ಹುಳಿಯಾರು :ಸಮೀಪದ ವಳಗೆರೆಹಳ್ಳಿಯ ಶ್ರೀ ಶನೇಶ್ವರ ಸ್ವಾಮಿಯವರ 20 ನೇ ವರ್ಷದ ಕುಂಭಾಭಿಷೇಕ ಮಹೋತ್ಸವವು ಮೇ.13 ನೇ ಶುಕ್ರವಾರ ಹಾಗೂ ಮೇ.14 ನೇ ಶನಿವಾರದಂದು ನಡೆಯಲಿದೆ.
13 ರ ಶುಕ್ರವಾರ ಸಂಜೆ 6 ಕ್ಕೆ ಶನೇಶ್ವರ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ಕಾಕವಾಹನ ಪ್ರತಿಷ್ಠಾಪನೆ. ಸಂಜೆ 7 ಕ್ಕೆ ಪಂಚಕಳಶ ಸ್ಥಾಪನೆ ಮತ್ತು ನವಗ್ರಹಗಳ ಸ್ಥಾಪನೆ ಮತ್ತು ಸ್ಥಾನ ಶುದ್ದಿ ಮತ್ತಿತರ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.
14 ರ ಶನಿವಾರ ಬೆಳಿಗ್ಗೆ 7.45 ಕ್ಕೆ ಪುಣ್ಯಾಹ, ದೇವನಾಂದಿ, ನವಗ್ರಹ ಹೋಮ,ಶನೈಶ್ವರ ಹೋಮ,ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆ. 12.45 ಕ್ಕೆ ಶನೇಶ್ವರ ಸ್ವಾಮಿಗೆ ಕುಂಭಾಭಿಷೇಕ ನಡೆದು ಮಧ್ಯಾಹ್ನ 1.30 ಕ್ಕೆ ಅನ್ನಸಂತರ್ಪಣೆ. ರಾತ್ರಿ 10 ಕ್ಕೆ ಊರಿನ ಗ್ರಾಮಸ್ಥರಿಂದ ಶನಿಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಣಿಕ ನಾಟಕ ನಡೆಯಲಿದೆ.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಮುದ್ದಹನುಮೇಗೌಡ, ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಹುಳಿಯಾರು ಜಿ.ಪಂ. ಸದಸ್ಯರಾದ ವೈ.ಸಿ.ಸಿದ್ದರಾಮಯ್ಯ, ತಾ.ಪಂ ಸದಸ್ಯರಾದ ಹೆಚ್.ಎನ್.ಕುಮಾರ್, ಹುಳಿಯಾರು ಗ್ರಾ.ಪಂ. ಅಧ್ಯಕ್ಷರಾದ ಗೀತಾ ಪ್ರದೀಪ್, ಉಪಾಧ್ಯಕ್ಷ ಗಣೇಶ್ ಸೇರಿದಂತೆ ಹುಳಿಯಾರು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ