ವರದಿ : ಡಿ.ಆರ್.ನರೇಂದ್ರಬಾಬು
ಹುಳಿಯಾರು: ಬರೋಬರಿ 33 ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿ ಎಂದೇ ಖ್ಯಾತಿ ಹೊಂದಿರುವ ಹುಳಿಯಾರಿನ ಗ್ರಾ.ಪಂ. , ಶೀಘ್ರ ಪಟ್ಟಣಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತ ಪ್ರಸ್ತಾಪನೆ ಸರ್ಕಾರದ ಮುಂದೆ ಮತ್ತೆ ಬಂದಿದೆ.
ಅರ್ಹತೆ: ಪುರಸಭೆಯ ಅಧಿನಿಯಮದ ಪ್ರಕಾರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾ.ಪಂ. ಜನಸಂಖ್ಯೆ 10,000ಕ್ಕೆ ಕಡಿಮೆಯಿಲ್ಲದಂತೆ ಹಾಗೂ 20,000ಕ್ಕೆ ಹೆಚ್ಚಿಲ್ಲದಂತೆ ಇರಬೇಕು. ಜನಸಾಂದ್ರತೆಯು ಆ ಪ್ರದೇಶದ ಒಂದು ಚ.ಕಿ.ಮೀ ವೀಸ್ತೀರ್ಣಕ್ಕೆ 400ಕ್ಕಿಂತ ಕಡಿಮೆ ಇಲ್ಲದಿರುವುದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡವಾರು ಪ್ರಮಾಣ ಒಟ್ಟು ಉದ್ಯೋಗದ ಪ್ರಮಾಣದ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಇರಬೇಕು. ಈ ಹಿನ್ನೆಲೆಯಲ್ಲಿ ಹುಳಿಯಾರು ಗ್ರಾ.ಪಂ.ವ್ಯಾಪ್ತಿಯಲ್ಲಿ 2011ರ ಜನಗಣತಿ ಅನ್ವಯ 14,304 ಜನಸಂಖ್ಯೆ ಹೊಂದಿ ಈ ಸಾಲಿನಲ್ಲಿ ಅಂದಾಜು ಹದಿನೆಂಟು ಸಾವಿರ ಜನ ಸಂಖ್ಯೆ ಹೊಂದಿರುವ ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.
ಪ್ರಸ್ತಾವನೆ : ಜಿಲ್ಲೆಯ ಹುಳಿಯಾರು ಹಾಗೂ ವೈ.ಎನ್.ಹೊಸಕೋಟೆ ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಗೇರಿಸುವ ಕುರಿತಂತೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಈ ನಿಟ್ಟಿನಲ್ಲಿ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಇಲ್ಲಿನ ಪಂಚಾಯ್ತಿಗೆ ಹತ್ತು ದಿನಗಳ ಹಿಂದಷ್ಟೆ ಮತ್ತೊಂದು ಸುತ್ತೋಲೆ ಬಂದಿರುರುವುದು ಇನ್ನಷ್ಟು ಪುಷ್ಠಿಕರಿಸಿದಂತಾಗಿದೆ.
ದಾಖಲೆಗಳು: 2011ರ ಜನಸಂಖ್ಯೆ ವಿವರದ ದೃಢೀಕರಣ ಪತ್ರ, ಪಂಚಾಯ್ತಿ ಠರಾವು,2014 ಕ್ಕೆ ಅನುಗುಣವಾಗಿ ತಯಾರಿಸಿದ ನಕ್ಷೆ, ಅನುಬಂಧ "ಎ" ಮತ್ತು ಅನುಬಂಧ "ಬಿ" ಯ ಮಾಹಿತಿ, ಗ್ರಾಮಗಳ ಗಡಿಯ ವಿವರಗಳು, 2012-13 ಹಾಗೂ 2013-14 ರ ಅಯ-ವ್ಯಯ ಪ್ರತಿ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯವರ ಪ್ರಸ್ಥಾನವನೆ ಒಳಗೊಂಡ ದಾಖಲೆಗಳನ್ನು ಐದು ಪ್ರತಿಗಳಲ್ಲಿ ಸಿದ್ದಪಡಿಸಿ ಒದಗಿಸಬೇಕಾಗಿ ಕೋರಿದ್ದು ಅವುಗಳ ಜೊತೆಗೆ ಹುಳಿಯಾರು ಅಮಾನಿಕೆರೆ, ಕೇಶವಾಪುರ,ವಳಗೆರೆಹಳ್ಳಿ ಗ್ರಾಮಗಳ ನಕ್ಷೆಯನ್ನು ಒಗ್ಗೂಡಿಸಿ ಒಂದೇ ನಕ್ಷೆಯನ್ನಾಗಿ ಮಾಡಿ ಕಳುಹಿಸಲಾಗಿದ್ದು ,ಮುಂದಿನ ಬೆಳವಣಿಗೆಗೆ ಕಾದುನೋಡಬೇಕಾಗಿದೆ ಎನ್ನುತಾರೆ ಪ್ರಭಾರ ಪಿಡಿಓ ಅಡವೀಶ್ ಕುಮಾರ್.
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 3, 9ಮತ್ತು 349ರ ಪ್ರಕಾರ ಅನುಸರಿಸಬೇಕಾದ ಮಾನದಂಡಗಳ ಪ್ರಕಾರ ಎಲ್ಲಾ ಲಕ್ಷಣಗಳನ್ನು ಹೊಂದಿರುವ
ಹುಳಿಯಾರು ಗ್ರಾ.ಪಂ. ಪಟ್ಟಣ ಪಂಚಾಯ್ತಿಯಾಗ ಬೇಕಾಗಿರುವುದಷ್ಟೆ ಬಾಕಿ ಉಳಿದಿದೆ.ಇಲ್ಲಿನ ಸಾರ್ವಜನಿಕರ ಆಶಯವು ಇದೇ ಆಗಿದ್ದು ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಶೀಘ್ರ ಅನುಮೊದನೆ ದೊರೆತಲ್ಲಿ ಹುಳಿಯಾರು ಪಟ್ಟಣ ಮತ್ತಷ್ಟು ಅಭಿವೃದ್ದಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಹುಳಿಯಾರು ಗ್ರಾ.ಪಂ. ಕಾರ್ಯಾಲಯ. |
ಹುಳಿಯಾರು ಗ್ರಾ.ಪಂ.ಯನ್ನು ಪಟ್ಟಣಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಬಂದಿರುವ ಸುತ್ತೋಲೆ. |

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ