ವರದಿ: ಡಿ.ಆರ್.ನರೇಂದ್ರಬಾಬು
ಜೂನ್ ೧ ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ರಜೆ ಮಜಾ ಸವಿದ ಮಕ್ಕಳು ಈಗ ಶಾಲೆಯ ಮೆಟ್ಟಿಲೇರುತ್ತಿದ್ದು ಆಟದ ಮೋಜು ಕಳೆದು ವಿದ್ಯಾಭ್ಯಾಸದತ್ತ ಚಿತ್ತ ಹೊರಳಿದರೆ, ಮಕ್ಕಳಿಗೆ ಅಗತ್ಯವಾದ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು,ಲೇಖನ ಸಾಮಗ್ರಿ ಕೊಡಿಸುವತ್ತ ಪೋಷಕರ ಗಮನ ಹರಿದಿದೆ. ಹಾಗಾಗಿ ಪಟ್ಟಣದ ಅಂಗಡಿಗಳಲ್ಲಿ ಮಕ್ಕಳ ಸದ್ದೇ ಕೇಳಿ ಬರುತ್ತಿದ್ದು, ಪುಸ್ತಕ ಅಂಗಡಿಗಳೆಲ್ಲಾ ದಟ್ಟಣೆಯಿಂದ ಕೂಡಿದ್ದು ಶಾಲಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆದಿದ್ದು ಮಕ್ಕಳ ಬೇಡಿಕೆ ಪೋರೈಸುವಲ್ಲಿ ವ್ಯಾಪಾರಿಗಳು ಹೈರಾಣಾಗಿದ್ದಾರೆ.
ಜೂನ್ ೧ ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ರಜೆ ಮಜಾ ಸವಿದ ಮಕ್ಕಳು ಈಗ ಶಾಲೆಯ ಮೆಟ್ಟಿಲೇರುತ್ತಿದ್ದು ಆಟದ ಮೋಜು ಕಳೆದು ವಿದ್ಯಾಭ್ಯಾಸದತ್ತ ಚಿತ್ತ ಹೊರಳಿದರೆ, ಮಕ್ಕಳಿಗೆ ಅಗತ್ಯವಾದ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು,ಲೇಖನ ಸಾಮಗ್ರಿ ಕೊಡಿಸುವತ್ತ ಪೋಷಕರ ಗಮನ ಹರಿದಿದೆ. ಹಾಗಾಗಿ ಪಟ್ಟಣದ ಅಂಗಡಿಗಳಲ್ಲಿ ಮಕ್ಕಳ ಸದ್ದೇ ಕೇಳಿ ಬರುತ್ತಿದ್ದು, ಪುಸ್ತಕ ಅಂಗಡಿಗಳೆಲ್ಲಾ ದಟ್ಟಣೆಯಿಂದ ಕೂಡಿದ್ದು ಶಾಲಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆದಿದ್ದು ಮಕ್ಕಳ ಬೇಡಿಕೆ ಪೋರೈಸುವಲ್ಲಿ ವ್ಯಾಪಾರಿಗಳು ಹೈರಾಣಾಗಿದ್ದಾರೆ.
ಶಾಲೆಗಳಿಗೆ ಸರ್ಕಾರವೇ ಪಠ್ಯಪುಸ್ತಕ ಪೂರೈಸಲಿರುವುದರಿಂದ ಪಠ್ಯಪುಸ್ತಕದ ಸಮಸ್ಯೆ ಇಲ್ಲವಾಗಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಯೇ ಪುಸ್ತಕ,ಸಮವಸ್ತ್ರಗಳನ್ನು, ಲೇಖನ ಸಾಮಗ್ರಿಗಳನ್ನು ಪೂರೈಸುತ್ತಾದ್ದರಿಂದ ಪಾಲಕರಿಗೆ ಅಷ್ಟರ ಮಟ್ಟಿನ ಹೊರೆ ಕಡಿಮೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲೆಗಳಿರುವುದರಿಂದ ಸಹಸ್ರಾರು ವಿದ್ಯಾರ್ಥಿಗಳ ಪಠ್ಯಪುಸ್ತಕ ಹೊರತು ಪಡಿಸಿ ಇನ್ನಿತರ ಶಾಲಾ ಸಾಮಗ್ರಿಗಳ ಬೇಡಿಕೆ ಪೂರೈಸುವ ಜವಬ್ದಾರಿ ಅಂಗಡಿಯವರದ್ದಾಗಿದೆ.
ಸೀಮಿತ ವ್ಯಾಪಾರ: ಪುಸ್ತಕದ ವ್ಯಾಪಾರ ಸೀಮಿತ ಅವಧಿಯದ್ದಾಗಿದ್ದು ಇದೇ ದಟ್ಟಣೆ ಇನ್ನು ಹದಿನೈದು ಮಾತ್ರ ಕಾಣಬಹುದಿದ್ದು ನಂತರ ಪುಸ್ತಕಗಳ ಖರೀದಿ ವಿರಳ ಎಂದು ಉಮಾಸ್ಟೋರ್ ನ ಮಾಲೀಕ ಭದ್ರೀಶ್ ಪ್ರತಿಕ್ರಿಯುಸುತ್ತಾರೆ. ತಾವು ಮೂವತ್ತು ವರ್ಷದಿಂದ ಇದೇ ವೃತ್ತಿಯಲ್ಲಿದ್ದು ಆಯಾ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಾತ್ರ ಪುಸ್ತಕಗಳ ಹಾಗೂ ಶಾಲಾ ಸಾಮಗ್ರಿಗಳ ಮಾರಾಟ ಜೋರಾಗಿರುತ್ತದೆ. ಇತ್ತೀಚೆಗೆ ಪಠ್ಯಪುಸ್ತಕ ಶಾಲೆಯಲ್ಲೇ ನೀಡುವುದರಿಂದ ನಮ್ಮಲ್ಲಿ ಕೇವಲ ಸ್ಕೂಲ್ ಬ್ಯಾಗ್,ನೋಟ್ ಪುಸ್ತಕ,ಲೇಖನ ಸಾಮಗ್ರಿ ಮುಂತಾದ ವಸ್ತುಗಳು ಖರೀದಿ ಮಾತ್ರ ನಡೆಯುತ್ತದೆ.
ವಿದ್ಯಾರ್ಥಿಗಳ ಎಲ್ಲಾ ತರಹದ ಬೇಡಿಕೆಗಳನ್ನು ತೊಂದರೆಯಾಗದಂತೆ ತಾವು ಪೂರೈಸುತ್ತಿದ್ದು , ಉತ್ತಮ ಗುಣಮಟ್ಟ ಹಾಗೂ ಕಡಿಮೆ ಲಾಭಾಂಶವೇ ನಮ್ಮ ಅಂಗಡಿಯ ಹೆಗ್ಗಳಿಕೆ ಎನ್ನುತ್ತಾರೆ.
ಹುಳಿಯಾರಿನ ಉಮಾ ಸ್ಟೋರ್ ನಲ್ಲಿ ಶಾಲಾ ಮಕ್ಕಳಿಗಾಗಿ ಖರೀದಿಗಿಟ್ಟಿರುವ ವಿವಿಧ ರೀತಿಯ ಸ್ಕೂಲ್ ಬ್ಯಾಗ್ ಗಳು |
ಒಟ್ಟಾರೆ ಶೈಕ್ಷಣಿಕ ವರ್ಷ ಆರಂಭವಾಯಿತೆಂದರೆ ಸಾಕು, ಪಾಲಕರೊಂದಿಗೆ ತೆರಳುವ ಮಕ್ಕಳು ಸಾಕಷ್ಟು ಖರೀದಿ ನಡೆಸುತ್ತಿದ್ದು ಅಂಗಡಿದಾರರಿಗೆ ಮಾತನಾಡಲು ಪುರಸೊತ್ತಿಲ್ಲದಾಗಿದೆ. ಜೂನ್ ತಿಂಗಳ ಅಂತ್ಯದವರೆಗೆ ಮಾತ್ರ ಇದೇ ರೀತಿ ವ್ಯಾಪಾರ ಮುಂದುವರೆಯುತ್ತದೆ. ನಂತರ ಎಂದಿನಂತೆ ಅವರು ತಮ್ಮ ವ್ಯಾಪಾರ ನಡೆಸಬೇಕಾಗುತ್ತದೆ.
ಪೋಷಕರ ಅಳಲು: ಶಾಲೆ ಪ್ರಾರಂಭವಾಯಿತು ಎಂದರೆ ಮಕ್ಕಳ ಬೇಡಿಕೆಯನ್ನು ಪೂರೈಸುವುದೇ ಪೋಷಕರ ಕೆಲಸವಾಗಿದ್ದು , ಅವರು ಕೇಳುವ ಬ್ಯಾಗು,ನೋಟ್ ಪುಸ್ತಕಗಳನ್ನು ಪ್ರತಿವರ್ಷವೂ ಹೊಸದಾಗಿ ಕೊಡಿಸಬೇಕಾಗಿದೆ. ನೋಟ್ ಪುಸ್ತಕ, ಕಂಪಾಸ್ ಪಟ್ಟಿಗೆ, ಸಮವಸ್ತ್ರ, ಶೋ ಸೇರಿದಂತೆ ಶಾಲೆಗಳಲ್ಲಿ ನೀಡುವ ಇತರ ವಸ್ತುಗಳನ್ನು ಪಟ್ಟಿ ಹನುಂತನ ಬಾಲದಂತಿದ್ದು, ಮಕ್ಕಳು ಇವನ್ನೆಲ್ಲಾ ಕೊಡಿಸುವಂತೆ ಪಟ್ಟುಹಿಡಿಯುತ್ತಾರೆ. ಸರಿ ಕೊಡಿಸೋಣವೆಂದು ಮಾರುಕಟ್ಟೆಗೆ ಹೋದರೆ ಅಲ್ಲಿ ಬಗೆಬಗೆಯ ಬ್ಯಾಗ್,ಲೇಖನ ಸಾಮಗ್ರಿಗಳು ರಾರಾಜಿಸುತ್ತಿದ್ದು ಬೆಲೆಗಳೆಲ್ಲಾ ದುಪ್ಪಟ್ಟಾಗಿ ಪೋಷಕರ ಜೇಬು ಖಾಲಿಯಾಗುತ್ತಿದೆ, ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಹಿಂದಿನಂತೆ ಪೋಷಕರು ಮಕ್ಕಳು ಕೇಳಿದನ್ನೆಲ್ಲಾ ಕೊಡಿಸಲು ಸಾಧ್ಯವಿಲ್ಲವಾಗಿದೆ. ಹಿಂದೆ ಐದಾರುನೂರು ರೂ ಗಳಲ್ಲಿ ಮುಗಿಯುತ್ತಿದ್ದ ಮಕ್ಕಳ ಪುಸ್ತಕದ ಪಟ್ಟಿ ಇದೀಗ ಸಾವಿರವನ್ನು ದಾಟಿದೆ. ಮಾರುಕಟ್ಟೆಯಲ್ಲಿ ಆಕರ್ಷಣೀಯ ವಸ್ತುಗಳು ಹೆಚ್ಚಾಗಿರುವುದರಿಂದ ಮಕ್ಕಳಿಗೆ ಪ್ರತಿ ವರ್ಷವೂ ಹೊಸದಾಗೆ ಬ್ಯಾಗ್ ಹಾಗೂ ಇತರ ವಸ್ತುಗಳನ್ನು ಕೊಡಿಸುವ ಹೊರೆ ಪೋಷಕರ ಮೇಲೆ ಬಿದ್ದಿದೆ.
ಮಕ್ಕಳು ಕೇಳುವ ವಸ್ತುಗಳನ್ನು ಕೊಡಿಸುವಷ್ಟರಲ್ಲಿ ಪೋಷಕರಿಗೆ ಸಾಕಪ್ಪ ಸಾಕು ಎನ್ನುವಂತಾದರೂ ಸಹ ಅವರೆಲ್ಲರ ಆಶಾಭಾವನೆ ಮಾತ್ರ ಒಂದೇ ಅದು ನಮ್ಮ ಮಕ್ಕಳು ಓದಿ ವಿದ್ಯಾವಂತರಾಗ ಬೇಕು ಎಂಬುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ