ಹುಳಿಯಾರು: ಕೈಗಾರಿಕ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಮೂಲಕ ತಂದೆ ತಾಯಿಗಳಿಗೆ ನೆರವಾಗಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಬಡಗಿ ರಾಮಣ್ಣ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಯೋಗಿನಾರಾಯಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿನ ಕೈಗಾರಿಕೆಗಳನ್ನು ಸೇರಲು ಇಲ್ಲಿ ಉತ್ತಮ ತಾಂತ್ರಿಕ ಕೌಶಲ್ಯದ ತರಬೇತಿ ನೀಡಲಾಗಿದ್ದು ಆ ಮೂಲಕ ಅವರುಗಳು ಕೌಶಲ್ಯಯುತ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದರು
.
![]() |
ಯೋಗಿನಾರಾಯಣ ಕೈಗಾರಿಕಾ ತರಬೇತಿ ಶಾಲೆಯಲ್ಲಿ ನಡದ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಡಗಿ ರಾಮಣ್ಣ ಮಾತನಾಡುತ್ತಿರುವುದು |
ಪಟ್ಟಣದ ಯೋಗಿನಾರಾಯಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿನ ಕೈಗಾರಿಕೆಗಳನ್ನು ಸೇರಲು ಇಲ್ಲಿ ಉತ್ತಮ ತಾಂತ್ರಿಕ ಕೌಶಲ್ಯದ ತರಬೇತಿ ನೀಡಲಾಗಿದ್ದು ಆ ಮೂಲಕ ಅವರುಗಳು ಕೌಶಲ್ಯಯುತ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದರು
.
![]() |
ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಣ್ಣವರದಯ್ಯ ಮಾತನಾಡಿದರು |
ಸಂಸ್ಥೆಯ ಉಪಾಧ್ಯಕ್ಷ ಸಣ್ಣವರದಯ್ಯ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ಸಿ.ಎನ್ ಬಸವರಾಜು ಹಿತವಚನ ಹೇಳಿದರು.ನಿರ್ದೇಶಕ ಮೆಡಿಕಲ್ ಶ್ರೀನಿವಾಸ್, ತರಬೇತಿ ಅಧಿಕಾರಿಗಳಾದ ವಿಜಯ್ ಕುಮಾರ್,ಅತೀಕ್ ಸಾಬ್ ,ಸಾಗರ್,ರಮೇಶ್ ಇನ್ನಿತರರಿದ್ದರು.ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ