಾಮದ ಬಗ್ಗೆ ಪತ್ರಿಕೆಯಲ್ಲಿ ವರದಿ ನೋಡಿದ ಮೇಲೆ ಎಚ್ಚೆತ್ತ ಆರೋಗ್ಯ ಇಲಾಖೆಯ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಚಿಕೂನ್ ಗುನ್ಯಾ ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂಚರಿಸಿ 25ಕ್ಕೂ ಹೆಚ್ಚು ಮಂದಿಗೆ ಮಂಡಿನೋವು,ಕೀಲುನೋವು ಕಾಣಿಸಿಕೊಂಡಿದ್ದ ರೋಗಪೀಡಿತರನ್ನು ಪರೀಕ್ಷಿಸಿದ ನಂತರ ಇಬ್ಬರಿಗೆ ಚಿಕುನ್ ಗುನ್ಯಾ ದೃಢಪಟ್ಟಿದೆ ಎಂದರು. ಗ್ರಾಮದಲ್ಲಿ ಸ್ವಚ್ಛತೆಯಿದ್ದು ಕುಡಿಯುವ ನೀರಿನ ಸಿಸ್ಟನ್ ಆಗಾಗ ಬ್ಲಿಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸದ ಕಾರಣ ರೋಗ ಕಾಣಿಸಿಕೊಂಡಿರಬಹುದು ಎಂದ ಅವರು ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ ಕುಡಿಯುವ ನೀರಿನ ಘಟಕ ಸ್ವಚ್ಛಗೊಳಿಸುವಂತೆ ಹಾಗೂ ನೀರಿನ ಮಾದರಿ ಪರೀಕ್ಷೆ ಮಾಡಿಸುವಂತೆ ಸೂಚಿಸಿದರು. ಕಳೆದೊಂದು ವಾರದಿಂದ ಜ್ವರದ ಬಾಧೆಯಿಂದ ನರಳುತ್ತಿರುವ ಸಿಂಚನ ಎಂಬ ಐದು ವರ್ಷದ ಬಾಲಕಿಯ ರಕ್ತ ಪರೀಕ್ಷೆಗೆ ಕಳುಹಿಸಲಾಗಿದ್ದು ಸೋಮವಾರದಿಂದ ಗ್ರಾಮಕ್ಕೆ ಒಬ್ಬರು ವೈದ್ಯರನ್ನು ಕಳುಹಿಸುವ ಮೂಲಕ ಬಾಧಿತರಿಗೆ ಚಿಕಿತ್ಸೆ ನೀಡಲಾಗುವುದೆಂದರು.
ಶನಿವಾರವಷ್ಟೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ಉಪಸ್ಥಿತಿಯಲ್ಲಿ ನಡೆದ ಆರೋಗ್ಯಸಭೆಯಲ್ಲಿ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರ ನೇಮಕದ ಬಗ್ಗೆ ಚರ್ಚಿಸಲಾಗಿದ್ದು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ