ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ಅದ್ದೂರಿ ಹನುಮಜಯಂತಿ

(ಹುಳಿಯಾರು ಶಂಕರಪುರದಲ್ಲಿ ಹನುಮಜಯಂತಿ ಅಂಗವಾಗಿ ನಡೆದ ರಾಮ ಭಜನೆಯ ಒಂದು ನೋಟ.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಏರ್ಪಡಿಸಿದ್ದ ಶ್ರೀಸ್ವಾಮಿಯವರ ಉತ್ಸವದಲ್ಲಿ ಪಾಲ್ಗೊಂಡ ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳು ಕುಣಿತ ತಂಡ ನೋಡುಗರನ್ನು ಆಕಷಿ೯ಸಿತ್ತು.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಸೋಮವಾರ ರಾತ್ರಿ ನಡೆದ ಶ್ರೀಸ್ವಾಮಿಯವರ ವಿಜೃಂಭಣೆಯಿಂದ ನಡೆದ ರಾಜಬೀದಿ ಉತ್ಸವ ಮಾಡಲಾಯಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ, ಅಧ್ಯಕ್ಷ ಎಸ್ಆರ್ಎಸ್ ದಯಾನಂದ್, ಆರ್.ಮಂಜುನಾಥ್, ಎಚ್.ವಿ.ಧನಂಜಯಮೂತಿ೯, ಟಿ.ಆರ್.ರಂಗನಾಥಶೆಟ್ಟಿ, ಕೆ.ಎಂ.ರಾಮಯ್ಯ, ಮೀಸೆ ರಂಗಪ್ಪ, ಎಂ.ಅಶೋಕ್ ಬಾಬು, ಎಚ್.ಎಸ್.ಪ್ರದೀಪ್, ಡಾಬಾ ಸುರೇಶ್ ಇನ್ನಿತರರಿದ್ದಾರೆ.) ಪಟ್ಟಣದ ವಿವಿಧ ದೇವಾಲಯಗಳಲ್ಲಿ ಇಂದು ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಾರುತಿ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯಸ್ವಾಮಿ ಜೀಣೋ೯ದ್ಧಾರ ಸಮಿತಿಯಿಂದ ಹನುಮಂತ ದೇವರಿಗೆ ಅಭಿಷೇಕ, ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮ, ಪೂ೯ಣಾ೯ಹುತಿ, ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯವರ ದರ್ಶನ ಪಡೆದು ಧನ್ಯತೆ ಮೆರೆದರು.

ದಸೂಡಿಯಲ್ಲಿ ಸಡಗರ-ಸಂಭ್ರಮದ ಹನುಮಜಯಂತಿ

ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ಹನುಮಜಯಂತಿ ಮತ್ತು ಶ್ರೀ ಸ್ವಾಮಿಯ ರಥೋತ್ಸವವನ್ನು ಭಾನುವಾರ ಆಚರಿಸಲಾಯಿತು. ಹನುಮಜಂತಿ ಅಂಗವಾಗಿ ಭಕ್ತಾಧಿಗಳ ಸೇವಾರ್ಥದಲ್ಲಿ ಶ್ರೀಸ್ವಾಮಿಯವರಿಗೆ ನೂರೊಂದೆಡೆ ಪೂಜೆ, ಅಭಿಷೇಕ, ಮಂಗಳಾರತಿ, ಲಲಿತ ಸಹಸ್ರನಾಮ ಪೂಜೆ, ಅಷ್ಟೋತ್ತರ, ಸುಮಂಗಲೆಯರಿಂದ ದೀಪಸ್ತಂಭ ಪೂಜೆ, ಕುಂಕುಮಾರ್ಚನೆ, ಸಹಸ್ರನಾಮ ಪೂಜೆ, ಷೋಡೋಪಚಾರ ಪೂಜೆ, ಮಹಾಮಂಗಳಾರತಿ, ಪಂಚಫಲಪ್ರಸಾದ ವಿನಿಯೋಗ, ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಮುಂತಾದ ಧಾಮಿ೯ಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಬೆಳಿಗ್ಗೆ 6.30 ರ ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರಿನ ದಾ.ಹನುಮಂತಯ್ಯ, ಎಚ್.ರಾಮಸ್ವಾಮಿ ಅವರ ಸೇವಾರ್ಥದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯವರ ರಥೋತ್ಸವವು ವೈಭವದಿಂದ ಜರುಗಿತು. ದಸೂಡಿ ಮಾರುತಿ ಭಜನಾ ಮಂಡಳಿಯ ಭಜನೆ, ಬಲ್ಲಪ್ಪನಹಟ್ಟಿ ಹಾಗೂ ಎಳೆಗೊಲ್ಲರಹಟ್ಟಿ ಯಾದವರ ಕೋಲಾಟ ಉತ್ಸವಕ್ಕೆ ಮೆರಗು ತಂದಿತ್ತು. ದೇವಸ್ಥಾನ ಸಮಿತಿ ಕನ್ವೀನರ್ ಆರ್.ರಂಗಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ, ಸದಸ್ಯರುಗಳಾದ ರಮೇಶ್, ಮಮತ, ಪೂಜಾಕಾರ್ಯಕ್ರಮದ ಸೇವಾಕರ್ಥರುಗಳಾದ ಬೆಂಗಳೂರಿನ ಆರ್.ಶುಭಾರಾಣಿ, ಬಿ.ಆರ್.ಪ್ರಕಾಶ್, ದೊಡ್ಡೇರಿ ರತ್ಮಮ್ಮರಾಮಣ್ಣ ಸಿದ್ಧನಕಟ್ಟೆ ಲೇ.ಬೋರೇಗೌಡರ ಮಕ್ಕಳು ಹೊಯ್ಸಳಕಟ್ಟೆ ಶ್ರೀನಿವಾಸಶೆಟ್ಟರ, ದಸೂಡಿ ಪಾಂಡುರಂಗಯ್ಯ ಡಿ.ಎನ್.ಹನುಮಂತಯ್ಯ, ಡಿ.ಎಚ್.ಸಂಜ

ಮೊಹರಂ ಹಬ್ಬ

ಹುಳಿಯಾರಿನಲ್ಲಿ ಮುಸ್ಲೀಂ ಬಾಂಧವರು ಮೊಹರಂ ಹಬ್ಬದ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಪೀರ್ ದೇವರ ಧೂಪದ ಮೆರವಣಿಗೆಯನ್ನು ಸಡಗರದಿಂದ ಮಾಡಿದರು

ಜೆಡಿಯುಗೆ ಸೇರಿದ ಯಳನಡು ತಾಪಂ ಸದಸ್ಯ ವೈ.ಆರ್.ಮಲ್ಲಿಕಾಜು೯ನಯ್ಯ

ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಳನಾಡು ತಾಪಂ ಸದಸ್ಯರಾಗಿದ್ದ ವೈ.ಆರ್.ಮಲ್ಲಿಕಾಜು೯ನಯ್ಯ ಸಂಯುಕ್ತ ಜನತಾದಳಕ್ಕೆ ಸೇರ್ಪಡೆಗೊಂಡಿದಲ್ಲದೆ ಜೆಡಿಯು ಪಕ್ಷದಿಂದಲೆ ತಮ್ಮ ಪುತ್ರಿಯನ್ನು ಹುಳಿಯಾರು ಜಿಲ್ಲಾ ಪಂಚಾಯ್ತಿಗೆ ಅಧಿಕೃತ ಅಭ್ಯಥಿ೯ಯಾಗಿ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಇವರು ಕಳೆದ ಸಂಸದರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡು ಆ ಮೂಲಕ ಚಿನಾಹಳ್ಳಿ ತಾಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ತಾವು ಪಕ್ಷ ತೊರೆದಿದ್ದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಜಯಚಂದ್ರ ಶಿರಾ ಕ್ಷೇತ್ರಕ್ಕೆ ಹೋದ ನಂತರ ಚಿ.ನಾ.ಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ್ಯಾರು ಇಲ್ಲದ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಉತ್ತಮ ವ್ಯಕ್ತಿತ್ವಕ್ಕೆ ಮಾರುಹೋಗಿ ತಾವು ಜೆಡಿಎಸ್ ಸೇರ್ಪಡೆಗೊಂಡಿದ್ದೆ.ಆದರೆ ಶಾಸಕ ಸಿ.ಬಿ.ಸುರೇಶ್ ಬಾಬು ಹೆಚ್ಚಿನ ಕಾಲ ಬೆಂಗಳೂರಿನಲ್ಲಿಯೇ ಉಳಿಯುತ್ತ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿರಾಸಕ್ತಿ ಮನೋಭಾವ ತಾಳಿದ್ದ ಹಿನ್ನಲೆಯಲ್ಲಿ ಬೇಸತ್ತು ನೇರ ಮತ್ತು ನಿಷ್ಠೂರ ವಾದಿ ಎಂದು ತಿಳಿದಿದ್ದರೂ ಜೆಡಿಯುನ ಮಾಧುಸ್ವಾಮಿ ಅವರಿಂದ ಸಾರ್ವಜನಿಕ ಸೇವೆ ಸಲೀಸು ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸಿ ಅವರ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು. ತಮ್ಮ ಮಗಳನ್ನು ಹುಳಿಯಾರು

ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬ

ಹುಳಿಯಾರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಲಾಯಿತು. ಸೈಯದ್ ಜಲಾಲ್, ಮಂಜುಳಾ ಗವೀರಂಗಯ್ಯ, ಬಿ.ಬಿ.ಪಾತೀಮಾ, ಪ್ರಸನ್ನ, ಡಿಶ್ ಬಾಬು, ರಘುನಾಯಕ್, ಅಹಮದ್ ಖಾನ್, ಬಾಲರಾಜು, ರೇವಣ್ಣ, ಮತ್ತಿತರರು ಇದ್ದಾರೆ.

ಕಡೆಗೂ ಬಂತು ಕೊಬ್ಬರಿಗೆ ಬಂಪರ್ ಬೆಲೆ

(ಹುಳಿಯಾರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬಂಪರ್ ಬೆಲೆ ಬಂದಿರುವ ಕಾರಣ ರೈತರು ಅತಿ ಉತ್ಸಾಹದಿಂದ ಕೊಬ್ಬರಿ ಮಾರಾಟದಲ್ಲಿ ತೊಡಗಿರುವುದು ) ಕಳೆದ ಹಲವಾರು ತಿಂಗಳಿನಿಂದ ನಾಲ್ಕು ನಾಲ್ಕುವರೆ ಸಾವಿರದ ಆಜುಬಾಜಿನಲ್ಲಿದ್ದ ಕೊಬ್ಬರಿ ಕಳೆದ ವಾರದಿಂದ ಏರಿಕೆ ಕಾಣುತ್ತಿದ್ದು ರೈತರು ಅಂತೂ ಇಂತೂ ಸ್ವಲ್ಪವಾದರೂ ಬೆಲೆ ಬಂತಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನದಲ್ಲ್ದಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೆ, ಮುಂದಿನ ದೀಪಾವಳಿಗೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಬಹುದೆಂಬ ಮಾತು ಕೇಳಿಬರುತ್ತಿದೆ. ಇದುವರೆಗೂ ಕೊಬ್ಬರಿ ಬೆಲೆ ಏರಿಕೆ ಕಾಣದೆ 4 ಸಾವಿರದ ಆಸು ಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿದ್ದರೆ ತೆಂಗಿನ ಕಾಯಿಯನ್ನಂತೂ 4 ರು ಗೆ ಕೇಳುವವರು ಗತಿಯಿರಲಿಲ್ಲ. ಇದರಿಂದ ತೆಂಗು ಬೆಳಯುವ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಹಾಸನ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ರೈತರು ಕಂಗಾಲಾಗಿ ಹೋಗಿದ್ದರು. ಕೆಲ ದಿನಗಳಿಂದ 1 ಸಾವಿರ ಕಾಯಿಗೆ ಇದ್ದ 4200 ರು. ಈಗ 6 ರಿಂದ 7 ಸಾವಿರ ರು.ಗಳಾಗಿದೆ.ವಾಡಿಕೆಯಂತೆ ಏಣಿಕೆ ಲೆಖ್ಖದಲ್ಲಿ ಸಾವಿರ ಕಾಯಿಗಿಷ್ಟು ಬೆಲೆ ಎಂಬ ಬದಲಿಗೆ ಯಾವುದೆ ಗಾತ್ರದ ಕಾಯಿಯಿರಲಿ ಎಲ್ಲವನ್ನು ಕ್ವಿಂಟಾಲ್ ಲೆಖ್ಖದಲ್ಲಿ ಕೊಳ್ಳುವ ಹೊಸ ಪರಿಪಾಟ ಶುರುವಾಗಿದ್ದು ರೈತರಿಗೆ ಕಾಯಿ ಮಾರುವುದೆ ಲಾಭದಾಯಕ ಎನ್ನುವಂತಾಗಿದೆ. ಕೊಬ್ಬರಿಗಿಂತ ಕಾಯಿಗೆ ಬೆಲೆ ಬರಲು ಶುರುವಾದ್ದರಿಂದ ರೈತರು ಕೊಬ್ಬರಿ ಆಸೆ ಕೈ ಬಿಟ್ಟು ಕಾಯಿಯನ್ನೇ

ಹುಳಿಯಾರಿನಲ್ಲಿ ಭಾನುವಾರದಂದು ಅದ್ದೂರಿ ಹನುಮಜಯಂತಿ

ಹುಳಿಯಾರಿನ ಶ್ರೀ ಆಂಜನೇಯಸ್ವಾಮಿ ಜೀಣೋ೯ದ್ಧಾರ ಸಮಿತಿಯಿಂದ ಪ್ರಸಕ್ತ ಸಾಲಿನ ಹನುಮ ಜಯಂತಿ ಮಹೋತ್ಸವವನ್ನು ಡಿಸೆಂಬರ್-19 ರ ಭಾನುವಾರ ಅದ್ದೂರಿಯಾಗಿ ಆಯೋಜಿಸಲಾಗಿದೆ. ಅಂದು ಮುಂಜಾನೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರಿಗೆ 6 ಗಂಟೆಗೆ ಅಭಿಷೇಕ, 8 ಗಂಟೆಗೆ ಪವಮಾನ ಹೋಮ, 11 ಗಂಟೆಗೆ ಪೂಣಾ೯ಹುತಿ, 11-30 ಕ್ಕೆ ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ 12 ಗಂಟೆಗೆ ಭಕ್ತಾಧಿಗಳಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅದೇ ದಿನ ಸಂಜೆ 5 ಕ್ಕೆ ಶ್ರೀ ಸ್ವಾಮಿಯವರನ್ನು ಪುಷ್ಪಾಲಂಕಾರಗಳಿಂದ ಕೂಡಿದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಕೀಲು ಕುದುರೆ, ಕರಗ, ಹಾಸ್ಯಗೊಂಬೆ, ಯಕ್ಷಗಾನ ಶೈಲಿಯ ದೊಡ್ಡಬೊಂಬೆಯಾಟ, ವಡೆರಹಳ್ಳಿ ಪಟಾಕಿ ಸೋಮಣ್ಣ ಅವರಿಂದ ಮದ್ದಿನ ಪ್ರದರ್ಶನ, ಹೆಗ್ಗೋಡು ಸಾಗರದ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳುಕುಣಿತ, ಮಣಿಕಿಕೆರೆಯ ನಾಸಿಕ್ ಡೋಲ್, ಸಿಂಗಾಪುರದ ಡೊಳ್ಳುಕುಣಿತ ಪ್ರದರ್ಶನಗಳೊಂದಿಗೆ ಅದ್ದೂರಿಯಾಗಿ ರಾಜಬೀದಿ ಉತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹನುಮಜಯಂತಿ ಅಂಗವಾಗಿ ಜರುಗುವ ಎಲ್ಲಾ ಧಾಮಿ೯ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಲು ಸಹಕರಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ಆರ್ಎಸ್ ದಯಾನಂದ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹುಳಿಯಾರಿನಲ್ಲಿ ಭಕ್ತಿಭಾವದ ವೈಕುಂಠ ಏಕಾದಶಿ

( ವೈಕುಂಠ ಏಕಾದಶಿ ಅಂಗವಾಗಿ ಹುಳಿಯಾರಿನ ಶ್ರೀ ಬನಶಂಕರಿ ಅಮ್ಮನವರಿಗೆ ಅರ್ಚಕ ಶ್ರೀಧರ್ ವೈಕುಂಠ ನಾರಾಯಣನ ಅಲಂಕಾರ ಮಾಡಿರುವುದು.) (ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಗುಹಾ ಪ್ರವೇಶ ದಾರಿ ಮೂಲಕ ಭಕ್ತರು ಶ್ರೀ ಸ್ವಾಮಿಯವರ ದರ್ಶನ ಮಾಡುತ್ತಿರುವುದು.) ವೈಕುಂಠ ಏಕಾದಶಿ ಅಂಗವಾಗಿ ಹುಳಿಯಾರಿನ ವಿವಿಧ ದೇವಾಲಯಗಳಲ್ಲಿ ಮುಖ್ಯ ದೇವರುಗಳಿಗೆ ಮಾಡಲಾಗಿದ್ದ ಶ್ರೀಮನ್ನಾರಯಣನ ಹಲವು ರೂಪಗಳ ಅಲಂಕಾರ ಭಕ್ತಾಧಿಗಳ ಮನಸೂರೆಗೊಂಡಿತು.ಎಲ್ಲಾ ದೇವಾಲಯಗಳಿಗೆ ತೆರಳಿ ಶ್ರೀ ಸ್ವಾಮಿಯ ದಶ೯ನ ಪಡೆದ ಭಕ್ತಾಧಿಗಳು ಭಕ್ತಿ ಭಾವದಲ್ಲಿ ಮಿಂದು ಪುನೀತರಾದರು. ಪಟ್ಟಣದ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀ ಕಾಳಮ್ಮ ಹಾಗೂ ಶ್ರೀ ಬನಶಂಕರಿ ದೇವಸ್ಥಾನಗಳಲ್ಲಿ ಸುಪ್ರಭಾತ ಸೇವೆಯೊಂದಿಗೆ ಮುಂಜಾನೆಯಿಂದಲೆ ಧಾಮಿ೯ಕ ಕೈಂಕರ್ಯಗಳು ಆರಂಭಗೊಂಡವು. ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಎಂಎಸ್ಆರ್ ನಟರಾಜ್ ಅವರ ಸೇವಾರ್ಥದಲ್ಲಿ ಅರ್ಚಕರುಗಳಾದ ರಾಮಚಂದ್ರಭಟ್ಟ ಹಾಗೂ ನಾಗರಾಜಗುಪ್ತ ಮಾರ್ಗದರ್ಶನದಲ್ಲಿ ಉತ್ಸವಮೂತಿ೯ಯ ಪ್ರಾಕಾರೋತ್ಸವ,ವಾಸವಿಗೆ ಅಷ್ಟಾವದಾನ ಸೇವೆ,ವೈಕುಂಠ ದ್ವಾರ ಪೂಜೆ, ಮಹಾಮಂಗಳಾರತಿ, ಮುಂತಾದ ಧಾಮಿ೯ಕ ಕೈಂಕರ್ಯಗಳನ್ನು ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತಲ್ಲದೆ ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ದರ್ಶನ ವ್ಯವಸ್ಥೆ ಮಾಡಿದಿದುದು ಭ

ಚಿಕ್ಕಎಣ್ಣೇಗೆರೆಯಲ್ಲಿ ಶನಿವಾರದಿಂದ ಹನುಮಜಯಂತಿ

ಹುಳಿಯಾರು ಸಮೀಪದ ಚಿಕ್ಕಎಣ್ಣೇಗೆರೆ ಗ್ರಾಮದಲ್ಲಿ ಡಿಸೆಂಬರ್ 18 ರ ಶನಿವಾರ ಮತ್ತು 19 ರ ಭಾನುವಾರ ಶ್ರೀ ಆಂಜನೇಯಸ್ವಾಮಿಯವರ 5 ನೇ ವರ್ಷದ ಹನುಮಜಯಂತಿ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಡಿಸೆಂಬರ್ 18 ರ ಶನಿವಾರ ಸುಲೋಚನಮ್ಮ ಅವರ ಸೇವಾರ್ಥದಲ್ಲಿ ರಾತ್ರಿ 8 ಗಂಟೆಯಿಂದ ಕೊಲ್ಲಾಪುರದ ಶ್ರೀ ಕರಿಯಮ್ಮದೇವಿಯವರ ಆರತಿಭಾನ, ಶ್ರೀ ಆಂಜನೇಯಸ್ವಾಮಿಯವರ ಮತ್ತು ಕರಿಯಮ್ಮದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಡಿಸೆಂಬರ್ 19 ರ ಭಾನುವಾರ ಸಿ.ಎಸ್.ಶಂಕರಪ್ಪ, ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಬಳಗ, ಹೂವಾಡಿ ಲಕ್ಷ್ಮಮ್ಮ, ಅನಸೂಯಮ್ಮ, ವರದಯ್ಯ ಅವರುಗಳ ಸೇವಾರ್ಥದಲ್ಲಿ ಬೆಳಗಿನ ಜಾವ 4 ರಿಂದ ಹೋಮ ಪೂಜೆ, ಮಹಾಮಂಗಳಾರತಿ, ಬೆಳಿಗ್ಗೆ 9 ಕ್ಕೆ ಶ್ರೀ ಸ್ವಾಮಿಯವರ ಹೂವಿನ ಮತ್ತು ಕುಂಕುಮ ಅಲಂಕಾರ ಬೆಳಿಗ್ಗೆ 10 ಕ್ಕೆ ಬಿಲ್ಲು ಗೂಡಸೇವೆ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ಬೆಳಿಗ್ಗೆ 11-30 ಕ್ಕೆ ಧಾಮಿ೯ಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠದ ಡಾ.ಆಭಿನವ ಮಲ್ಲಿಕಾಜು೯ನ ಮಹಾಸ್ವಾಮಿಗಳು ಉದ್ಘಾಟಿಸಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸುವರು. ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್, ಅವರು ಮುಖ್ಯ ಅತಿಥಿಗಳಾಗಿ ಆಗಮಹಿಸುವರು. ತಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ದೊಡ್ಡಯ್ಯ, ಸದಸ್ಯರ

ಹುಳಿಯಾರಿನಲ್ಲಿ ಭಾನುವಾರ ನಿವೃತ್ತ ನೌಕರರ ದಿನಾಚರಣೆ

ಚಿಕ್ಕನಾಯಕನಹಳ್ಳಿ ತಾಲೂಕು ನಿವೃತ್ತ ನೌಕರರ ಸಂಘ ವತಿಯಿಂದ ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 19 ರ ಭಾನುವಾರ ಬೆಳಿಗ್ಗೆ 10-30 ಕ್ಕೆ 26 ನೇ ವರ್ಷದ ವಾಷಿ೯ಕ ಸಮಾರಂಭ ಹಾಗೂ ನಕರ ರವರ ಮತ್ತು ನಿವೃತ್ತ ನೌಕರರ ದಿನಾಚರಣೆ ಏರ್ಪಡಿಸಲಾಗಿದೆ. ರಾಜ್ಯ ಸಕಾ೯ರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ಸಂಪತ್ ಅವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ಅವರು ವಹಿಸುವರು. ರಾಜ್ಯ ನೌಕರರ ಸಂಘದ ಅಧ್ಯಕ್ಷ ಎಲ್.ಭೈರಪ್ಪ ಅವರು ಹಿರಿಯ ನಿವೃತ್ತ ನೌಕರರಿಗೆ ಸನ್ಮಾನಿಸುವರು. ಪ್ರಧಾನ ಕಾರ್ಯದಶಿ೯ ರೇವಣಸಿದ್ಧಯ್ಯ ವರು ಹಿರಿಯ ಸಮಾಜ ಸೇವಕರಿಗೆ ಸನ್ಮಾನಿಸುವರು. ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹದೇವರಾವ್ ಬೋಬಡೆ ಅವರು ದಿನಚರಣೆ ಬಗ್ಗೆ ಮಾಹಿತಿ ನೀಡುವರು. ನಿವೃತ್ತ ನ್ಯಾಯಾಧೀಶರಾದ ಎಂ.ಎಲ್.ಶಿವಣ್ಣ ಅವರು ಪ್ರತಿಭಾನ್ವಿತ ವಿದ್ಯಾಥಿ೯ಗಳಿಗೆ ಮಹಾದೇವರಾವ್ ಬೋಬಡೆ ಅವರು ಪುರಸ್ಕರಿಸುವರು. ಮುಖ್ಯ ಅತಿಥಿಗಳಾಗಿ ಜಿ.ಎಂ.ಸಣ್ಣಮುದ್ದಯ್ಯ, ಟಿ.ಜಿ.ಮಲ್ಲೇದೇವರು, ತು.ರಾ.ಸುಂದರರಾಜ್, ಸಾ.ಚಿ.ನಾಗೇಶ್, ಆರ್.ಪರಶಿವಮೂತಿ೯, ಎಚ್.ಎಂ.ಸುರೇಶ್, ಎಂ.ವಿ.ನಾಗರಾಜರಾವ್, ಆರ್.ಬಸವರಾಜು, ಶ್ರೀನಿವಾಸಮೂತಿ೯ ಅವರು ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಸಿ.ರಾ

ಹೊಯ್ಸಲಕಟ್ಟೆ ಜಿ.ಪಂ.ಸದಸ್ಯ ಈರಣ್ಣ ಜೆಡಿಎಸ್ ಗೆ

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಹೊಯ್ಸಲಕಟ್ಟೆ ಜಿ.ಪಂ.ಸದಸ್ಯ ಈರಣ್ಣ ಅವರು ಬಿಜೆಪಿಗೆ ಗುಡ್ಬೈ ಹೇಳಿ ಜೆಡಿಎಸ್ ಗೆ ಸೇರಿ ಕಂದಿಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯಥಿ೯ಯಾಗಿ ಚುನಾವಣ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಎಸ್ಸಿ ಮೀಸಲು ಕ್ಷೇತ್ರ ಹೊಯ್ಸಲಕಟ್ಟೆಯಿಂದ ಬಿಜೆಪಿ ಅಭ್ಯಥಿ೯ಯಾಗಿ ಇವರು ಗೆದ್ದಿದ್ದರು.ಸಧ್ಯ ಮೀಸಲಾತಿ ಬದಲಾವಣೆಯಾಗಿ ಹೊಯ್ಸಳಕಟ್ಟೆಗೆ ಬಿಸಿಎಂ ಎ ಮಹಿಳೆ ಬಂದಿದ್ದು ಪಕ್ಕದ ಕಂದಿಕೆರೆಗೆ ಎಸ್ಸಿ ಮೀಸಲಾತಿ ಬಂದಿರುವ ಕಾರಣ ಅಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯಥಿ೯ಯಾಗಿ ತಮ್ಮ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಪ್ರತಿ ಕ್ಷೇತ್ರಕ್ಕೆ ಪ್ರತಿ ವರ್ಷ 1 ಕೋಟಿ ಅನುದಾನ ನೀಡುತ್ತಿದ್ದರು. ಆಗ ತಾವು ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಹೀಗೆ ಅನೇಕ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಕ್ಷೇತ್ರಗಳಿಗೆ ಒಂದೇ ಒಂದು ರು. ಅನುಧಾನ ಬಿಡುಗಡೆ ಮಾಡದೆ ಜಿ.ಪಂ.ಸದಸ್ಯರು ಯವುದೇ ಅಭಿವೃದ್ಧಿ ಕೆಲಸ ಮಾಡಿಸಲಾಗದೆ ಕೈ ಕಟ್ಟಿ ಕೂರುವಂತಾಗಿತ್ತು ಎಂದ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸ್ವಜನ ಪಕ್ಷಪಾತ ಎಸಗಿ ತಮ್ಮ ಕುಟುಂಬದವರಿಗೆ ಭೂ ಹಂಚಿಕೆ ಮಾಡಿದ್ದಾರೆ.ಹಿಂದುಳಿದವರಿಗೆ ಹಾಗೂ ಅಹಿಂದ ವರ್ಗದವರಿಗೆ ಅಲ್

ಶ್ರೀಕೃಷ್ಣ ದೇವಸ್ಥಾನ ಅಷ್ಟಮಠಕ್ಕೆ ವರ್ಗಾವಣೆ ವಿರೋಧಿಸಿ: ಸಿ.ಡಿ.ಚಂದ್ರಶೇಖರ್

( ಹುಳಿಯಾರು ಸಮೀಪ ಲಿಂಗಪ್ಪನ ಪಾಳ್ಯದಲ್ಲಿ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಪಿ.ಎಸ್.ಶಿವಣ್ಣ, ರಂಗಯ್ಯ, ಸಿ.ಡಿ.ಚಂದ್ರಶೇಖರ್, ಚಿದಾನಂದ್ ಮತ್ತಿತರರು ಇದ್ದಾರೆ .) ಮುಜರಾಯಿ ಇಲಾಖೆಯ ಅದೀನದಲ್ಲಿದ್ದ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ವರ್ಗಯಿಸುತ್ತಿರುವುದನ್ನು ಹಿಂದುಳಿದ ವರ್ಗಗಳು ವಿರೋಧಿಸಬೇಕು ಎಂದು ಚಿ.ನಾ.ಹಳ್ಳಿ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅವರು ಕರೆ ನೀಡಿದರು. ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ನೀಡಿರುವುದರಿಂದ ಶ್ರೀ ಕೃಷ್ಣ ಮತ್ತು ಕನಕದಾಸರ ಪರಂಪರೆಗೆ ಅಪಚಾರ ಮಾಡಿದಂತಾಗಿದೆ. ಐತಿಹ್ಯ ಕನಕನ ಕಿಂಡಿಗೆ ಧಕ್ಕೆ ಆಗುತ್ತದೆ. ಸಕರ್ಾರ ಕೇವಲ ಕನಕನ ಜಯಂತಿಗೆ ಸಕರ್ಾರಿ ರಜೆ ಕೊಟ್ಟರೆ ಸಾಲದು, ಕನಕನ ಅಸ್ಥೀತ್ವದ ಕುರುಹುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಕನಕನ ಜಯಂತಿಯನ್ನು ಹಬ್ಬಗಳ ರೀತಿಯಲ್ಲಿ ಆಚರಿಸುವ ಜೊತೆಗೆ ಅವರ ತತ್ವ, ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನಕನು 14 ನೇ ಶತಮಾನದಲ್ಲಿಯೇ ಹಿಂದುಳಿದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯಾಗಿ ಪ್ರಭಾವಿಗಳಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದು ಕೀರ್ತನಗಳಲ್ಲಿ ಇದು ಅನಾವರಣ ಗೊಳ್ಳುತ್ತದೆ. ಆದರೆ ಇಂದಿಗೂ ಹಿಂದುಳಿದವರ್ಗಗಳ ಒಗ್ಗಟ್ಟಿನ ಕೊರ

ಹೀಗೊಂದು ಇಂಗ್ಲೀಷ್ ಅಂಕೆಗಳಿಲ್ಲದ ಸಂಪೂರ್ಣ ಕನ್ನಡಅಂಕಿಗಳ ಕ್ಯಾಲೆಂಡರ್

ವರ್ಷದ ಕೊನೆ ತಿಂಗಳಲ್ಲಿ ಮುಂದಿನ ಹೊಸ ವರ್ಷದ ಕ್ಯಾಲೆಂಡರ್ ಮಾರಾಟದ ಭರಾಟೆ ಬಲು ಜೋರು.ಮುಂಚಿನ ದಿನಗಳಂತೆ ಕೇವಲ ದಿನಾಂಕಗಳಿಗೆ ಒತ್ತು ನೀಡದೆ ಕೆಲವೊಂದು ವಿಶೇಷಗಳ ಸಂಪೂರ್ಣ ಮಾಹಿತಿ ನೀಡುವುದು ಇತ್ತೀಚಿನ ಬೆಳವಣಿಗೆ. ಕೆಲವು ಕ್ಯಾಲೆಂಡರ್ ಗಳಲ್ಲಿ ತಿಂಗಳ ಭವಿಷ್ಯ, ಧಾರ್ಮಿಕ ಆಚರಣೆಗಳ ಮಾಹಿತಿ ಬಗ್ಗೆ ಮಹತ್ವ ನೀಡಿದರೆ ಇನ್ನು ಕೆಲವದರಲ್ಲಿ ನಕ್ಷತ್ರ, ವಾರ ತಿಥಿ, ಮಳೆ ಮುಂತಾದ ವಿಶೇಷ ವಿಷಯಗಳಿಗೆ ಒತ್ತು ನೀಡಲಾಗುತ್ತದೆ. ಬಹುತೇಕ ಕ್ಯಾಲೆಂಡರ್ ಗಳು ರೂಪದರ್ಶಿಗಳ ಹಾಗೂ ದೇವಾನುದೇವತೆಗಳ ಚಿತ್ರಗಳೊಂದಿಗೆ ವಿನ್ಯಾಸಗೊಂಡು ಉಚಿತವಾಗಿ ಹಂಚಲ್ಪಡುತ್ತದೆ. ಆದರೆ ಈ ಎಲ್ಲಾ ಕ್ಯಾಲೆಂಡರುಗಳಲ್ಲಿಯೂ ತಾರೀಖು ಮಾತ್ರ ಇಂಗ್ಲೀಷ್ ಅಂಕಿಗಳಲ್ಲಿ ಮುದ್ರಿಸಲ್ಪಟ್ಟಿರುವುದು ಗಮನಿಸಬೇಕಾದ ಅಂಶ. ಆದರೆ ಹುಳಿಯಾರಿನ ನಿವೃತ್ತ ಉಪನ್ಯಾಸಕರೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತ.ಶಿ.ಬಸವಮೂರತಿ೯ ಅವರು ಇಂಗ್ಲೀಷ್ ಅಂಕೆ ಬಳಕೆ ಮಾಡದೆ ಸಂಪೂರ್ಣ ಕನ್ನಡಮಯ ಕ್ಯಾಲೆಂಡರ್ ಹೊರತಂದಿರುವುದಲ್ಲದೆ ಸಂಪೂರ್ಣವಾಗಿ ಸಾಹಿತ್ಯ ಲೋಕದ ಸ್ಪರ್ಶ ನೀಡಿದ್ದಾರೆ. ಸ್ಪಧಾ೯ತ್ಮಕ ಪರೀಕ್ಷೆಗೆ ನೆರವಾಗುವ ಗೈಡಾಗಿ ಮಾರ್ಪಡಿಸಿದ್ದಾರೆ. ಇಂದಿನ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ. ಕವಿ ಪರಂಪರೆ ಪರಿಚಯಿಸುವ ಕಿರು ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ವಾರ, ತಿಥಿ, ಯೋಗ, ಕರಣ, ನಕ್ಷತ್ರ, ಸಕಾ೯ರಿ ರಜಾ ದಿನಗಳು, ಹಬ್ಬ ಹರಿದಿನಗಳು ಮೊದಲಾದ ಮಾಹಿತಿಯೂ ಇದೆ. 'ಕನ್ನಡ' ಎಂಬ ಹೆಸರಿನ

ಹುಳಿಯಾರಿನಲ್ಲಿ ಡಿಸೆಂಬರ್ 15 ರ ಬುಧವಾರ ಗಿರಿಜಾ ಕಲ್ಯಾಣೋತ್ಸವ

ಹುಳಿಯಾರಿನ ಆರ್ಯವೈಶ್ಯ ಮಂಡಲಿಯಿಂದ ಇಲ್ಲಿನ ಶ್ರೀ ವಾಸವಿ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 15 ರ ಬುಧವಾರ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 8-55 ರಿಂದ 10-47 ಕ್ಕೆ ಸಲ್ಲುವ ಶುಭ ಧನುಸ್ಸು ಲಗ್ನದಲ್ಲಿ ಪಾರ್ವತಿ ಮತ್ತು ಪರಮೇಶ್ವರರಿಗೆ ಕಲ್ಯಾಣೋತ್ಸವ ನಡೆಸಲಿದ್ದು ಇದರ ಅಂಗವಾಗಿ ನಾಂದಿ, ವರಪೂಜೆ, ನಿಶ್ಚಿತಾರ್ಥ, ಮೂಹೂರ್ತ ಮುಂತಾದ ವಿವಾಹ ಸಂಬಂಧ ಚಟುವಟಿಕೆಗಳು ಜರುಗಲಿದೆ. ಇದೇ ಸಂದರ್ಭದಲ್ಲಿ ಮದುವೆ ಆಗದಿದ್ದವರಿಗೆ ಕಂಕಣಧಾರಣೆಗೆ ಅವಕಾಶವಿದ್ದು 101 ರು. ಕೊಟ್ಟು ಹೆಸರು ನೊಂದಾಯಿಸಬಹುದಾಗಿದೆ. ಅಲ್ಲದೆ, ಸಂಜೆ ಈಶ್ವರ ಮತ್ತು ಪಾರ್ವತಿಯರ ರಾಜ ಬೀದಿ ಉತ್ಸವ ನಡೆಸಿ ಡಿ.16 ರ ಗುರುವಾರ ಸಂಜೆ 4 ಕ್ಕೆ ತಿರುಮಲಾಪುರದ ಚಂದ್ರಮೌಳೇಶ್ವರ ದೇವಸ್ಥಾನದ ಬಳಿ ವಿಸರ್ಜನಾ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಸ್ಥಾನ ಸಮಿತಿ ಸಹ ಸಂಚಾಲಕ ಬಿ.ವಿ.ಶ್ರೀನಿವಾಸಮೂತಿ೯ ತಿಳಿಸಿದ್ದಾರೆ.

ಕೃಷಿಯಲ್ಲಿ ವೈವಿದ್ಯತೆ ಅಗತ್ಯ: ಶಿವಾನಂದ ಕಳವೆ

(ಹುಳಿಯಾರು ಹೋಬಳಿ ಡಿಂಕನಹಳ್ಳಿಯಲ್ಲಿ ಸಮೃದ್ಧ ಸಾವಯವ ಕೃಷಿ ಪರಿವಾರದ ತರಬೇತಿ ಶಿಬಿರದಲ್ಲಿ ಶಿವಾನಂದ ಕಳವೆ, ಡಾ.ಕೃಷ್ಣರಾಜ ಅರಸ್, ಕೆ.ರಂಗಯ್ಯ, ಎಸ್.ಎಚ್.ಚಂದ್ರಶೇಖರಯ್ಯ ಇದ್ದಾರೆ.) ಕೃಷಿಯಲ್ಲಿ ವೈವಿದ್ಯತೆ ಉಳಿಸಿಕೊಂಡರೆ ಮುಂದಿನ ದಿನಗಳಲ್ಲಿ ಹಳ್ಳಿಗಳು, ಕೃಷಿ ತಾಕುಗಳು ಮಾರಾಟವಾಗುವುದು ತಪ್ಪುತ್ತದೆ. ನೆಲ ಜಲ ಸಂರಕ್ಷಣೆಯಲ್ಲಿ ನಮ್ಮ ಹಿರಿಯರ ಪಾರಂಪಾರಿಕ ಜ್ಞಾನವನ್ನು, ಅನುಭವವನ್ನು ಅನುಕರಿಸಿದಲ್ಲಿ ಮುಂದೆ ಅದು ದಾರಿ ದೀಪವಾಗಲಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶಿವಾನಂದ ಕಳವೆ ಅವರು ಹೇಳಿದರು ಹುಳಿಯಾರು ಹೋಬಳಿ ಡಿಂಕನಹಳ್ಳಿಯ ಶಿಕ್ಷಕ ಎಂ.ರಾಜಣ್ಣ ಅವರ ತೋಟದಲ್ಲಿ ಸಾವಯವ ಕೃಷಿ ಮಿಷನ್, ಕೃಷಿ ಇಲಾಖೆ ಹಾಗೂ ಸಮೃದ್ಧ ಸಾವಯವ ಕೃಷಿ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಮೂಡಿಗೆರೆ ಡಾ.ಕೃಷ್ಣರಾಜ ಅರಸ್ ಪಶು ಸಂಗೋಪನೆ ಮತ್ತು ಆಥಿ೯ಕತೆ ಕುರಿತು ಮಾತನಾಡಿ ಗೋವಿನ ಗಂಜಲ, ಸಗಣೆ, ಮಜ್ಜಿಗೆ, ಮೊಸರು ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಿ ಗೋವು ನಮ್ಮ ಸಂಸ್ಕೃತಿಯ ಭಾಗವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ರೈತರಿಗೆ ತಿಳಿಹೇಳಿದರು. ಕೃಷಿ ಅಧಿಕಾರಿ ಕೆ.ರಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪರಿವಾರದ ಅಧ್ಯಕ್ಷರಾದ ಎಸ್.ಎಚ್.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣಪ್ಪ, ಅಣೆಕಟ್ಟೆ ರಘುರಾಂ, ಅರುಣ್ ಕುಮಾರ್, ಓಂಕಾರಮೂತಿ೯, ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಗುಜರಾತ್ ಮಾದರಿಯಲ್ಲಿ ಹೈನುಗಾರಿಗೆ ಮಾಡಿ;ಹಳೇಮನೆ ಶಿವನಂಜಪ್ಪ

( ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಹಾಲು ಶೇಖರಣಾ ಉಪಕೇಂದ್ರವನ್ನು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಉದ್ಘಾಟಿಸಿದರು. ಡಾ.ಸುಬ್ರಾಯಭಟ್, ಎ.ಪಿ.ಯರಗುಂಟಪ್ಪ, ಬುದ್ದಿಪ್ರಸಾದ್, ಉಷಾ ಕೃಷ್ಣಮೂರ್ತಿ ಇದ್ದಾರೆ.) ಗುಜರಾತಿನಲ್ಲಿ ರೈತರು ದುಪ್ಪಟ್ಟು ಹಣ ಕೊಡುತ್ತೇನೆಂದರೂ ಸಹಕಾರ ಸಂಘ ಬಿಟ್ಟು ಸ್ಥಳಿಯವಾಗಿ ಹಾಲು ಮಾರುವುದಿಲ್ಲ. ಇದರಿಂದ ರೈತರೈತರಲ್ಲಿಯೇ ಛಲ ಹುಟ್ಟಿ ಪ್ರತಿಯೊಬ್ಬರೂ ಹಸು ಕಟ್ಟುತ್ತಿದ್ದಾರೆ. ಜೊತೆಗೆ ದೇಶದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ತಿಳಿಸಿದರು. ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಗೂಬೇಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಉಪಕೇಂದ್ರದ ಪ್ರಾರಂಭೋತ್ಸವವನ್ನು ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಕ್ಕೆ ಮಾತ್ರವೇ ಹಾಲು ಹಾಕುವುದರಿಂದ ಅದರಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ಪಡೆದು ರೈತ ಆರ್ಥಿಕವಾಗಿ ಉನ್ನತಿಯಾಗಬಹುದು. ಹಾಗಾಗಿ ಖಾಸಗಿ ಕೇಂದ್ರ ಹಾಗೂ ಸ್ಥಳಿಯವಾಗಿ ಹಾಲು ಮಾರದೆ ನೇರವಾಗಿ ಹಾಲು ಒಕ್ಕೂಟಕ್ಕೆ ಹಾಲು ಹಾಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸುಬ್ರಾಯಭಟ್ ಅವರು ಮಾತನಾಡಿ ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನ

ಎಲ್.ಲತಾಮಣಿಗೆ ರಾಜ್ಯ ಮಟ್ಟದ ವಿದ್ಯಾರ್ಥಿವೇತನ

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ರಾಜ್ಯ ಮಟ್ಟದ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9 ನೇ ತರಗತಿಯ ಎಲ್.ಲತಾಮಣಿ ಅವರು ಉತ್ತೀರ್ಣರಾಗಿ ಪ್ರತಿ ತಿಂಗಳು ಇಲಾಖೆ ನೀಡುವ 500 ರು. ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ.

ಹುಳಿಯಾರು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯ ಕೃತಿಕೋತ್ಸವ

ಹುಳಿಯಾರಿನ ಪುರಾಣ ಪ್ರಸಿದ್ಧ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಕೃತಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ತಿಕ ಮಾಸದಲ್ಲಿ ಕೃತಿಕಾ ನಕ್ಷತ್ರದ ದಿನ ವೈಷ್ಣವ ದೇವಾಲಯದಲ್ಲಿ ಕೃತಿಕೋತ್ಸವ ಎಂಬ ಹೆಸರಿನಲ್ಲಿ ದೀಪೋತ್ಸವ ಆಚರಿಸುವ ಸಂಪ್ರದಾಯವಿದ್ದು ಇದರಂಗವಾಗಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಣತೆ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸುವ ಮೂಲಕ ಸಡಗರದಿಂದ ಆಚರಿಸಲಾಯಿತು. ಶೇಷಶಯನ ರಂಗನಾಥನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಸವರ್ಾಲಂಕೃತವಾದ ರಂಗನಾಥ ಸ್ವಾಮಿ ಉತ್ಸವ ಮೂರ್ತಿಗೆ ವಿಧಿವತ್ತಾಗಿ ಪೂಜಿಸಿ ಪ್ರಾಕಾರೋತ್ಸವ ನಡೆಸಲಾಯಿತು. ಗರುಡಗಂಭದ ಮೇಲೆ ಘಟಾರತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಸ್ವಾಮಿಯವರಿಗೆ ಮಣೇವು ಹಾಖುವ ಕಾರ್ಯಕ್ರಮ ಮತ್ತು ಕರುಗು ಸುಡುವ (ತೈಲದಿಂದ ಅದ್ದಿದ ಬಟ್ಟೆಯನ್ನು ಗೋಪುರದ ಮುಂಭಾಗದಲ್ಲಿ ಸುಡುವುದು) ಕಾರ್ಯಕ್ರಮಗಳು ನೆರವೇರಿತು. ಸುಟ್ಟು ಬೂದಿಯಾದ ಕರುಗನ್ನು ಭಕ್ತಾಧಿಗಳು ಸಂಕಷ್ಠಗಳನ್ನು ಕರಗಿಸುವಂತೆ ಪ್ರಾರ್ಥಿಸಿ ಹಣೆಗೆ ಧರಿಸಿದರು. ಪೂಜಾ ಕಾರ್ಯವನ್ನು ಅರ್ಚಕರಾದ ಎಚ್.ಕೆ.ಗುಂಡಣ್ಣ, ಎಚ್.ಎಸ್.ಲಕ್ಷ್ಮೀನರಸಿಂಹಯ್ಯ, ಜೆ.ಗುಂಡಪ್ಪ ಅವರು ನಡೆಸಿಕೊಟ್ಟರು. ವಿಪ್ರ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನರವೇರಿತು. ಎಚ್.ಎ.ಸುಬ್ರಹ್ಮಣ್ಯರವರಿಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಹು.ಕೃ.ವಿಶ್ವನಾಥ್, ರಂಗನ

ಹುಳಿಯಾರಿನಲ್ಲಿ ಬಸ್ಸ್ ಏಜೆಂಟರ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಹುಳಿಯಾರಿನ ಖಾಸಗಿ ಬಸ್ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಕನ್ನಡಸೇನೆ, ಶ್ರೀದುಗಾ೯ಪರಮೇಶ್ವರಿ ಕಲಾ ಸಂಘ, ಫುಟ್ಪಾತ್ ವ್ಯಾಪಾರಸ್ಥರ ಸೇವಾ ಛಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ 55 ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಅದ್ದೂರಿಯಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಾಚಲಪತಿಶೆಟ್ಟಿ ಬಸ್ಸ್ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ನಂತರ ಊರಿನ ರಾಜಬೀದಿಗಳಲ್ಲಿ ಗ್ರಾಮ ದೇವತೆ ಶ್ರೀದುಗಾ೯ಪರಮೇಶ್ವರಿ ಅಮ್ಮನವರು, ರಾಜರಾಜೇಶ್ವರಿ ಅಮ್ಮನವರ ಭಾವಚಿತ್ರ ಹಾಗೂ ಕನ್ನಡಕ್ಕಾಗಿ ದುಡಿದು ಮಡಿದ ಕಟ್ಟಾಳುಗಳ ವೇಷಧಾರಿಗಳ ಮೆರವಣಿಗೆಯನ್ನು ವೈಭವದಿಂದ ಮಾಡಲಾಯಿತು. ದೊಡ್ಡಬಿದರೆಯ ವೀರಗಾಸೆ, ಸಿಂಗಾಪುರದ ಡೊಳ್ಳುಕುಣಿತ, ಬಿಳಿಗೆರೆಯ ನಾಸಿಕ್ ಡೋಲ್, ಸಕಾ೯ರಿ ಪ್ರೌಢಶಾಲೆಯ ಕೋಲಾಟ, ಸಿಡಿಮದ್ದಿನ ಪ್ರದರ್ಶನ ಮೆರವಣಿಗೆಗೆ ಮೆರಗು ತಂದವು. ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ವಾಸವಿ ಮತ್ತು ಕೇಶವ ಶಾಲೆ ಹಾಗೂ ಯೋಗಿನಾರಾಯಣ ಐಟಿಐ ಕಾಲೇಜು ವಿದ್ಯಾಥಿ೯ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ವೆಂಕಟಮ್ಮ, ತಾ.ಪಂ.ಸದಸ್ಯ ಶಿವನಂಜಪ್ಪ, ರೈತ ಸಂಘದ ಕೆಂಕೆರೆ ಸತೀಶ್, ಏಜೆಂಟರ ಸಂಘದ ಎಂ.ಎ.ಲೋಕೇಶ್, ಹು.ಕೃ.ವಿಶ್ವನಾಥ್, ಮಹಮದ್ ಇಂತಿಯಾಜ್, ಕನ್ನಡಸೇನೆಯ ಎಚ್.ಎನ್.ಕುಮಾರ್, ನಾಗಭೂ

ಹುಳಿಯಾರಿನಲ್ಲಿ ಫುಟ್ಪಾತ್ ವ್ಯಾಪಾರಿಗಳ ಸಂಘ ಅಸ್ಥಿತ್ವಕ್ಕೆ

ಹುಳಿಯಾರಿನ ಬಸ್ಸ್ ನಿಲ್ದಾಣದಲ್ಲಿ ಫುಟ್ಪಾತ್ ವ್ಯಾಪಾರಸ್ಥರ ಸೇವಾ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ. ನೂತನ ಟ್ರಸ್ಟ್ನ ಸಂಸ್ಥಾಪಕ ಗೌರವ ಅಧ್ಯಕ್ಷರಾಗಿ ಎಚ್.ಎನ್.ಮಲ್ಲೇಶ್, ಅಧ್ಯಕ್ಷರಾಗಿ ಎಚ್.ಜಿ.ಬಸವರಾಜು, ಉಪಾಧ್ಯಕ್ಷರಾಗಿ ಎಚ್.ಕೆ.ನರಸಿಂಹಮೂತಿ೯, ಕಾರ್ಯದಶಿ೯ಯಾಗಿ ಎಚ್.ಪಿ.ರಾಘವೇಂದ್ರ, ಸಹಕಾರ್ಯದಶಿ೯ಯಾಗಿ ಉಮಾದೇವಿ, ಖಜಾಂಜಿಯಾಗಿ ದಯಾನಂದ್ ಅವರು ಆಯ್ಕೆಯಾಗಿದ್ದಾರೆ. ಟ್ರಸ್ಟೀಗಳಾಗಿ ಜಮೀರ್ ಅಹಮದ್, ಪಿ.ಎಸ್.ಮಂಜುನಾಥ್, ಮೌಲಾ, ನಾಗರಾಜು, ಎಚ್.ಎಸ್.ರಘುನಾಥ್ ಅವರುಗಳನ್ನು ಆಯ್ಕೆಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗರ ಜಿ.ಎಸ್.ವೆಂಕಟಾಚಲಪತಿಶೆಟ್ಟಿ, ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ವೆಂಕಟಮ್ಮ, ರೈತ ಸಂಘದ ಕೆಂಕೆರೆ ಸತೀಶ್, ಮಲ್ಲಿಕಾಜು೯ನ್, ಏಜೆಂಟರ ಸಂಘದ ಎಂ.ಎ.ಲೋಕೇಶ್, ಹು.ಕೃ.ವಿಶ್ವನಾಥ್, ಮಹಮದ್ ಇಂತಿಯಾಜ್, ಕನ್ನಡಸೇನೆಯ ಎಚ್.ಎನ್.ಕುಮಾರ್, ನಾಗಭೂಷಣ್ ಮತ್ತಿತರರು ನೂತನ ಟ್ರಸ್ಟ್ ಉದ್ಘಾಟಿಸಿದರು.

ಕಾಳಮ್ಮನವರಿಗೆ ಸರ್ಪಾಲಂಕಾರ

ಹುಳಿಯಾರಿನ ಶ್ರೀ ಕಾಳಮ್ಮನವರಿಗೆ ಅರ್ಚಕ ಎಚ್.ಎಚ್.ರಾಜಗೋಪಾಲಚಾರ್ ಅವರು ಕಾರ್ತಿಕ ಮಾಸದ ಅಂಗವಾಗಿ ಸರ್ಪಾಲಂಕಾರ ಮಾಡಿದ್ದು ಭಕ್ತರನ್ನು ಆಕರ್ಷಿಸಿತ್ತು.

ಗ್ರಾಮೀಣ ಭಾಗದಲ್ಲಿ ರೋಟರಿಯ ಸೇವೆ ಶ್ಲಾಘನೀಯ:ಡಿಸಿಪಿ ಸಿದ್ದರಾಮಣ್ಣ

(ಹುಳಿಯಾರಿನ ವಾಸವಿ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆ ತುಮಕೂರು ಹಾಗೂ ಹುಳಿಯಾರು, ಮಣಿಪಾಲ್ ತುಮಕೂರು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಡಿಸಿಪಿ ಸಿದ್ದರಾಮಣ್ಣ ಮಾತನಾಡಿದರು. ತುಮಕೂರು ರೋಟರಿ ಅಧ್ಯಕ್ಷ ವಿಶ್ವನಾಥ್,ಮಾಜಿ ಅಧ್ಯಕ್ಷ ವಿಶ್ವನಾಥ್, ಹುಳಿಯಾರು ರೋಟರಿ ಅಧ್ಯಕ್ಷ ಮಂಜುನಾಥ್ ಗುಪ್ತ,ರವೀಶ್ ಇದ್ದಾರೆ.) ಅಂತರಾಷ್ಟ್ರೀಯ ಸೇವಾಸಂಸ್ಥೆಯಾದ ರೋಟರಿ ಸೌಲಭ್ಯ ವಂಚಿತ ಗ್ರಾಮೀಣ ಭಾಗದಲ್ಲೂ ತೊಡಗಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಸಿದ್ದರಾಮಣ್ಣ ಪ್ರಶಂಸೆ ವ್ಯಕ್ತಪಡಿಸಿದರು. ಹುಳಿಯಾರಿನ ವಾಸವಿ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆ ತುಮಕೂರು ಹಾಗೂ ಹುಳಿಯಾರು, ಮಣಿಪಾಲ್ ತುಮಕೂರು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉಧ್ಘಾಟಿಸಿ ಅವರು ಮಾತನಾಡಿದರು. ಪಟ್ಟಣ ಪ್ರದೇಶದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು,ಉತ್ತಮ ಚಿಕಿತ್ಸ ಸೌಲಭ್ಯಗಳು ಲಭ್ಯವಿದ್ದು ಗ್ರಾಮೀಣ ಭಾಗದ ಜನಗಳಿಗೂ ಇಂತಹ ಸೌಲಭ್ಯ ಅತಿ ಕಡಿಮೆ ಖಚಿ೯ನಲ್ಲಿ ದೊರೆಯಲಿ ಎಂಬ ಸದುದ್ದೇಶದಿಂದ ರೋಟರಿ ಸಂಸ್ಥೆ ಉಚಿತ ತಪಾಸಣ ಶಿಬಿರ ಹಮ್ಮಿಕೊಂಡಿದ್ದು ಮುಂದಿನ ದಿನದಲ್ಲಿ ರೋಟರಿ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳು ಇಂತಹ ಕಾರ್ಯವನ್ನು ಆಂದೋಲನ ರೂಪದಲ್ಲಿ ಹಮ್ಮಿಕೊಂಡು ಸೇವಾಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಸ

ಕನಕದಾಸರ ಕೀರ್ತನೆಗಳು ಅನುಭಾವದ ಸಾರ

( ಹುಳಿಯಾರು ಎಚ್ಪಿಜಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಸಿಆರ್ಪಿ ಮಹಾಲಿಂಗಪ್ಪ ಅವರು ಮಾತನಾಡಿದರು. ಪ್ರಸನ್ನಕುಮಾರ್, ಲೋಕೇಶ್, ಜಾಕೀರ್ ಹುಸೇನ್, ಎಂ.ನಾಗರಾಜು ಇದ್ದಾರೆ.) ಕನಕದಾಸರ ಕೀರ್ತನೆಗಳು ಅನುಭಾವದ ಸಾರ ಕನಕದಸರ ಕೀರ್ತನೆಗಳು ಅನುಭಾವದ ಸಾರಗಳಾಗಿದ್ದು ಸರ್ವ ಕಾಲಕ್ಕೂ ಶ್ರೇಷ್ಠ ಜ್ಞಾನದ ದೀವಿಗೆಯಾಗಿದೆ ಎಂದು ಶಿಕ್ಷಕ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಕನಕದಾಸರ 523 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಮ್ಮಪ್ಪನಾಯಕ ತಮಗೆ ಸಿಕ್ಕಿದ ಕನಕವನ್ನು ಬಡಬಗ್ಗರಿಗೆ ಹಂಚುವ ಮೂಲಕ ಕನಕದಾಸರಾದರು. ಉಡುಪಿ ಶ್ರೀ ಕೃಷ್ಣನನ್ನು ಮೇಲ್ವರ್ಗದವರ ಪ್ರಭಲ ಅಡ್ಡಿಯ ನಡುವೆಯೂ ಒಲಿಸಿಕೊಂಡು ಭಕ್ತಶ್ರೇಷ್ಠರಾದರು. ವಿಶಿಷ್ಠ ವೈಚಾರಿಕ ದೃಷ್ಠಿಯಿಂದ ಬದುಕಿನ ನೈಜ ಚಿತ್ರಣವನ್ನು ಬದಲಾಯಿಸಲು ಸಾಹಿತ್ಯ ರಚಿಸಿ ಕವಿಶ್ರೇಷ್ಠರಾದರು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ವಹಿಸಿದ್ದರು. ಉಪಾಧ್ಯಕ್ಷ ಲೋಕೇಶ್, ಸದಸ್ಯರುಗಳಾದ ಜಾಕೀರ್ ಹುಸೇನ್, ಎಂ.ನಾಗರಾಜು, ತಿಪ್ಪೇಶ್, ಫಾತೀಮಾ, ಸಿಆರ್ಪಿ ಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಮಲ ಸಂಗಡಿಗರು ಪ್ರಾರ್ಥಿಸಿ ಮುಖ್ಯ ಶಿಕ್ಷಕ ಪಿ.ಬಿ.ನಂದಾವಾಡಗಿ ಸ್ವಾಗತಿಸಿ ಶಿಕ್ಷಕಿ ಲಕ್ಷ್ಮೀಬಾಯಿ ನಿರೂಪಿಸ

ಕುರುಬರ ಸಂಘದ ವತಿಯಿಂದ ಕನಕ ಜಯಂತಿ

ಹುಳಿಯಾರು ಹೋಬಳಿ ಕುರುಬರ ಸಂಘದ ವತಿಯಿಂದ ಕನಕ ಜಯಂತಿ ಅಂಗವಾಗಿ ರೋಗಿಗಳಿಗೆ ಹಾಲು-ಹಣ್ಣು-ಬ್ರೆಡ್ ವಿತರಿಸಲಾಯಿತು. ಜಿ.ಪಂ.ಸದಸ್ಯ ಹೊನ್ನಯ್ಯ, ತಾ.ಪಂ.ಸದಸ್ಯ ಶಿವನಂಜಪ್ಪ, ವೈ.ಸಿ.ಸಿದ್ಧರಾಮಯ್ಯ, ಎಚ್.ಆರ್.ರಂಗನಾಥ್, ಎಸ್.ರಾಮಯ್ಯ, ಗೋವಿಂದಪ್ಪ, ಮತ್ತಿತರಿದ್ದಾರೆ.

ಕನಕ ಪತ್ತಿನ ಸಹಕಾರ ಸಂಘದಲ್ಲಿ ಕನಕ ಜಯಂತಿ

ಹುಳಿಯಾರಿನ ಕನಕ ಪತ್ತಿನ ಸಹಕಾರ ಸಂಘದಲ್ಲಿ ಕನಕ ಜಯಂತಿ ಆಚರಿಸಲಾಯಿತು. ವೈ.ಸಿ.ಸಿದ್ಧರಾಮಯ್ಯ, ಎಚ್.ಅಶೋಕ್, ಎನ್.ಬಿ.ಗವೀರಂಗಯ್ಯ, ಜಯಣ್ಣ, ಎಚ್.ಆರ್.ರಂಗನಾಥ್ ಮತ್ತಿತರರು ಇದ್ದಾರೆ.

ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ

(ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಬೇರೆ ಗ್ರಾಮದ ನಿರಾಶ್ರಿತರಿಗೆ ಭೂಮಿ ನೀಡದಂತೆ ಗ್ರಾ.ಪಂ.ಸದಸ್ಯರಾದ ಎಂ.ಅಶೋಕ್ ಬಾಬು, ಬಾಲರಾಜು ನೇತೃತ್ವದಲ್ಲಿ ಉಪತಹಸೀಲ್ದಾರ್ ಅಂಜಿನಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು ) ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ ಹುಳಿಯಾರು ಕೆರೆಗೆ ನೀರು ಹರಿಸುತ್ತಿರುವುದರಿಂದ ಮನೆ ಕಳೆದುಕೊಂಡು ಬೀದಿಗೆ ಬಂದಿರುವ ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಪುನರ್ವಸತಿ ಕಲ್ಪಿಸುವ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಅವರ ಯೋಜನೆಗೆ ಸೋಮಜ್ಜನಪಾಳ್ಯದ ಕೆಲ ಗ್ರಾಮಸ್ಥರು ಹಾಗೂ ಕೆಲವು ಗ್ರಾ.ಪಂ.ಸದಸ್ಯರುಗಳು ವಿರೋಧ ವ್ಯಕ್ತಪಡಿಸಿ ಉಪತಹಸೀಲ್ದಾರ್ ಅಂಜಿನಪ್ಪ ಅವರಿಗೆ ಮಂಗಳವಾರ ಪತ್ರ ಸಲ್ಲಿಸಿದ್ದಾರೆ. ಸೋಮಜ್ಜನಪಾಳ್ಯದ ಸರ್ಕಾರಿ ಸರ್ವೆ ನಂ 99 ರಲ್ಲಿ 4 ಎಕರೆ 36 ಕುಂಟೆ ಗೋಮಾಳವಿದ್ದು ಇದರಲ್ಲಿ 91-92 ರಲ್ಲಿಯೇ 45 ಮಂದಿಗೆ ಆಶ್ರಯ ಯೋಜನೆಯಲ್ಲಿ 30*40 ಅಳತೆಯ ನಿವೇಶನದ ಹಕ್ಕು ಪತ್ರ ನೀಡಲಾಗಿದೆಯಲ್ಲದೆ ಇನ್ನೂ ಕೆಲವರಿಗೆ ಶ್ರೀಘದಲ್ಲಿಯೇ ಹಕ್ಕು ಪತ್ರ ನೀಡುಲಾಗುವುದಿದ್ದು ಇದರಲ್ಲಿ ಈಗಾಗಲೇ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಕಟ್ಟಿದ ಮನೆಗಳು ಬಿದ್ದು ಹೋಗಿವೆ. ಇನ್ನೂ ಕೆಲವರು ನಿವೇಶವನ್ನು ಸಾವಿರಾರರು ರು. ವೆಚ್ಚದಲ್ಲಿ ಸ್ವಚ್ಚಗೊಳಿಸಿಟ್ಟುಕೊಂಡಿದ್ದಾರೆ.ಅಲ್ಲದೆ ಇದೇ ಗ್ರಾಮದಲ್ಲಿಯೇ ನಿರಾಶ್ರಿತರು ಇರುವಾಗ ಬೇರೆ ಗ್ರಾಮ

ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ

ನವೆಂಬರ್ 24 ರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ:ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ

(ಹುಳಿಯಾರು ಸಮೀಪದ ಬರದಲೇಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲಿನ ಗುಣಮಟ್ಟ ಪರೀಕ್ಷಿಸುವ ಮೂಲಕ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಉದ್ಘಾಟಿಸಿದರು. ಎನ್.ಗೌಡಯ್ಯ, ಧನಂಜಯ್ಯ, ಕೆ.ಸಿ.ಕೇಶವಮೂರ್ತಿ, ಕೆಂಕೆರೆ ಸತೀಶ್ ಇದ್ದಾರೆ.) ನವೆಂಬರ್ 24 ರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ:ಹಳೆಮನೆ ಶಿವನಂಜಪ್ಪ -------------------------------------------------------------------- ನವೆಂಬರ್ 24 ರಿಂದ ತುಮಕೂರು ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಿರುವ ರೈತರಿಗೆ ಇಲ್ಲಿಯವರೆವಿಗೆ ಸರ್ಕಾರದ ಪ್ರೋತ್ಸಾಹ ಧನ ಸೇರಿ ನೀಡಲಾಗಿತ್ತಿದ್ದ ಹದಿನಾರುವರೆ ರು. ಬದಲಿಗೆ ಎಪ್ಪತೈದು ಪೈಸೆ ಹೆಚ್ಚಳ ಮಾಡಿ ಹದಿನೇಳುಕಾಲು ರು. ನೀಡಲು ನಿರ್ಧರಿಸಿರುವುದಾಗಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅವರು ತಿಳಿಸಿದರು. ಹುಳಿಯಾರು ಸಮೀಪದ ಬರದಲೇಪಾಳ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ತುಮಕೂರು ಒಕ್ಕೂಟ ಹಾಲು ಪೌಡರಿಗೆ ಹೋಗಿ ಬಹಳ ನಷ್ಟದಲ್ಲಿತ್ತು. ಆದರೆ ಈಗ ಕೇರಳ, ಬಳ್ಳಾರಿ, ಮುಂಬೈಗಳಿಗೆ ಹೋಗುತ್ತಿದ್ದು ಲಾಭದಲ್ಲಿ ನಡೆಯುತ್ತಿದೆ ಎಂದರಲ್ಲದೆ, ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಮೊದಲು ದಿನಕ್ಕೆ 6 ಸಾವಿರ ಲೀ. ಹಾಲು ಒಕ್ಕೂಟಕ್ಕೆ ಹೋಗುತ್ತಿತ್ತು. ಈಗ 40 ಸಾವಿರ ಲೀ. ಹೋಗುತ್ತಿದೆ. ಇದನ್ನು 1 ಲಕ್ಷಕ್ಕೆ ಮುಟ್ಟಿಸುವ ಗುರಿ ಇಟ್ಟುಕೊಂಡಿ

ಶಾಶ್ವತ ಕುಡಿಯುವ ನೀರಿಗಾಗಿ ಬೆಂಗಳೂರಿಗೆ ಪಾದಯಾತ್ರೆ;ಭಾನುವಾರ ಪೂರ್ವಭಾವಿ ಸಭೆ

ಶಾಶ್ವತ ಕುಡಿಯುವ ನೀರಿಗಾಗಿ ಆಗ್ರಹಿಸಿ ಇದುವರೆಗೂ ನಡೆದ ಹೋರಾಟಗಳಿಗೆ ಸಕಾ೯ರ ನೀಡಿದ ಭರವಸೆಗಳು ವರ್ಷಗಳುರುಳಿದರೂ ಅನುಷ್ಠಾನಗೊಳ್ಳದೆ ಕೇವಲ ಭರವಸೆಗಳಾಗಿಯೆ ಉಳಿದಿರುವ ಹಿನ್ನಲೆಯಲ್ಲಿ ಶಾಶ್ವತ ಕುಡಿಯುವ ನೀರು ಹೋರಾಟ ಒಕ್ಕೂಟದ ವತಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಾಗೂ ಮುಖ್ಯಮಂತ್ರಿಗಳ ಮನೆ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.ಈ ಹಿನ್ನಲೆಯಲ್ಲಿ ಇದೇ 29 ರ ಭಾನುವಾರ ಮದ್ಯಾಹ್ನ 2 ಗಂಟೆಗೆ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಈ ಹಿಂದೆ ನಡೆದ ಧರಣಿ ಸಂದರ್ಭದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದ ಎಲ್ಲಾ ಸಂಘ ಸಂಸ್ಥೆಗಳು,ಹಾಗೂ ತಾಲ್ಲೂಕಿನ ಹೋರಾಟಗಾರರು ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವಂತೆ ಹಾಗೂ ಹೆಚ್ಚಿನ ವಿವರಗಳಿಗೆ ಗಾಣಧಾಳ್ ವೀರಭದ್ರಪ್ಪ ಅಥವಾ ಕೆಂಕೆರೆ ಸತೀಶ್ ಅವರನ್ನು ಸಂಪಕಿ೯ಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಹುಳಿಯಾರಿನಲ್ಲಿ ಆ.29 ರಂದು ಉಚಿತ ನರ ಮತ್ತು ಮನೋರೋಗ ತಪಾಸಣಾ ಶಿಬಿರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ನೇಹ ಮನೋವಿಕಾಸ ಕೇಂದ್ರ ಹಾಗೂ ಸ್ಪಂದನ ನರ್ಸಿಂಗ್ ಹೋಂ, ತಾಲೂಕು ವೈದ್ಯರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆ.29 ರ ಭಾನುವಾರ ಹುಳಿಯಾರಿನ ಸ್ಪಂದನ ನರ್ಸಿಂಗ್ ಹೋಂ ಆವರಣದಲ್ಲಿ ಉಚಿತ ನರ ಮತ್ತು ಮನೋರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ. ಸ್ನೇಹ ಮನೋವಿಕಾಸ ಕೇಂದ್ರದ ನರ ಮತ್ತು ಮನೋವೈದ್ಯರಾದ ಡಾ.ಲೋಕೇಶ್ ಬಾಬು ಅವರು ಉದ್ಘಾಟಿಸುವ ಈ ಶಿಬಿರದ ಅಧ್ಯಕ್ಷತೆಯನ್ನು ತಾಲೂಕು ವೈದ್ಯರ ಸಂಘದ ಅಧ್ಯಕ್ಷ ವೈ.ಜಿ.ಸಿದ್ಧರಾಮಯ್ಯ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ನಾಗರಾಜು, ಡಾ.ಶ್ರೀನಿವಾಸ್, ಜಿ.ಮಂಜುನಾಥಗುಪ್ತ, ರವೀಶ್ ಅವರು ಭಾಗವಹಿಸುವರು. ಬಹು ದಿನದ ವಾಸಿಯಾಗದ ತಲೆ, ಬೆನ್ನು, ಎದೆ, ಮೈಕೈ ನೋವು, ನರಸೆಳೆತ, ತಲೆ ತಿರುಗು, ಕೈನಡುಗುವುದು, ಅಂಗೈ ಹೆಚ್ಚಾಗಿ ಬೆವರುವುದು, ಸುಮ್ಮನೆ ಹೆದರಿಕೆ, ಗಾಬರಿಯಾಗುವುದು, ನಿದ್ದೆ ಇಲ್ಲದಿರುವುದು, ಅತಿಯಾದ ಯೋಚನೆ, ಸದಾ ಚಿಂತೆ ಕಾಡುವುದು, ಮೂಛೆ೯ ಬಂದು ಬೀಳುವುದು ಹೀಗೆ ಅನೇಕ ತೊಂದರೆಯಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಾಲನೆ

ಹುಳಿಯಾರು ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಉದ್ಘಾಟನಾ ಸಭೆಯಲ್ಲಿ ತಹಸೀಲ್ದಾರ್ ಟಿ.ಸಿ.ಕಾಂತರಾಜು , ಸೈ.ಮುನೀರ್, ಚನ್ನಬಸವಯ್ಯ,ನಾಗರಾಜು,ನಾಗರತ್ನಮ್ಮ ಭಾಗವಹಿಸಿರುವುದು. ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಾಲನೆ ------------------------------------------- ತಾಲೂಕು ಆಡಳಿತ ವತಿಯಿಂದ ಹಂದನಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಗಣತಿ ಕಾರ್ಯಕ್ಕೆ ತಹಸೀಲ್ದಾರ್ ಟಿ.ಸಿ.ಕಾಂತರಾಜು ಚಾಲನೆ ನೀಡಿದರು. ಇದಕ್ಕೂ ಮನ್ನ ಗಣತಿ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭಯಲ್ಲಿ ಅವರು ಗಣತಿ ಕಾರ್ಯದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ಮಾತನಾಡಿ ರಾಜ್ಯ ಸಕಾ೯ರ ಒದಗಿಸಿರುವ ಮೀಸಲಾತಿ ಸೌಲಭ್ಯವು ಪರಿಶಿಷ್ಠ ಜಾತಿಯ ಎಲ್ಲಾ ಕೋಮು, ಜಾತಿ, ವರ್ಗಗಳಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲದಿದ್ದರೆ ಇದಕ್ಕೆ ಶೈಕ್ಷಣಿಕ, ಆಥಿ೯ಕ, ಸಾಮಾಜಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಇರುವ ಕಾರಣಗಳು ಏನು? ಈ ತಾರತಮ್ಯವನ್ನು ನಿವಾರಿಸಲು ಕೈಗೊಳ್ಳಬೇಕಾದ ಮುಂದಿನ ಕ್ರಮಗಳು ಏನು ಎಂದು ಅರಿಯುವ ಸಲುವಾಗಿ ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಮೀಕ್ಷೆಯಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ, ಶೈಕ್ಷಣ

ಸ್ವಾತಂತ್ರ್ಯ ಹೋರಾಟಗಾರ ಟಿ.ಎಲ್.ಬಾಲಸುಂದರರಾಜಶೆಟ್ಟಿ ನಿಧನ

ಕಳೆದ 4 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹುಳಿಯಾರಿನ ಸ್ವಾತಂತ್ರ್ಯ ಹೋರಾಟಗಾರ ಟಿ.ಎಲ್.ಬಾಲಸುಂದರರಾಜಶೆಟ್ಟಿ(80) ಅವರು ಶುಕ್ರವಾರ ಮುಂಜಾನೆ ಹುಳಿಯಾರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಕರೆಗೆ ಓಗೊಟ್ಟು ಅನೇಕ ಚಳುವಳಿಯಲ್ಲಿ ಭಾಗವಹಿಸಿ ಕಾರಾಗೃಹ ಸೆರೆವಾಸ ಅನುಭವಿಸಿದ್ದರು. ಅಲ್ಲಿಂದ ಐದಾರು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಇವರು ಕನ್ನಿಕಾಪರಮೇಶ್ವರಿ ಸಹಕಾರ ಸಂಘದಲ್ಲಿ 20 ವರ್ಷಗಳ ಕಾಲ ಕಾರ್ಯದಶಿ೯ಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದಶಿ೯ಯಾಗಿ, ಆರ್ಯವೈಶ್ಯ ಮಂಡಳಿ ನಿದೇ೯ಶಕರಾಗಿ ಹಾಗೂ ಸೇವಾದಳದಲ್ಲಿಯೂ ಸಹ ಸೇವೆ ಸಲ್ಲಿಸಿದ್ದರು. ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಸಕಾ೯ರದ ಪರವಾಗಿ ಅಂತಿಮ ದರ್ಶನ ಪಡೆದು ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿ ಅಂತ್ಯ ಸಂಸ್ಕಾರಕ್ಕೆ 2 ಸಾವಿರ ರು. ನೀಡಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಉಪತಹಸೀಲ್ದಾರ್ ಅಂಜಿನಪ್ಪ, ಕಂದಾಯ ತನಿಖಾಧಿಕಾರಿ ಬಸವರಾಜು, ಎಎಸ್ಐ ಸಿದ್ಧರಾಮಯ್ಯ, ಗ್ರಾಮ ಲೆಕ್ಕಿಗ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಗಂಗಾಧರ್, ಆರ್ಯವೈಶ್ಯ ಮಂಡಳಿ ಅದ್ಯಕ್ಷ ಟಿ.ಆರ್.ರಂಗನಾಥ್, ಕಾರ್ಯದಶಿ೯ ಎಲ್.ಆರ್.ಚಂದ್ರಶೇಖರ್, ಎಂ.ಎಸ್.ನಟರಾಜ್ ಸೇರಿದಂತೆ ಆರ್ಯವೈಶ್ಯ ಬಾಂಧವರು, ಸ್ವಾತಂತ್ರ್ಯ ಹೋರಾಟಗಾರರು ಅಂತಿಮ ದರ್ಶನ ಪಡೆದರು. ಮೃತರು ಪತ್ನಿ, 3 ಮಂದಿ ಮಕ್ಕಳು ಹಾಗೂ 4 ಮಂದಿ ಮೊಮ್ಮಕ್ಕಳಲ

ಪೋಟೊ ಕ್ಯಾಪ್ಷನ್

ಪರಿಶಿಷ್ಠ ಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಿನಾಹಳ್ಳಿ ತಹಸಿಲ್ದಾರ್ ಟಿ.ಸಿ.ಕಾಂತರಾಜು ಬೇವಿನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದರು. ಹುಳಿಯಾರಿನಲ್ಲಿ ಕಾಣಿಸಿಕೊಂಡ 10 ರೂ ನೋಟಿಗಿಂತಲೂ ದೊಡ್ಡದಾದ ಅರಿಶಿನ ಬಣ್ಣದ ಆಕರ್ಷಕ ಚಿಟ್ಟೆಯನ್ನು ಅಂಬಿಕಾ ಸ್ಟುಡಿಯೋದ ಎ.ಡಿ.ಸುದರ್ಶನಾಚಾರ್ ಸೆರೆಹಿಡಿದು ಪತ್ರಿಕೆಗೆ ನೀಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ -------------------------------------------- ಡಿಎಸ್ಎಸ್ ನಿಂದ ಇಂದು(ಆ.26 ರಂದು) ಪ್ರತಿಭಟನೆ: --------------------------------------- ಹುಳಿಯಾರು: ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೊವನ್ನು ಕಿಡಿಗೇಡಿಗಳು ಅಲ್ಲಿನ ಶೌಚಾಲಯದಲ್ಲಿಟ್ಟು ಅಪಮಾನ ಮಾಡಿರುವುದಕ್ಕೆ ಸಂಭಂದಿಸಿದಂತೆ ಕನಾ೯ಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕಿನ ಎಲ್ಲಾ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆ.26 ರ ಗುರುವಾರದಂದು ಹುಳಿಯಾರಿನಲ್ಲಿ ಧರಣಿ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಕೇವಲ ಒಂದು ಜಾತಿಗೆ ಸೀಮಿತವಾಗಿರದ ಅಂಬೇಡ್ಕರ್ ಅವರು ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಇಂತಹ ಮೇರು ವ್ಯಕ್ತಿಯ ಭಾವಚಿತ್ರವನ್ನು ಶೌಚಾಲಯದಲ್ಲಿಟ್ಟು ಅವಮಾನ ಮಾಡಿರುವುದು ಘೋರ ಅಪರಾಧವಾಗಿದ್ದು ತಾಲೂಕಿನ ಎಲ್ಲಾ ದಲಿತ ಸಂಘಟನೆಗಳು ಈ ಕೃತ್ಯವನ್ನು ಉಗ್ರವಾಗಿ ಖಂಡಿಸಿ ಸಲುವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಕರೆ ನೀಡಿರುವುದಾಗಿ ದಲಿತ ಮುಖಂಡರು ತಿಳಿಸಿದ್ದಾರೆ. ಒತ್ತಾಯ: ಸಂವಿಧಾನ ರಚಿಸಿದ ರಾಷ್ಟ್ರನಾಯಕನನ್ನು ಶೌಚಾಲಯದಲ್ಲಿ ಇಟ್ಟು ಅಕ್ಷಮ್ಯ ಅಪರಾಧ ಎಸಗಿರುವ ದುರುಳರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಭವನ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ತ

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ 32 ವಿದ್ಯಾಥಿ೯ಗಳು ಆಯ್ಕೆ

ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ 32 ವಿದ್ಯಾಥಿ೯ಗಳು ಆಯ್ಕೆ ------------------------------------------------------------------------------------- ಹುಳಿಯಾರು-ಕೆಂಕೆರೆ ಸಕಾ೯ರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 32 ವಿದ್ಯಾಥಿ೯ಗಳು 2010-11 ನೇ ಸಾಲಿನ ಪ್ರೌಢಶಾಲಾ ವಿದ್ಯಾಥಿ೯ಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಪ್ರದಶಿ೯ಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಭಾಜನರಾಗಿದ್ದಾರೆ. ಗಂಡು ಮಕ್ಕಳ ವಿಭಾಗದಲ್ಲಿ ಮಹಮದ್ ವಾಸೀಮ್(100 ಮತ್ತು 800 ಮೀ.ಓಟ ಹಾಗೂ ರೀಲೆ), ಡಿ.ಹರ್ಷ(ಜಾವಲಿನ್ ಥ್ರೋ), ಎಚ್.ಎಸ್.ಬಸವರಾಜು(1500 ಮೀ.ಓಟ), ವೈ.ಪಿ.ಅರುಣ್(ನಡಿಗೆ), ಅಬ್ದುಲ್ ರಹಮಾನ್, ದುರ್ಗರಾಜು, ಸಿದ್ಧಲಿಂಗಯ್ಯ(ರೀಲೆ), ಎನ್.ಸುರೇಶ್(ಲಾಂಗ್ ಮತ್ತು ಹೈ ಜಂಪ್), ಎಚ್.ಮಂಜುನಾಥ್(ನಡಿಗೆ), ಎಚ್.ಎನ್.ವಿಜಯಕಾಂತ್ (ಹೈ ಜಂಪ್), ಎಲ್.ಲೋಹಿತ್(ಲಾಂಗ್ ಜಂಪ್), ಬಿ.ನಂದೀಶ್, ವೈ.ಎಸ್.ಹಷಿ೯ತ್, ಕೆ.ಎಲ್.ಸಂದೀಪ್, ಕೆ.ಆರ್.ಚರಣ್ ರಾಜ್, ಕೆ.ಬಿ.ಅನೂಫ್(ಶಟಲ್ ಕಾಕ್) ಆಯ್ಕೆಯಾಗಿದ್ದಾರೆ. ಹೆಣ್ಣು ಮಕ್ಕಳ ವಿಭಾಗದಲ್ಲಿ ಎಲ್.ಎಸ್.ತ್ರಿವೇಣಿ, ಎಲ್.ಎಸ್.ತುಂಗಾ, ಬಿ.ಆರ್.ದಿವ್ಯಶ್ರೀ, ಕೆ.ವಿ.ಅಶ್ವಿನಿ(ರೀಲೆ), ಟಿ.ಎಸ್.ಲಾವಣ್ಯ(ಶಾಟ್ ಫುಟ್-ವಾಲಿಬಾಲ್), ಪಿ.ಅನುಪಮ, ಆರ್.ತನುಜ, ಆರ್.ಲಾವಣ್ಯ, ಹೇಮಾ ಮಂಜುಶ್ರೀ,ಬಿ.ಎನ್.ಸುಮಾ, ಆರ್.ಎಂ.ಮಹಾಲಕ್ಷ್ಮಿ(ವಾಲಿಬಾಲ್), ಆರ್.ಪುಷ

ವಾಲಿಬಾಲ್ ನಲ್ಲಿ ಪ್ರಥಮ

ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮದ ಶ್ರೀವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾಥಿ೯ಗಳು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .

ಕೆ.ಸಿ.ಪಾಳ್ಯದಲ್ಲಿ ಮಳೆಗಾಳಿಗೆ ವಿದ್ಯುತ್ ಕಂಬಗಳು ಧರೆಗೆ

ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದಲ್ಲಿ ಭಾರಿ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳಿದರೆ ಆರೇಳು ಮನೆಗಳ ಹೆಂಚುಗಳು ಹಾರಿಹೋಗಿದ್ದಲ್ಲದೆ ಸುಮಾರು ತೆಂಗಿನ ಮರ ಸೇರಿದಂತೆ ಅನೇಕ ಬಗೆಯ ಮರಗಳು ನೆಲಕ್ಕುರುಳಿದೆ. ಶನಿವಾರ ಸಂಜೆ ಮಳೆ ಸಹಿತ ಭಾರಿ ಬಿರುಗಾಳಿ ಬೀಸಿದ್ದು ಸೋಮಜ್ಜನ ಪಾಳ್ಯದಿಂದ ಕೆ.ಸಿಪಾಳ್ಯಕ್ಕೆ ವಿದ್ಯುತ್ ಸಂಪರ್ಕ ಒದಗಿಸಿದ್ದ ಐದಾರು ವಿದ್ಯತ್ ಕಂಬಗಳು ಬಿದ್ದು ವೈರ್ ಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ದಿನಗಳಿಂದ ಅಲ್ಲಿನ ನಿವಾಸಿಗಳು ಕತ್ತಲಲ್ಲಿ ಕಾಲಕಳೆಯುವಂತಾಗಿದೆ.

ದೊಡ್ಡಬಿದರೆಯಲ್ಲಿ ನೂತನ ದೇವಾಲಯಗಳ ಪ್ರವೇಶಮಹೋತ್ಸವ

ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದಲ್ಲಿ ನೂತನವಾಗಿ ನಿಮಿ೯ಸಿರುವ ಶ್ರೀಕರಿಯಮ್ಮದೇವಿ ಮತ್ತು ಶ್ರೀಆಂಜನೇಯಸ್ವಾಮಿಯವರ ದೇವಾಲಯಗಳ ಪ್ರವೇಶಮಹೋತ್ಸವವು ಭಕ್ತಸ್ತೋಮದೊಂದಿಗೆ ವೈಭವದಿಂದ ನೆರವೇರಿತು. ಚಿಕ್ಕಬಿದರೆ ಶ್ರೀಕರಿಯಮ್ಮದೇವಿ, ಕಲ್ಲಹಳ್ಳಿ ಶ್ರೀರಾಮದೇವರು, ದೊಡ್ಡಬಿದರೆ ಶ್ರೀ ಪಾತಲಿಂಗೇಶ್ವರ, ಶ್ರೀಲಕ್ಕಮ್ಮ ದೇವರುಗಳ ಆಗಮನದಿಂದ ಆರಂಭವಾದ ಪ್ರವೇಶಮಹೋತ್ಸವದಲ್ಲಿ ಪುಣ್ಯಾಹ, ಪಂಚಗವ್ಯ, ನಾಂದಿ ಮೊದಲ್ಗೊಂಡು ವಾಸ್ತು ಶಾಂತಿ, ನವಗ್ರಹ ಹೋಮ, ರಾಕ್ಷೊಘ್ನ ಹೋಮ, ಗಂಗಾಪ್ರಜೆ, ಗಣಪತಿ ಹೋಮ, ಮಹಾಲಕ್ಷ್ಮಿ ಹೋಮ, ದುಗಾ೯ಹೋಮ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ,ಅನ್ನಸಂತರ್ಪಣೆಯೊಂದಿಗೆ ಕೊನೆಗೊಂಡಿತು.ಸತ್ಯನಾರಾಯಣ್,ಹೆಚ್.ಕೆ.ಗುಂಡಣ್ಣ ಹಾಗೂ ಗಣೇಶ್ ಅವರ ಪೌರೋಹಿತ್ಯ ವಹಿಸಿದ್ದರು. ದೇವಸ್ಥಾನ ಕಮಿಟಿಯ ಅಧ್ಯಕ್ಷ ಹೊಸಮನೆ ಸಣ್ಣನಿಂಗಯ್ಯ, ಖಜಾಂಜಿ ಸಿದ್ದಜ್ಜರನಿಂಗಜ್ಜ, ಡಿ.ಕೆ.ಮಂಜುನಾಥ್, ಅಯ್ಯಣ್ಣರಬಸವಣ್ಣ, ಮಹಾದೇವಪ್ಪ, ಗ್ರಾ.ಪಂ.ಸದಸ್ಯರುಗಳಾದ ಡಿ.ಜಿ.ಕುಮಾರ್, ಡಿ.ಪಿ.ಅರುಣ್ಕುಮಾರ್, ಭೈರಣ್ಣ, ಲಕ್ಷ್ಮಯ್ಯ ಸೇರಿದಂತೆ ಶ್ರೀ ಪಾತಲಿಂಗೇಶ್ವರ ಸ್ವಾಮಿ ಭಕ್ತಾಧಿಗಳು, ದೊಡ್ಡಬಿದರೆ, ಹಳೇಲಂಬಾಣಿ ತಾಂಡ್ಯ, ಹೊಸಲಂಬಾಣಿ ತಾಂಡ್ಯ, ಕೋಡಿಹಳ್ಳಿ, ದಾಸಣ್ಣನಹಟ್ಟಿ ಮತ್ತು ಆಜುಬಾಜಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹೊನ್ನಮ್ಮಳ ಹತ್ಯೆ ಪೈಶಾಚಿಕ ಕೃತ್ಯ:ಸಚಿವ ಸುರೇಶ್ ಕುಮಾರ್

ಹೊನ್ನಮ್ಮಳ ಹತ್ಯೆ ಪೈಶಾಚಿಕ ಕೃತ್ಯ:ಸಚಿವ ಸುರೇಶ್ ಕುಮಾರ್ @ ಪ್ರಕರಣದಲ್ಲಿ ಎಎಸ್ಐ ಭಾಗಿಯಾಗಿದಲ್ಲಿ ಕೆಲಸದಿಂದ ವಜಾ @ 18 ಆರೋಪಿಗಳ ಬಂಧನ -------------------------------------------------------- ಹುಳಿಯಾರು: ಕಡೆ ಕ್ಷಣದಲ್ಲಿ ಗುಟುಕು ನೀರಿಗಾಗಿ ಮೊರೆಯಿಡುತ್ತಿದ್ದ ಹೊನ್ನಮ್ಮಳನ್ನು ಚರಂಡಿ ರಸ್ತೆಯಲ್ಲಿ ಎಳೆದಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೈ ಜುಮ್ ಎನ್ನಿಸುವ ಪೈಶಾಚಿಕ ಕೃತ್ಯವಾಗಿದ್ದು ಇದನ್ನು ಆಡಳಿತ ಎಂದೂ ಸಹಿಸುವುದಿಲ್ಲ ಎಂದು ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು. ದಲಿತ ಬಿಜೆಪಿ ನಾಯಕಿ ಹೊನ್ನಮ್ಮಳ ಹತ್ಯೆ ಸಂಬಂಧ ಭಾನುವಾರ ಗೋಪಾಲಪುರಕ್ಕೆ ಭೇಟಿ ನೀಡಿ ಘಟನೆಯ ಪ್ರತ್ಯಕ್ಷ ಸಾಕ್ಷಿ ಮೀನಾಕ್ಷಮ್ಮ ಅವರಿಂದ ಘಟನಾ ಮಾಹಿತಿ ಪಡೆದು ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊನ್ನಮ್ಮಳ ಹತ್ಯೆಯನ್ನು ಜನತೆ, ಸಮಾಜ, ಹಾಗೂ ಆಡಳಿತ ಕ್ಷಮಿಸಲಾಗದ ಘೋರ ಕೃತ್ಯವಾಗಿದ್ದು ಆಕೆಯನ್ನು ಹತ್ಯೆಗೈದವರ ಮನದಲ್ಲಿ ಎಂತಹ ರಾಕ್ಷಸ ಪ್ರವೃತ್ತಿ ಮನೆಮಾಡಿತ್ತು ಎಂದು ಊಹಿಸಲು ಅಸಾಧ್ಯ ಎಂದರು. ಲಭ್ಯ ಮಾಹಿತಿಯಂತೆ ಅಮಾನುಷವಾಗಿ ಹತ್ಯೆಯಾದ ಹೊನ್ನಮ್ಮಳ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹಂದನಕೆರೆ ಎಎಸ್ಐಗಳು ಪ್ರಚೋದನೆ ನೀಡಿ ಅಪರಾಧದಲ್ಲಿ ಭಾಗಿಯಾಗಿರುವ ವರ್ತನೆಯಿದ್ದು ತನಿಖೆಯಲ್ಲಿ ಇವರು ಭಾಗಿಯಾಗಿರುವುದು ಸಾಬೀತಾದಲ್ಲಿ ಈಗಾಗ

ಸಾಲ ಸೌಲಭ್ಯ ಚುನಾವಣೆಗೆ ಸ್ಪಧಿ೯ಸಲು ಅಲ್ಲ: ಕೆ.ಎನ್.ರಾಜಣ್ಣ

ಸಹಕಾರ ಸಂಘದಿಂದ ಸಾಲ ನೀಡಿ ಆಥಿ೯ಕ ಸಹಕಾರ ಒದಗಿಸಿ ಕೈಕಸುಬುಗಳಿಗೆ ಉತ್ತೇಜನ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಹಾಗಾಗಿ ಸಹಕಾರ ಸಂಘದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿರುವ ಗ್ರಾಮಗಳಲ್ಲಿ ಸಾಲ ಸೌಲಭ್ಯ ನೀಡಲು ಒತ್ತು ನೀಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಿಳಿಸಿದರು. ಹುಳಿಯಾರು ಹೋಬಳಿ ದಸೂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಏರ್ಪಡಿಸಿದ್ದ ವಿವಿಧ ಯೋಜನೆಯ ಸಾಲ ಸೌಲಭ್ಯ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿನಾಹಳ್ಳಿಯಿಂದ ಸ್ಪಧೆ೯ಇಲ್ಲ:ಮುಂದಿನ ವಿಧಾನಸಭಾ ಚುನಾವಣೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪಧಿ೯ಸುತ್ತಾರೆ. ಇದಕ್ಕಾಗಿ ತಾಲೂಕಿನ ಹಳ್ಳಿ ಹಳ್ಳಿ ಸುತ್ತಿ ಸಾಲ ಸೌಲಭ್ಯ ನೀಡುತ್ತಿದ್ದಾರೆ ಎಂಬ ಮಾತು ವಿರೋಧಿ ಗುಂಪು ಹುಟ್ಟು ಹಾಕುತ್ತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ತಾವು ಯಾವುದೇ ಕಾರಣಕ್ಕೂ ಮಧುಗಿರಿ ಬಿಟ್ಟು ಬೇರೆಲ್ಲೂ ಸ್ಪಧಿ೯ಸುವುದಿಲ್ಲ. ಈ ಬಗ್ಗೆ ಅನಗತ್ಯ ಅನುಮಾನ ಬೇಡ ಎಂದು ರಾಜಣ್ಣ ಅವರು ಸ್ಫಷ್ಠಪಡಿಸಿದರು. ದಸೂಡಿ ಗ್ರಾಮ ಜಿಲ್ಲೆಯ ಗಡಿ ಗ್ರಾಮವಲ್ಲದೆ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು ಆಥಿ೯ಕ ಅಸಮತೋಲನದಿಂದ ಇಲ್ಲಿನ ಜನ ಕಷ್ಟ-ಕಾರ್ಪಣ್ಯದಿಂದ ಮೇಲೆ ಬರಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಸಂಘದಿಂದ ಸಾಲ ನೀಡಿ ಆಥಿ೯ಕ ಸಹಕಾರ ನೀಡಿ ಕೈಕಸುಬುಗಳಿಗೆ ಉತ್ತೇಜನ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಬರುವ

ಕೊಲೆ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ : ಮಾಜಿ ಶಾಸಕ ಕೆ.ಎಸ್.ಕೆ.

ಕೊಲೆ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ : ಮಾಜಿ ಶಾಸಕ ಕೆ.ಎಸ್.ಕೆ. -------------------- ---------------------------------------- ಹೊನ್ನಮ್ಮಳ ಹತ್ಯೆಯ ಹಿಂದೆ ರಾಜಕೀಯ ಷಡ್ಯಂತ್ರವಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ಜೆಡಿಎಸ್ ಮುಖಂಡರ ಕೈವಾಡವಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಗಂಭೀರ ಆರೋಪ ಮಾಡಿದರು. ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಕಳೆದ ರಾತ್ರಿ ಬಿಜೆಪಿ ಮುಖಂಡೆ ಹೊನ್ನಮ್ಮಳ ಹತ್ಯೆ ಖಂಡಿಸಿಸುವ ಸಲುವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜಕೀಯವಾಗಿ ಹೊನ್ನಮ್ಮ ಅವರನ್ನು ಮುಗಿಸಲು ಕಳ್ಳತನದ ಹಾಗೂ ಸುಳ್ಳು ಕೇಸು ದಾಕಲಿಸುವ ಮೂಲಕ ಆಕೆಯನ್ನು ಈ ಹಿಂದೆಯೇ ಮಾನಸಿಕವಾಗಿ ಕೊಂದಿದ್ದರು. ತನನ್ನು ಹತ್ಯೆ ಮಾಡಬಹುದೆಂದು ಅನುಮಾನ ಹೊಂದಿದ್ದ ಆಕೆ ಸಿಎಂ, ರಾಜ್ಯಪಾಲ, ಐಜಿಯವರಿಗೂ ಪ್ರಾಣರಕ್ಷಣೆಗೆ ಮನವಿ ಮಾಡಿದ್ದು ಹಂದನಕೆರೆ ಪೊಲೀಸ್ ವೈಪಲ್ಯದಿಂದಾಗಿ ಹತ್ಯೆಗೆ ಒಳಗಾದಳು ಎಂದು ವಿಶ್ಲೇಷಿಸಿದ್ದಾರೆ. ಹಂದನಕೆರೆ ಪೊಲೀಸರ ಮೇಲೆ ಜೆಡಿಎಸ್ ಮುಖಂಡರ ಪ್ರಭಾವದಿಂದಲೇ ಆಕೆ ದೂರು ನೀಡಿದರೂ ಸೂಕ್ತ ರಕ್ಷಣೆ ನೀಡದಿದ್ದೇ ಘಟನೆಗೆ ಕಾರಣವಾಗಿದೆ. ಅಲ್ಲಿನ ಎಎಸ್ಐಗಳಾದ ಕೃಷ್ಣನಾಯ್ಕ ಹಾಗೂ ಗಂಗಾಧರ್ ಅವರುಗಳೇ ಪರೋಕ್ಷವಾಗಿ ಕಾರಣರಾಗಿದ್ದು ಅವರುಗಳನ್ನೇ ಆರೋಪಿಗಳಾಗಿ ದಾಖಲು ಮಾಡುವಂತೆ ಒತ್ತಾಯಿಸಿದರು. ಒಂಟಿ ಹೆಣ್ಣಿನ ಮೇಲೆ ಬರೋಬ್ಬರಿ ಇಪ್ಪತ್ತು ಮಂದಿ ಹಾರಿಬಿದ್ದು ಕಪ

ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ

(ಹತ್ಯೆಯಾದ ಹೊನ್ನಮ್ಮಳ ಮೃತ ದೇಹವನ್ನು ತಹಸೀಲ್ದಾರ್ ಕಾಂತರಾಜು ವೀಕ್ಷಿಸುತ್ತಿರುವುದು) (ಮನೆಗಳಿಗೆ ಬೀಗ ಜಡಿದು ಪರಾರಿಯಾಗಿರುವ ಗೋಪಾಲಪುರ ಗ್ರಾಮಸ್ಥರು) ( ಘಟನಾ ಸ್ಥಳಕ್ಕೆ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಹಾಗೂ ತಹಸೀಲ್ದಾರ್ ಕಾಂತರಾಜು ಭೇಟಿ ನೀಡಿರುವುದು) ( ಹೊನ್ನಮ್ಮಳ ಹತ್ಯೆಯನ್ನು ಖಂಡಿಸಿ ಹುಳಿಯಾರಿನಲ್ಲಿ ದಲಿತ ಸಂಘಟನೆಗಳು ರಸ್ತೆ ತಡೆ ನಡೆಸಿರುವುದು) ( ಹುಳಿಯಾರು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿರುವುದು) ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ ----------------------------------------- @ ಗ್ರಾಮದ ಪ್ರತಿ ಮನೆಗೂ ಬೀಗ @ ದಲಿತ ಸಂಘಟನೆಗಳಿಂದ ರಸ್ತೆ ತಡೆ @ ಇಬ್ಬರು ಎಎಸ್ಐ ಸಸ್ಪೆಂಡ್ @ ಗ್ರಾ.ಪಂ.ಅಧ್ಯಕ್ಷೆ ಸೇರಿ 10 ಮಂದಿ ಬಂಧನ @ ಬಿಜೆಪಿ ಮುಖಂಡರಿಂದ ಪ್ರತಿಭಟನೆಗೆ ಬೆಂಬಲ ----------------------------------------------------------------------------------------------- ಗ್ರಾಮಸ್ಥರು ಹಾಗೂ ಅದೇ ಊರಿನ ಮಹಿಳೆಯೊಬ್ಬರ ನಡುವಿನ ವಿವಾದ ಭುಗಿಲೆದ್ದು ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಇಪ್ಪತ್ತೈದು ಮೂವತ್ತು ಜನರ ಗುಂಪೊಂದು ಮಹಿಳೆಯೋರ್ವಳನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಹುಳಿಯಾರು ಸಮೀಪದ ಗೋಪಾಲಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ. ಹತ್ಯೆಯಾದ ನತದೃಷ್ಠೆಯನ್ನು ಡಾಬಾ ಹೊನ್ನಮ್ಮ ಎಂದು ಗುರುತಿಸಲಾಗಿದ್ದು ಈಕೆ ಬಿಜೆಪಿ ದಲಿತ ಮೋರ್ಚ ಉಪಾಧ್ಯಕ್ಷೆಯಾ