ಪಟ್ಟಣದ ಟೌನ್ ಕೋ-ಅಪರೇಟಿವ್ ಬ್ಯಾಂಕ್ ನ ವ್ಯವಸ್ಥಾಪಕರಾದ ಮಹಲಿಂಗಪ್ಪನವರ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿಯತ್ತ ದಾಫುಗಾಲಿಟ್ಟಿದ್ದು ಲಾಭಾಂಶದಲ್ಲಿ ಮುನ್ನೆಡೆದಿದೆ ಎಂದು ಶಿರಾ ಬ್ಯಾಂಕ್ ನ ಅಧ್ಯಕ್ಷರಾದ ಎಸ್.ಆರ್.ಶಿವಕುಮಾರಸ್ವಾಮಿ ಪ್ರಶಂಶಿಸಿದರು.
ಇಲ್ಲಿನ ದಿ ಟೌನ್ ಕೋ-ಅಪರೇಟೀವ್ ಬ್ಯಾಂಕ್ ಹುಳಿಯಾರು ಶಾಖೆಯಲ್ಲಿ ಕಳೆದ 9 ವರ್ಷಗಳಿಂದ ಶಾಖಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಸ್.ಮಹಾಲಿಂಗಪ್ಪ ಅವರಿಗೆ ಬ್ಯಾಂಕ್ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಶುದ್ದ ಹಸ್ತರಾಗಿ, ನಿಸ್ವಾರ್ಥ ಸೇವೆಸಲ್ಲಿಸಿದ ಇವರು ತಮ್ಮ ಅವಧಿಯಲ್ಲಿ ಹುಳಿಯಾರು ಶಾಖೆಯಲ್ಲಿ ಹೆಚ್ಚು ವಹಿವಾಟು ನಡೆಸುವ ಮೂಲಕ ಸಾಕಷ್ಟು ಲಾಭಾಂಶ ತಂದು ಕೊಟ್ಟಿದ್ದರು. ಗ್ರಾಹಕ ಸ್ನೇಹಿಯಾಗಿದ್ದ ಇವರು ಕೊಟ್ಟ ಸಾಲವನ್ನು ಅವಧಿಯೊಳಗೆ ವಸೂಲಿ ಮಾಡುವ ಮೂಲಕ ಬ್ಯಾಂಕ್ ನ ಪ್ರಗತಿಗೆ ಸಹಕರಿಸಿದರು ಎಂದರು.
ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಹುಳಿಯಾರು ಶಾಖೆಯಲ್ಲಿ ಹತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು ಸಂಬಳಕೋಸ್ಕರ ಕೆಲಸ ಮಾಡದೆ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ಎಂದು ಹುಳಿಯಾರು ಶಾಖಾಧ್ಯಕ್ಷ ಜಯನಾರಾಯಣ ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಮಹಲಿಂಗಪ್ಪ ಮಾತನಾಡಿ , ಉಳಿತಾಯ ಠೇವಣಿ , ನಿಶ್ಚಿತ ಠೇವಣಿ, ಚಾಲ್ತಿ ಠೇವಣಿಯಲ್ಲಿ ಪ್ರಗತಿ ಸಾಧಿಸಿದ್ದು, ಗುರಿಮೀರಿ ಸಂಗ್ರಹಿಸಿದ್ದು, ಅವಶ್ಯ ಸಾಲ ಸೌಲಭ್ಯದ ಮೂಲಕ ಗ್ರಾಹಕರ ವ್ಯವಹಾರಕ್ಕೆ ಅನುಕೂಲ ಕಲ್ಪಿಸಿದ್ದು, ತಮ್ಮ ಅವಧಿಯಲ್ಲಿ ಉತ್ತಮ ಸೇವೆಗಳಿಸಿದ ತೃಪ್ತಿಯಿದೆ ಎಂದರು.
ಗ್ರಾಹಕರ ಪರವಾಗಿ ರೈತಸಂಘದ ಸತೀಶ್, ಏಜೆಂಟ್ ಲೋಕೇಶ್, ವರ್ತಕ ಬಾಲಾಜಿ,ಶಿಕ್ಷಕ ಬಸವಮೂರ್ತಿ,ಮಾಜಿ ಛೇರ್ ಮನ್ ವೆಂಕಟಾಛಲಪತಿ ಶೆಟ್ಟಿ ಮಾತನಾಡಿದರು.
ಈ ಸಂಧರ್ಭದಲ್ಲಿ ಬ್ಯಾಂಕ್ ನ ನಿರ್ದೇಶಕರಾದ ಕೋದಂಡರಾಮಪ್ಪ,ರಾಘವೇಂದ್ರ,ನೂತನ ವ್ಯವಸ್ಥಾಪಕ ಕುಮಾರ್ ಸ್ವಾಮಿ ಸೇರಿದಂತೆ ಹುಳಿಯಾರು ಶಾಖೆಯ ರಾಮಚಂದ್ರಪ್ಪ, ಸೌಭಾಗ್ಯಮ್ಮ,ರವಿಕುಮಾರ್, ಲಕ್ಷ್ಮಿನಾರಾಯಣ್ , ಸಿದ್ರಾಮಯ್ಯ ಹಾಜರಿದ್ದರು.

![]() |
ಹುಳಿಯಾರಿನ ದಿ ಟೌನ್ ಕೋ-ಅಪರೇಟೀವ್ ಬ್ಯಾಂಕ್ ,ಹುಳಿಯಾರು ಶಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಮಹಲಿಂಗಪ್ಪನವರಿಗೆ ಆಡಳಿತ ಮಂಡಲಿಯಿಂದ ಸನ್ಮಾನಿಸಲಾಯಿತು. |
ಶುದ್ದ ಹಸ್ತರಾಗಿ, ನಿಸ್ವಾರ್ಥ ಸೇವೆಸಲ್ಲಿಸಿದ ಇವರು ತಮ್ಮ ಅವಧಿಯಲ್ಲಿ ಹುಳಿಯಾರು ಶಾಖೆಯಲ್ಲಿ ಹೆಚ್ಚು ವಹಿವಾಟು ನಡೆಸುವ ಮೂಲಕ ಸಾಕಷ್ಟು ಲಾಭಾಂಶ ತಂದು ಕೊಟ್ಟಿದ್ದರು. ಗ್ರಾಹಕ ಸ್ನೇಹಿಯಾಗಿದ್ದ ಇವರು ಕೊಟ್ಟ ಸಾಲವನ್ನು ಅವಧಿಯೊಳಗೆ ವಸೂಲಿ ಮಾಡುವ ಮೂಲಕ ಬ್ಯಾಂಕ್ ನ ಪ್ರಗತಿಗೆ ಸಹಕರಿಸಿದರು ಎಂದರು.
![]() |
ಹುಳಿಯಾರು ಶಾಖೆ ಸಿಬ್ಬಂದಿ ಜೊತೆಯಲ್ಲಿ. |
ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಹುಳಿಯಾರು ಶಾಖೆಯಲ್ಲಿ ಹತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು ಸಂಬಳಕೋಸ್ಕರ ಕೆಲಸ ಮಾಡದೆ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ಎಂದು ಹುಳಿಯಾರು ಶಾಖಾಧ್ಯಕ್ಷ ಜಯನಾರಾಯಣ ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಮಹಲಿಂಗಪ್ಪ ಮಾತನಾಡಿ , ಉಳಿತಾಯ ಠೇವಣಿ , ನಿಶ್ಚಿತ ಠೇವಣಿ, ಚಾಲ್ತಿ ಠೇವಣಿಯಲ್ಲಿ ಪ್ರಗತಿ ಸಾಧಿಸಿದ್ದು, ಗುರಿಮೀರಿ ಸಂಗ್ರಹಿಸಿದ್ದು, ಅವಶ್ಯ ಸಾಲ ಸೌಲಭ್ಯದ ಮೂಲಕ ಗ್ರಾಹಕರ ವ್ಯವಹಾರಕ್ಕೆ ಅನುಕೂಲ ಕಲ್ಪಿಸಿದ್ದು, ತಮ್ಮ ಅವಧಿಯಲ್ಲಿ ಉತ್ತಮ ಸೇವೆಗಳಿಸಿದ ತೃಪ್ತಿಯಿದೆ ಎಂದರು.
ಗ್ರಾಹಕರ ಪರವಾಗಿ ರೈತಸಂಘದ ಸತೀಶ್, ಏಜೆಂಟ್ ಲೋಕೇಶ್, ವರ್ತಕ ಬಾಲಾಜಿ,ಶಿಕ್ಷಕ ಬಸವಮೂರ್ತಿ,ಮಾಜಿ ಛೇರ್ ಮನ್ ವೆಂಕಟಾಛಲಪತಿ ಶೆಟ್ಟಿ ಮಾತನಾಡಿದರು.
ಈ ಸಂಧರ್ಭದಲ್ಲಿ ಬ್ಯಾಂಕ್ ನ ನಿರ್ದೇಶಕರಾದ ಕೋದಂಡರಾಮಪ್ಪ,ರಾಘವೇಂದ್ರ,ನೂತನ ವ್ಯವಸ್ಥಾಪಕ ಕುಮಾರ್ ಸ್ವಾಮಿ ಸೇರಿದಂತೆ ಹುಳಿಯಾರು ಶಾಖೆಯ ರಾಮಚಂದ್ರಪ್ಪ, ಸೌಭಾಗ್ಯಮ್ಮ,ರವಿಕುಮಾರ್, ಲಕ್ಷ್ಮಿನಾರಾಯಣ್ , ಸಿದ್ರಾಮಯ್ಯ ಹಾಜರಿದ್ದರು.
![]() |
ಮಾಜಿ ಛೇರ್ಮನ್ ವೆಂಕಟಾಛಲಪತಿ ಶೆಟ್ಟಿ ಮಾತನಾಡುತ್ತಿರುವುದು. |
![]() |
ಶಿಕ್ಷಕ ಬಸವಮೂರ್ತಿಯವರೊಂದಿಗೆ ಮಹಲಿಂಗಪ್ಪ ಮತ್ತು ಅವರ ಮಕ್ಕಳು. |
![]() |
ಗ್ರಾಹಕನ್ನು ಉದ್ದೇಶಿಸಿ ಮಾತನಾಡುತ್ತಿರುವ ಮಹಲಿಂಗಪ್ಪ. |
![]() |
ವರ್ತಕ ಎಲ್.ಆರ್.ಬಾಲಾಜಿ ಮಾತನಾಡುತ್ತಿರುವುದು |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ