ವಿಶ್ವದೆಲ್ಲಡೆ ಗಂಭೀರ ಪರಿಸರ ನಾಶದ ವಿಷಯವಾಗಿ ಗಂಭೀರ ಚರ್ಚೆ ನಡೆಯುತ್ತಿದ್ದು ಪರಿಸರ ಮಹತ್ವದ ಬಗ್ಗೆ ಜಾಗೃತಿ ಮೂಡಿಲಾಗುತ್ತಿದೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಸೈಯದ್ ಇಬ್ರಾಹಿಂ ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಗುರುವಾರ ನಡೆದ ವಿಶ್ವಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಭಯೋತ್ಪಾದನೆ, ಅಣ್ವಸ್ತ್ರ ಬಳಕೆ ಹಾಗೂ ಪರಿಸರ ನಾಶದ ಬಗ್ಗೆ ವಿಶ್ವದ ಎಲ್ಲಾ ರಾಷ್ಟ್ರಗಳು ಚರ್ಚೆ ಆರಂಭಿಸಿವೆ, ಇದನ್ನು ನೋಡಿದರೆ ಪ್ರಸ್ತುತ ಪರಿಸರದ ಮೇಲಾಗಿರುವ ಅತ್ಯಾಚಾರದಿಂದ ಜೀವ ಸಂಕುಲಕ್ಕೆ ವಿನಾಶ ಕಾದಿದೆ ಎಂದರು. 70ರ ದಶಕದಲ್ಲೇ ಸ್ವಿಡನ್ ದೇಶದಲ್ಲಿ 114 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿ ಪರಿಸರ ಉಳಿಸುವ ಬಗ್ಗೆ 6 ದಿನಗಳ ಕಾಲ ಆಂದೋಲನವನ್ನೇ ಮಾಡಿದರು. ಆಂದೋಲನದಲ್ಲಿ ಜೂನ್ 5ನೇ ದಿನವನ್ನು ಪರಿಸರ ದಿನವನ್ನಾಗಿ ಆಚರಣೆ ಮಾಡಲು ಘೋಷಿಸಲಾಯಿತು. ಆದರೆ ಆ ದಿನದ ಬಗ್ಗೆ ಇತ್ತೀಚಿನ ವರೆಗೂ ಹೆಚ್ಚು ಜಾಗೃತಿ ಮೂಡಿರಲಿಲ್ಲ,ಪ್ರಸ್ತುತ ಪರಿಸರದ ಕಾಳಜಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬೇಕಿದ್ದು ಮನೆಗೊಬ್ಬರು ಸಾಲು ಮರದ ತಿಮ್ಮಕ್ಕ ಆಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲರಾದ ಡಿ.ಇಂದಿರಾ ಮಾತನಾಡಿ, ಪರಿಸರ ನಾಶದಿಂದ ನಾವು ಸಹ ನಾಶವಾಗುತ್ತೇವೆ, ಇಂದಿನ ಯುವಜನಾಂಗ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದು ಕರೆ ನೀಡಿದರು. ವಿಜ್ಞಾನ ಶಿಕ್ಷಕಿ ವಿದ್ಯಾಕುಂಚನೂರು ಪ್ರಾಸ್ತಾವಿಕವಾಗಿ ಮಾತನಾಡಿದರು,ಮನ್ಸೂರ್ ಅಹಮದ್ ಸ್ವಾಗತಿಸಿ ಕಲಾವತಿ ವಂದಿಸಿದರು. ಪರಿಸರ ಸಂರಕ್ಷಣೆ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಗುರುವಾರ ನಡೆದ ವಿಶ್ವಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಭಯೋತ್ಪಾದನೆ, ಅಣ್ವಸ್ತ್ರ ಬಳಕೆ ಹಾಗೂ ಪರಿಸರ ನಾಶದ ಬಗ್ಗೆ ವಿಶ್ವದ ಎಲ್ಲಾ ರಾಷ್ಟ್ರಗಳು ಚರ್ಚೆ ಆರಂಭಿಸಿವೆ, ಇದನ್ನು ನೋಡಿದರೆ ಪ್ರಸ್ತುತ ಪರಿಸರದ ಮೇಲಾಗಿರುವ ಅತ್ಯಾಚಾರದಿಂದ ಜೀವ ಸಂಕುಲಕ್ಕೆ ವಿನಾಶ ಕಾದಿದೆ ಎಂದರು. 70ರ ದಶಕದಲ್ಲೇ ಸ್ವಿಡನ್ ದೇಶದಲ್ಲಿ 114 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿ ಪರಿಸರ ಉಳಿಸುವ ಬಗ್ಗೆ 6 ದಿನಗಳ ಕಾಲ ಆಂದೋಲನವನ್ನೇ ಮಾಡಿದರು. ಆಂದೋಲನದಲ್ಲಿ ಜೂನ್ 5ನೇ ದಿನವನ್ನು ಪರಿಸರ ದಿನವನ್ನಾಗಿ ಆಚರಣೆ ಮಾಡಲು ಘೋಷಿಸಲಾಯಿತು. ಆದರೆ ಆ ದಿನದ ಬಗ್ಗೆ ಇತ್ತೀಚಿನ ವರೆಗೂ ಹೆಚ್ಚು ಜಾಗೃತಿ ಮೂಡಿರಲಿಲ್ಲ,ಪ್ರಸ್ತುತ ಪರಿಸರದ ಕಾಳಜಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬೇಕಿದ್ದು ಮನೆಗೊಬ್ಬರು ಸಾಲು ಮರದ ತಿಮ್ಮಕ್ಕ ಆಗಬೇಕು ಎಂದು ಆಶಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆಯನ್ನು ಇತಿಹಾಸ ಪ್ರಾಧ್ಯಾಪಕ ಸೈಯದ್ ಇಬ್ರಾಹಿಂ ಉದ್ಘಾಟಿಸಿದರು.ಉಪಪ್ರಾಂಶುಪಾಲರಾದ ಡಿ.ಇಂದಿರಾ ಇತರರಿದ್ದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ