ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಮೊದಲನೇ ಅವಧಿಯ ಎರಡನೇ ಅಧ್ಯಕ್ಷರಾಗಿ ಬಿಜೆಪಿಯ ಕಂದಿಕೆರೆ ಬಿ.ಸಣ್ಣಯ್ಯ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಪ್ಪತ್ತು ತಿಂಗಳ ಮೊದಲ ಅವಧಿಯಲ್ಲಿ ಬಿಜೆಪಿಯ ಶಿವರಾಜ್ ಅವರು 2013ರ ಜನವರಿಯಲ್ಲಿ ಆಯ್ಕೆಯಾಗಿದ್ದು ತಮ್ಮ 15 ತಿಂಗಳ ಆಡಳಿತದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಹಿನ್ನಲೆಯಲ್ಲಿ ತಹಶಿಲ್ದಾರ್ ಕಾಮಾಕ್ಷಮ್ಮ ಅವರ ನೇತೃತ್ವದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಈ ಹಿಂದೆಯಾದ ಒಡಂಬಡಿಕೆಯಂತೆ ಬಿಜೆಪಿಯ ಸಣ್ಣಯ್ಯ ಅವರು ಮಾತ್ರವೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಮೊದಲನೇ ಅವಧಿಯ ಎರಡನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
|
ಹುಳಿಯಾರು ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಬಿ.ಸಣ್ಣಯ್ಯ ಅವರು ಆಯ್ಕೆಯಾಗಿದ್ದು,ಮಾಜಿಶಾಸಕರಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ ಅಭಿನಂದಿಸಿದರು. ಮಾಜಿ ಅಧ್ಯಕ್ಷ ಶಿವರಾಜ್,ಉಪಾಧ್ಯಕ್ಷ ಸಿದ್ರಾಮಯ್ಯ ಇದ್ದಾರೆ. |
ಅಧ್ಯಕ್ಷರಾಗಿ ಆಯ್ಕೆಯಾದ ಸಣ್ಣಯ್ಯ ಮಾತನಾಡಿ ತಮ್ಮೆಲ್ಲರ ಒಪ್ಪಿಗೆಯಂತೆ ಈ ಅಧಿಕಾರ ಸ್ವೀಕರಿಸಿದ್ದು, ಅದಕ್ಕೆ ಬದ್ದರಾಗಿ ನಡೆಯುದಾಗಿ ಹಾಗೂ ಮಾರುಕಟ್ಟೆಯನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ತಿಳಿಸಿದರು. ನಮ್ಮ ನಂಬಿಕೆಯನ್ನು ಉಳಿಸಿಕೊಂಡು ಹೋಗುವಲ್ಲಿ ಹಾಗೂ ಮಾರುಕಟ್ಟೆಗೆ ಉತ್ತಮ ಲಾಭಾಂಶ ತಂದು ಕೊಡುವಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿಶಾಸಕರಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ ಉಪಸ್ಥಿತರಿದ್ದು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಣ್ಣಯ್ಯಅವರನ್ನು ಅಭಿನಂದಿಸಿದರು. ಎಪಿಎಂಸಿ ಉಪಾಧ್ಯಕ್ಷರಾದ ವೈ.ಸಿಸಿದ್ರಾಮಯ್ಯ, ಮಾಜಿ ಅಧ್ಯಕ್ಷ ಶಿವರಾಜ್, ನಿರ್ದೇಶಕರುಗಳಾದ ಆರ್.ಪಿ.ವಸಂತಯ್ಯ, ಸಣ್ಣಕರಿಯಪ್ಪ,ರುದ್ರೇಶ್, ದ್ರಾಕ್ಷಾಯಿಣಿ, ಶಾಂತಕುಮಾರ್, ಸೋಮಶೇಖರಯ್ಯ, ಬಸವರಾಜು, ಈಶ್ವರಮೂರ್ತಿ ಹಾಗೂ ತಾ.ಪಂ.ಅಧ್ಯಕ್ಷ ನವೀನ್,ಮಾಜಿ ಅಧ್ಯಕ್ಷ ಶಶಿಧರ್ ಸೇರಿದಂತೆ ಇತರರಿದ್ದರು.
|
ಎಪಿಎಂಸಿ ಅಧ್ಯಕ್ಷರಿಗಾಗಿ ನಡೆದ ಸಭೆಯಲ್ಲಿ ಕೆ.ಎಸ್.ಕೆ. ಹಾಗೂ ಜೆ,ಸಿ.ಎಂ ಒಟ್ಟಿಗೆ. |
|
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಣ್ಣಯ್ಯ ಮಾತನಾಡುತ್ತಿರುವುದು. |
|
ಎಪಿಎಂಸಿಯ ನಿರ್ದೇಶಕರು ನೂತನ ಅಧ್ಯಕ್ಷರೊಂದಿಗೆ . |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ