ಗ್ರಾಮಪಂಚಾಯ್ತಿ ಸದಸ್ಯರಾಗಿದ್ದ ಹೆಚ್.ವಿ.ಶ್ರೀನಿವಾಸ್ ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ನಿಧನರಾದರು. ಕೆಲಸದ ನಿಮಿತ್ತ ತಿಪಟೂರಿಗೆ ತೆರಳಿದ್ದ ಅವರು ಅಲ್ಲಿಯೇ ಅಸ್ವಸ್ಥರಾಗುತ್ತಿದ್ದಂತಯೆ ಕೂಡಲೇ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹುಳಿಯಾರಿನ ನಿವಾಸದಲ್ಲಿ ಮೃತರ ಅಂತಿಮ ದರ್ಶನ ಪಡೆದ ಶಾಸಕ ಸಿ.ಬಿ.ಸುರೇಶ್ ಬಾಬು ಕುಟುಂಬಕ್ಕೆ ಸಾಂತ್ವನ ಹೇಳಿದರು.ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್,ಗ್ರಾಪಂ ಅಧ್ಯಕ್ಷೆ ಕಾಳಮ್ಮ,ಸದಸ್ಯರುಗಳಾದ ಧನುಷ್ ರಂಗನಾಥ್,ಅಶೋಕ್ ಬಾಬು,ಗೀತಾಬಾಬು,ಪಟಾಕಿ ಶಿವಣ್ಣ,ಬಾಲರಾಜು,ರಾಘವೇಂದ್ರ,ಹೇಮಂತ,ಅಹ್ಮದ್ ಖಾನ್ ಸೇರಿದಂತೆ ಗ್ರಾಪಂ ಸದಸ್ಯರುಗಳು , ಸಿಬ್ಬಂದಿ ವರ್ಗದವರು ಮುಂತಾದವರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ