ಹುಳಿಯಾರು ಪಟ್ಟಣದಲ್ಲಿ ಕೊಬ್ಬರಿ,ಜವಳಿ ವ್ಯಾಪಾರದ ಮೂಲಕ ಗಣ್ಯ ವರ್ತಕರಾಗಿ ಗುರುತಿಸಿಕೊಂಡಿದ್ದ ಎಂ.ಪಿ.ರಾಮಕೃಷ್ಣಶೆಟ್ಟಿಯವರು ಮಂಗಳವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು.85 ವರ್ಷ ಬಾಳ್ವೆ ನಡಿಸಿದ ಇವರು ಇಬ್ಬರು ಮಕ್ಕಳು ಹಾಗೂ ಮಗಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.ಹುಳಿಯಾರು ಆರ್ಯವೈಶ್ಯಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಇಲ್ಲಿನ ಆರ್ಯವೈಶ್ಯಮಂಡಳಿಗೆ 25ವರ್ಷ ತುಂಬಿದ ಸಂದರ್ಭದಲ್ಲಿ ನಡೆದ ಕುಂಭಾಭಿಷೇಕ ಸಮಾರಂಭದಲ್ಲಿ ಕಳೆದ ಹದಿನೈದು ದಿನಗಳ ಹಿಂದಷ್ಟೆ ಸನ್ಮಾನಿಸಲಾಗಿತ್ತು.ಮೃತರಿಗೆ ಇಲ್ಲಿನ ಆರ್ಯವೈಶ್ಯಮಂಡಳಿಯ ನಿರ್ದೇಶಕರುಗಳ ಪರವಾಗಿ ಎಲ್.ಆರ್.ಚಂದ್ರಶೇಖರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಇಲ್ಲಿನ ಮುಕ್ತಿಧಾಮದಲ್ಲಿ ಬುಧವಾರ ಬೆಳಿಗ್ಗೆ ನೆರವೇರಿತು. ಜನಪ್ರತಿನಿಧಿಗಳು, ಬಂಧು ಬಾಂಧವರು ಮೃತರ ಅಂತಿಮ ದರ್ಶನ ಪಡೆದರು.
ಎಂ.ಪಿ.ರಾಮಕೃಷ್ಣಶೆಟ್ಟಿ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ