ಹುಳಿಯಾರು ಸಮೀಪದ ಕಂದಿಕೆರೆ ಹೋಬಳಿಯ ರಾಮಪ್ಪನಹಟ್ಟಿಯಲ್ಲಿ ಶ್ರೀ ಕುಮಾರಸ್ವಾಮಿಯವರ ದೇವಾಲಯದ ನೂತನ ರಾಜಗೋಪುರ ಕಳಸ ಪ್ರತಿಷ್ಟಾಪನ ಮಹೋತ್ಸವವು ಇಂದು ಮೇ 7ರ ಶನಿವಾರದಂದು ಸಾಯಂಕಾಲ ಧ್ವಜಾರೋಹಣದ ಮೂಲಕ ಚಾಲನೆಗೊಳ್ಳಲಿದ್ದು ಮೇ.9ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಮೇ.8ರ ಭಾನುವಾರ ರಾತ್ರಿ ೮ಕ್ಕೆ ಸ್ವಾಮಿಯವರ ಹೊಳಸೇವೆ ನಡೆದು ರಾತ್ರಿ 12ರಿಂದ ಅಜ್ಜಪ್ಪಸ್ವಾಮಿ, ಜಡೇಗೊಂಡದೇವರು, ಬಾಲಕೃಷ್ಣಸ್ವಾಮಿ, ಮಾಳಮ್ಮದೇವಿ, ದೊಡ್ಡಬಾಲದೇವರಹಟ್ಟಿ, ಹೊನ್ನೆಮರೆದ ಈರಣ್ಣಸ್ವಾಮಿ, ತಿರುಮಲದೇವರು, ಕರಿಯಮ್ಮದೇವಿ, ಈರಬೊಮ್ಮನಕ್ಕದೇವಿಯವರ ಉತ್ಸವ ನಡೆಯಲಿದೆ. ಮೇ.9ರಂದು ಸೋಮವಾರ ಬೆಳಗ್ಗೆ ಅಜ್ಜಪ್ಪಸ್ವಾಮಿಯವರ ನೂತನ ರಾಜಗೋಪುರದ ಕಳಸ ಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು ಯಾದವ ಸಂಸ್ಥಾನದ ಕೃಷ್ಣಯಾದವಾನಂದಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ದಿವ್ಯಸಾನಿಧ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿರುವರು.