ಹೋಬಳಿ ದೊಡ್ಡಬಿದರೆ ಗ್ರಾಮದ ಸಮೀಪದ ಹೆದ್ದಾರಿ ಪಕ್ಕದ ಡಾಕ್ಟರ್ ಗೇಟ್ ಬಳಿಯ ತೋಟದ ಹಾದಿಯಲ್ಲಿ ಎಳೆದಿರುವ ಮೈನ್ಸ್ ವೈರ್ ಜಗ್ಗಿ ಅಪಾಯದ ಅಂಚಿನಲ್ಲಿದ್ದರೂ ಸಹ ಬೆಸ್ಕಾಂನ ಯಾರೊಬ್ಬರು ಇತ್ತ ಗಮನಿಸದೆ ಮೌನವಹಿಸಿದ್ದಾರೆ ಎಂದು ಸ್ಥಳಿಯ ಡಿ.ಕೆ.ರಮೇಶ್ ದೂರಿದ್ದಾರೆ.
ಹೆದ್ದಾರಿ ಪಕ್ಕದ ಶ್ಯಾನುಭೋಗರ ತೋಟದ ಟಿಸಿಯಿಂದ ಮತ್ತೊಂದು ಕಂಬಕ್ಕೆ ಎಳೆದಿರುವ ವೈರ್ ಕಾಲಕ್ರಮೇಣದಲ್ಲಿ ಕೈಗೆಟಕುವಂತೆ ಜಗ್ಗಿರುವುದಲ್ಲದೆ ಯಾವುದೇ ಕ್ಷಣದಲ್ಲಾದೂ ತುಂಡರಿಸಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದೇ ದಾರಿಯಲ್ಲಿ ನಿತ್ಯ ಎತ್ತಿನಗಾಡಿ,ದನಕರು ಸೇರಿದಂತೆ ಅನೇಕ ಮಂದಿ ಕೆಲಸಗಾರರು,ಮಕ್ಕಳು ಓಡಾಡುತ್ತಿರುತ್ತಾರೆ. ತಂತಿ ಜಗ್ಗಿರುವುದರಿಂದ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದು ಈ ಬಗ್ಗೆ ಇಲಾಖೆಯ ಲೈನ್ ಮನ್, ಮೀಟರ್ ರೀಡರ್ ಹಾಗೂ ಕಚೇರಿಗೂ ತಿಳಿಸಿದ್ದರೂ ಸಹ ಇದುವರೆಗೂ ಯಾರು ಬಂದು ಇದನ್ನು ಸರಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಏನಾದರೂ ತೊಂದರೆಯಾಗುವ ಮೊದಲು ಇಲಾಖೆಯವರು ಎಚ್ಚೆತ್ತು ಇದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಡಾಕ್ಟರ್ ಗೇಟ್ ಬಳಿಯ ತೋಟದ ಹಾದಿಯಲ್ಲಿ ಕೈಗೆಟಕುವಂತೆ ಜೋತು ಬಿದ್ದುರುವ ವಿದ್ಯುತ್ ತಂತಿಯನ್ನು ತೋರಿಸುತ್ತಿರುವ ರೈತರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ