ವಚನ ಸಾಹಿತ್ಯ ಅಧ್ಯಯನ ಮಾಡುವುದರಿಂದ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬಹುದೆಂದು ಬಸವಧರ್ಮ ಪೀಠಾಧ್ಯಕ್ಷರಾದ ಡಾ||ಮಾತೆ ಮಹಾದೇವಿ ತಿಳಿಸಿದರು.
ಯಳನಡು ಗ್ರಾಮದ ಬಸವಯೋಗಿ ಸಿದ್ದರಾಮೇಶ್ವರ ಸಂಘದ ವತಿಯಿಂದ ಸೋಮವಾರ ನಡೆದ ನೂತನ ಬಸವ ಮಂಟಪ ಹಾಗೂ ಪ್ರಾರ್ಥನಾ ಮಂದಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
|
ಹುಳಿಯಾರು ಹೋಬಳಿ ಯಳನಡುವಿನಲ್ಲಿ ನಡೆದ ನೂತನ ಬಸವ ಮಂಟಪ ಹಾಗೂ ಪ್ರಾರ್ಥನಾ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಮಾತೆಮಹಾದೇವಿ,ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ,ವೈ.ಆರ್.ಮಲ್ಲಿಕಾರ್ಜುನಯ್ಯ ಇತರರಿದ್ದಾರೆ.
|
ಸಮಾನತೆ ಸಾರುವ ವಚನ ಸಾಹಿತ್ಯ ಅಧ್ಯಯನ ಮಾಡದೇ ಹೋದಲ್ಲಿ ಸಂಸ್ಕೃತಿ ಹಾಳಾಗುತ್ತದೆ ಎಂದ ಅವರು ವೀರಶೈವ ಎಂಬುದು ಜಾತಿಯಲ್ಲ ಅದೊಂದು ಧರ್ಮವಾಗಿದೆ. ಜಾತಿ,ವರ್ಣ,ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ ಹಾಗೂ ಕಲ್ಯಾಣ ರಾಜ್ಯ ನಿರ್ಮಾಣದ ಗುರಿ ಈ ಧರ್ಮದ ಧ್ಯೇಯವಾಗಿದ್ದು ಇದಕ್ಕೆ ಮಾನ್ಯತೆ ನೀಡಬೇಕಿದೆ ಎಂದರು. ಯಳನಡು ಸಿದ್ದರಾಮೇಶ್ವರರ ತಪೋಭೂಮಿಯಲ್ಲಿ ಇಂತಹ ಪ್ರಾರ್ಥನಾ ಮಂದಿರ ಸ್ಥಾಪನೆಯಾಗಿರುವುದು ಶ್ಲಾಘನೀಯ ಇದು ಇಲ್ಲಿಗೆ ಬರುವ ಶರಣರಿಗೆ ವಚನ ಸಾಹಿತ್ಯ ಉಣಬಡಿಸುವ ಕೇಂದ್ರವಾಗಲಿ ಎಂದು ಆಶಿಸಿದರು.
ಬೆಂಗಳೂರಿನ ಬಸವ ಮಂಟಪದ ಬಸವಕುಮಾರಸ್ವಾಮೀಜಿ ವಿಶ್ವಗುರು ಬಸವೇಶ್ವರರ ಅಮೃತಶಿಲಾ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದರು. ಯಳನಡು-ಅರಸೀಕೆರೆ ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಬೈಲಹೊಂಗಲ ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವಧರ್ಮ ತತ್ವಪ್ರಚಾರಕ ಸಣ್ಣನಂಜಪ್ಪ,ಮಾಜಿ ತಾಪಂ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ ,ಸಿದ್ದರಾಮೇಶ್ವರ ಸಮುದಾಯ ಭವನದ ಅಧ್ಯಕ್ಷ ಜಿ.ಬಸವರಾಜು,ಕರಿಯಮ್ಮ ದೇಗುಲ ಸಮಿತಿ ಮಾಜಿ ಅಧ್ಯಕ್ಷ ಲಾಳಿ ವೈ.ಕೆ.ಸೋಮಶೇಖರಯ್ಯ, ಯಳನಡು ಬಸವಯೋಗಿ ಸಿದ್ದರಾಮೇಶ್ವರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,ಕಾರ್ಯದರ್ಶಿ ಮಹೇಶ್ ಶಾಸ್ತ್ರಿ,ಸದಸ್ಯರಾದ ಸುದರ್ಶನಾ ಚಾರ್,ವೈ.ಬಿ.ನಾಗರಾಜು ಇತರರಿದ್ದರು. ಎಸ್.ನಾಗಭೂಷಣ ಪಟೇಲ್ ಸ್ವಾಗತಿಸಿ,ಹೊಸದುರ್ಗ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೆ.ನಾ.ಬೊಮ್ಮಲಿಂಗಪ್ಪ ನಿರೂಪಿಸಿದರು. ಬೆಂಗಳೂರಿನ ನಿಸರ್ಗ ಮತ್ತು ಚೈತ್ರ, ತುರುವೇಕೆರೆ ಸಂತೋಷ್ ಕುಮಾರ್ ವಚನ ನೃತ್ಯರೂಪ ನಡೆಸಿಕೊಟ್ಟರು.
|
ಯಳನಡು ಗ್ರಾಮದಲ್ಲಿ ನಿರ್ಮಿಸಿರುವ ನೂತನ ಬಸವ ಮಂಟಪ ಹಾಗೂ ಪ್ರಾರ್ಥನಾ ಮಂದಿರ. |
|
ಮಾತೆ ಮಹಾದೇವಿ ಅವರಿಂದ ನೂತನ ಬಸವಣ್ಣನ ವಿಗ್ರಹಕ್ಕೆ ಪೂಜೆ. |
|
ಬಸವಧರ್ಮ ಪೀಠಾಧ್ಯಕ್ಷರಾದ ಡಾ||ಮಾತೆ ಮಹಾದೇವಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ