ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗುರ್ತಿಸಿ ಜಯಶೀಲರನ್ನಾಗಿ ಮಾಡಿರುವ ಈ ಕ್ಷೇತ್ರದ ಮತದಾರ ಋಣ ನನ್ನ ಮೇಲಿದ್ದು ಅದನ್ನು ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದೆ ನನ್ನ ಗುರಿಯಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಬಿ.ಎಸ್.ಮುದ್ದಹನುಮೇಗೌಡ ತಿಳಿಸಿದರು.
ಹುಳಿಯಾರು ಸಮೀಪದ ಸೀಗೆಬಾಗಿ ಗೇಟ್ ನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿ ಸೀಗೆಬಾಗಿ ಗೇಟ್ ನಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಬಿ.ಎಸ್.ಮುದ್ದಹನುಮೇಗೌಡ ಮಾತನಾಡಿದರು. |
ರಾಷ್ಟ್ರಾದ್ಯಂತ ಬಿಜೆಪಿ ಅಲೆಯಿದ್ದರೂ ಸಹ ಅದನ್ನು ತುಮಕೂರು ಕ್ಷೇತ್ರಕ್ಕೆ ಬಿಟ್ಟುಕೊಳ್ಳದೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನ್ನನ್ನು ಚುನಾಯಿಸಿದ ತಮ್ಮೆಲ್ಲರಿಗೂ ಆಬಾರಿಯಾಗಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿತಿದ್ದು ಅವುಗಳನ್ನು ಬಗೆಹರಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಕ್ಷೇತ್ರದ ಹೆಚ್ಚಿನ ಅಭಿವೃದ್ದಿಗಾಗಿ ತಾವು ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡುವ ಮೂಲಕ ಹೊಸ ಯೋಜನೆಗಳನ್ನು ರೂಪಿಸುವುದರ ಕಡೆ ಗಮನಗೊಡುವುದಾಗಿ ತಿಳಿಸಿದರು.
ಗ್ರಾಮದ ಸಮಸ್ಯೆಗಳ ಬಗ್ಗೆ ಊರಿನಲ್ಲಿನ ನಮ್ಮ ಮುಖಂಡರುಗಳ ಅಥವಾ ತಮ್ಮ ಗಮನಕ್ಕೆ ತಂದು ಅವುಗಳನ್ನು ಬಗೆಹರಿಸಿಕೊಳ್ಳಿ ,ಅದನ್ನು ಬಿಟ್ಟು ತಮ್ಮತಮ್ಮಲ್ಲಿ ಅವುಗಳನ್ನು ಚರ್ಚಿಸುತ್ತಾ ಮೈಶಮ್ಯ ಮನೋಭಾವ ಬೆಳೆಯುಂತೆ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ ಅವರು ಎಲ್ಲರೂ ಸಹೋದರರಂತೆ ಬಾಳೋಣ ಎಂದರು.
ಇದಕ್ಕೂ ಮುನ್ನಾ ಸೀಗೆಬಾಗಿಯ ದುರ್ಗಾಪರಮೇಶ್ವರಿ ಮೂಲಸ್ಥಾನದಲ್ಲಿ ಪೂಜೆಸಲ್ಲಿಸಿ ನಂತರ ಸಸಿ ನೆಡುವ ಮೂಲಕ ಮನೆಗೊಂದು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ , ಪರಿಸರವನ್ನು ಸಮೃದ್ದವಾಗಿ ಬೆಳೆಸುವುದರಿಂದ ನಾವು ಸುಖವಾಗಿ ಜೀವಿಸಬಹುದಾಗಿ ಎಂದರು.
ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯರಾದ ಮಂಜುಳಾ,ದೇವರಾಜು, ಎಪಿಎಂಸಿ ಉಪಾಧ್ಯಕ್ಷ ವೈ.ಸಿ.ಸಿದ್ರಾಮಯ್ಯ, ಮುಖಂಡ ಸಾಸಲು ಸತೀಶ್,ತಾಲ್ಲೂಕು ಯುತ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಆಶೋಕ್, ಗ್ರಾ.ಪಂ.ಸದಸ್ಯರಾದ ಬೋರಲಿಂಗಯ್ಯ,ರೇವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ