ಹುಳಿಯಾರು ಸಮೀಪದ ಕೆಂಕೆರೆಯಲ್ಲಿ ಇಂದಿನಿಂದ (ಮೇ.7 ರ ಶನಿವಾರದಿಂದ) ಮೇ.9.ರ ಸೋಮವಾರದವರೆಗೆ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ನಡೆಯಲಿದೆ.
ಇಂದು ಬೆಳಿಗ್ಗೆ ಮೂಲಸ್ಥಾನ ಪುರದ ಮಠಕ್ಕೆ ಶ್ರೀ ಚನ್ನಬಸವೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕಾಳಮ್ಮನವರ ಆಗಮನ,ಗಂಗಾಪೂಜೆ,ಪುಣ್ಯಹ,ನಾಂದಿ ಕಳಸ ಸ್ಥಾಪನೆ ಹಾಗೂ ಸ್ವಾಮಿಯವರಿಗೆ ರುದ್ರಾಭಿಷೇಕ ನಡೆಯಲಿದೆ.
![]() |
ಕೆಂಕೆರೆಯ ಶ್ರೀ ಚನ್ನಬಸವೇಶ್ವರ ಸ್ವಾಮಿ |
ಬೆ.9 ಗಂಟೆಗೆ ತಿಪಟೂರು ಕೆರೆಗೊಡಿ ರಂಗಾಪುರದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮಿಜಿಯವರಿಂದ ಸ್ವಾಮಿಯವರಿಗೆ ಬೆಳ್ಳಿಕವಚ ಧಾರಣೆ.
10.30ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆದು ವಾಪಸ್ಸು ಕೆಂಕೆರೆಗೆ ದೇವರುಗಳು ದಯಮಾಡಿಸುವುದು. ಮ.3 ಕ್ಕೆ ಸ್ವಾಮಿಯ ಮೂಲ ಸ್ಥಾನ ಪುರದಮಠಕ್ಕೆ ದಯಮಾಡಿಸುವುದು.
ಮೇ.8 ರ ಭಾನುವಾರ ಬೆ.5 ಗಂಟೆಗೆ ಗಂಗಾಪ್ರವೇಶ ನಂತರ ಪ್ರಸಾದ ವಿನಿಯೋಗ.
ಮೇ.9 ರ ಸೋಮವಾರ ಮ.12ಕ್ಕೆ ಶ್ರೀಚನ್ನಬಸವೇಶ್ವರ ಸ್ವಾಮಿಯವರ ಮಹಾರಥೋತ್ಸವ ಜರುಗಲಿದೆ.
ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ