ಗ್ರಾ.ಪಂ. ಅಧ್ಯಕ್ಷರ ಚುನಾವಣೆಯನ್ನ ಪ್ರತಿಷ್ಠೆಯನ್ನಾಗಿಸಿಕೊಂಡಿರುವ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮೆಲ್ಲಾ ಬೆಂಬಲಿತ ಗ್ರಾ.ಪಂ.ಸದಸ್ಯರೊಂದಿಗೆ ಪ್ರವಾಸ ತೆರಳಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿನ ಪಂಚಾಯ್ತಿಯಲ್ಲಿ ಅವಿಶ್ವಾಸ ಅಥವಾ ಹೊಸ ಅಧ್ಯಕ್ಷರ ಚುನಾವಣೆ ಎಂದರೆ ಪ್ರವಾಸಕ್ಕೆ ತೆರಳುವುದ ಮಾಮೂಲಿ ವಿಚಾರವಾಗಿದ್ದು, ಗುರುವಾರ ನಡೆಯಲಿಯಲಿರುವ ಅಧ್ಯಕ್ಷ ಚುನಾವಣೆಗೆ ನೇರವಾಗಿ ರೆಸಾರ್ಟ್ ನಿಂದಲೆ ಬಂದು ಮತಚಲಾಯಿಸಲಿದ್ದಾರೆ. ಕಳೆದ 15 ದಿನಗಳಲ್ಲಿ ಇದು 2 ನೇ ಪ್ರವಾಸವಾಗಿದೆ. ಪಂಚಾಯ್ತಿಯ ಒಟ್ಟು 33 ಸದಸ್ಯರ ಪೈಕಿ 28 ಸದಸ್ಯರು ಜೆಡಿಎಸ್ ಬೆಂಬಲಿಸಿದ್ದು ಗೆಲುವು ತಮ್ಮದೇ ಎಂದು ತಿಳಿದಿದ್ದರೂ ಸಹ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಪ್ರವಾಸ ಹೋಗಿರುವುದು ಸಾರ್ವಜನಿಕರಲ್ಲಿ ಯಕ್ಷ ಪ್ರಶ್ನೆಯಾಗಿದೆ.
ಕಳೆದ ವಾರವಷ್ಟೆ ಅವಿಶ್ವಾಸ ಸಂಧರ್ಭದಲ್ಲಿ ಮುತ್ತತ್ತಿ ಪ್ರವಾಸ ಮುಗಿಸಿ ಬಂದ ಗ್ರಾ.ಪಂ ಸದಸ್ಯರುಗಳು ಇದೀಗ ಮತ್ತೆ ಭದ್ರ ಪ್ರಾಜಕ್ಟ್ ನ ಜಂಗಲ್ ರೆಸಾರ್ಟ್ ನಲ್ಲಿ 28 ಜನ ಬೆಂಬಲಿತರೊಂದಿಗೆ ಒಟ್ಟು 38 ಮಂದಿ ತಂಗಿದ್ದಾರೆ. ಗ್ರಾ.ಪಂ.ಸದಸ್ಯರಾಗುವುದೆಂದರೆ ಅಧ್ಯಕ್ಷ ಚುನಾವಣೆ ಸಂದರ್ಭಗಳಲ್ಲಿ ಪ್ರವಾಸ ಖಾಯಂ ಎಂಬಂತಾಗಿದ್ದು ಇದೀಗ ಈ ಸಾಲಿನ ತಮ್ಮ 5 ವರ್ಷದ ಅವಧಿಯಲ್ಲಿ ಇದು ನಾಲ್ಕು ಬಾರಿ ಪ್ರವಾಸವಾಗಿದೆ.

ಹುಳಿಯಾರು ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯರು ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರವಾಸ ತೆರಳಿರುವುದು |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ