![]() |
ಹುಳಿಯಾರು ಸಮೀಪದ ಬರಗೀಹಳ್ಳಿ ಬೆಟ್ಟದಲ್ಲಿ ನರಸಿಂಹ ಜಯಂತಿ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಣ್ಣ ಅವರನ್ನು ಸಮಿತಿಯಿಂದ ಅಭಿನಂದಿಸಲಾಯಿತು. |
ಜಯಂತಿ ಅಂಗವಾಗಿ ಸ್ವಾಮಿಗೆ ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ ನಡೆದವಲ್ಲದೆ ನಂತರ ವಸಂತ ಸೇವೆ ಹಾಗೂ ಪಾನಕ ಪನಿವಾರದ ಪ್ರಸಾದ ವಿತರಿಸಲಾಯಿತು.ಸುಮಂಗಲಿಯರಿಂದ ನರಸಿಂಹದೇವರ ಸ್ತೋತ್ರ ಪಠಿಸಲಾಯಿತು.ಮಹಾ ನೈವೇದ್ಯದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಶ್ರೀಲಕ್ಷ್ಮಿನರಸಿಂಹಸ್ವಾಮಿ ಸೇವಾ ಟ್ರಸ್ಟ್ ನ ಅತಿ ಹಿರಿಯ ಸದಸ್ಯ ೧೦೪ ವರ್ಷದ ವಿಶ್ವನಾಥ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಶ್ರೀಲಕ್ಷ್ಮಿನರಸಿಂಹಸ್ವಾಮಿ ಸೇವಾ ಟ್ರಸ್ಟ್ ನ ರಂಗನಾಥರಾವ್, ಅರ್ಚಕ ಭಾಸ್ಕರ್ ,ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಣ್ಣ,ಕಾಂಗ್ರೆಸ್ ಮುಖಂಡ ಅಶೋಕ್,ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎ.ಲೋಕೇಶ್,ದುರ್ಗಾಪರಮೇಶ್ವರಿ ದೇವಾಲಯದ ಕನ್ವೀನರ್ ಹು.ಕೃ.ವಿಶ್ವನಾಥ್ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಯ ಗ್ರಾಮಸ್ಥರು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ