ಜಮೀನಿನಲಿದ್ದ ಸಮಾಧಿಯೊಂದನ್ನು ಕಿತ್ತು ಹಾಕಿರುವ ವಿಚಾರ ವಿವಾದಕ್ಕಿಡಾಗಿದ್ದು ಈ ಸಂಬಂಧ ಸಮಾಧಿ ಕಿತ್ತವರನ್ನು ಬಿಟ್ಟು 9 ಮಂದಿ ಅಮಾಯಕರ ಮೇಲೆ ಕೇಸು ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಬಡಕೆಗುಡ್ಲು ಗ್ರಾಮಸ್ಥರು ಗುರುವಾರ ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಸಮಾಧಿ ಕಿತ್ತ ವಿಷಯವಾಗಿ ಅಮಾಯಕರ ಮೇಲೆ ಕೇಸು ದಾಖಲಿಸಿದ್ದಾರೆಂದು ಆರೋಪಿಸಿ ಹುಳಿಯಾರು ಹೋಬಳಿ ಬಡಕೆಗುಡ್ಲು ಗ್ರಾಮಸ್ಥರು ಗುರುವಾರ ಪೊಲೀಸ್ ಠಾಣೆ ಆವರಣದಲ್ಲಿ ಜಮಾಯಿಸಿರುವುದು. |
ವಿವಾದ : ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಮುದ್ದವೀರಪ್ಪ ಎಂಬುವರು ಬಡಕೆಗುಡ್ಲು ಗ್ರಾಮದಲ್ಲಿ ಜಮೀನಿನನ್ನು ಕೊಂಡಿದ್ದು ಅವರು ನಿಧನದ ನಂತರ ಅಲ್ಲಿಯೇ ಅವರ ಪಾರ್ಥೀವ ಶರೀರವನ್ನು ಬಡಕೆಗುಡ್ಲು ಗ್ರಾಮದ ಜಮೀನಿನಲ್ಲಿ ಸಮಾಧಿ ಮಾಡಲಾಗಿತ್ತು. ಕಳೆದ ನಾಲ್ಕೈದು ದಿವಸಗಳ ಹಿಂದೆ ಈ ಸಮಾಧಿಯನ್ನು ಕಿತ್ತು ಹಾಕಿರುವುದು ವಿವಾದಕ್ಕೆ ಎಡೆ ಮಾಡಿದ್ದು, ಠಾಣೆ ಮೆಟ್ಟಿಲೇರಿದೆ.
ಕಳೆದ 7 ವರ್ಷಗಳ ಹಿಂದೆ ನಿಧನ ಹೊಂದಿದ್ದ ತಮ್ಮ ತಂದೆಯ ಸಮಾಧಿಯನ್ನು ಕಳೆದ ನಾಲ್ಕೈದು ದಿವಸಗಳ ಹಿಂದೆ ಕೀಳಲಾಗಿದೆ ಎಂದು ಅವರ ಪುತ್ರ ಮೂಲತ: ತುಮಕೂರಿನ ವಾಸಿ ನಾಗರಾಜಗೌಡ ಅರೋಪಿಸಿದ್ದು ಬಡಕೆಗುಡ್ಲು ಗ್ರಾಮದ ಅನಂತಕುಮಾರ್, ರಾಜಪ್ಪ, ಬಿ.ಪಿ.ರಂಗಸ್ವಾಮಿ, ತಿಮ್ಮರಾಜು, ಬಿ.ಎ.ನಾಗರಾಜು, ಸಣ್ಣಕಾಮಯ್ಯ, ಬಿ.ಜಿ.ರಾಜಪ್ಪ, ಗೋವಿಂದರಾಜು, ಮುದ್ದಯ್ಯ ಎಂಬುವರ ಮೇಲೆ ಠಾಣೆಯಲ್ಲಿ ದೂರು ನೀಡಿದ್ದು ಅವರುಗಳ ಮೇಲೆ ಪ್ರಕರಣ ದಾಖಲಾಗಿದೆ.
ಠಾಣೆಯಲ್ಲಿ ದೂರು ದಾಖಲಾಗಿರುವವರೆಲ್ಲಾ ಅಮಾಯಕರಾಗಿದ್ದು ಸಮಾಧಿ ಕಿತ್ತಿರುವುದಿಲ್ಲ ಅದರೂ ಅವರ ಮೇಲೆ ಪೊಲೀಸರು ಒತ್ತಡದಿಂದ ಪ್ರಕರಣ ದಾಖಲು ಮಾಡಿ ಗ್ರಾಮ ತೊರೆಯುವಂತೆ ಮಾಡಿದ್ದಾರೆ ಎಂದು ಮುಖಂಡ ಬಿ.ಆರ್.ರಂ.ಗನಾಥ್ ಮುಂದಾಳತ್ವದಲ್ಲಿ ಮಹಿಳೆಯರನ್ನು ಒಳಗೊಂಡಂತೆ ನೂರಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಠಾಣೆಗೆ ಧಾವಿಸಿ ಅಮಾಯಕರ ಮೇಲಿನ ಕೇಸನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು.
ನಿವೃತ್ತ ಪೊಲೀಸ್ ಅವರ ಮಗನಾದ ನಾಗರಾಜಗೌಡ ರಾಜಕೀಯ ಬಲದಿಂದ ಅಮಾಯಕರಿಗೆ ತೊಂದರೆ ಮಾಡುತ್ತಿದ್ದಾರೆ . ಹೀಗೆ ಮಾಡುವುದಾದರೇ ಇಡೀ ಗ್ರಾಮಸ್ಥರೆಲ್ಲರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿ.ಎನ್.ಕೃಷ್ಣಮೂರ್ತಿ, ಬಿ.ಎನ್.ಗೋಪಾಲಯ್ಯ, ಬಿ.ಟಿ.ಚಂದನ್ ಸೇರಿದಂತೆ ಮತ್ತಿತರರು ಇದ್ದರು. ಸಂಜೆಯಾದರೂ ಸಹ ಗ್ರಾಮಸ್ಥರು ತೆರಳದೆ ಅಲ್ಲಿಯೇ ಜಮಾಯಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ