ಹುಳಿಯಾರು : ರಾಜ್ಯದಾದ್ಯಂತ ಬರಗಾಲದ ಛಾಯೆ ಆವರಿಸಿದ್ದು ಹನಿ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ ಆದರೆ ಪಟ್ಟಣದ ಹಲವೆಡೆ ಕೆಲವು ತಿಂಗಳುಗಳಿಂದ ನೀರು ವ್ಯರ್ಥವಾಗಿ ರಸ್ತೆಯಲ್ಲಿ ಹರಿಯುತ್ತಿದ್ದು ಜನರ ಬಳಕೆಗೆ ಬಾರದಂತಾಗಿರುವುದು ಪಂಚಾಯ್ತಿಯವರ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
![]() |
ಹುಳಿಯಾರು ಪಟ್ಟಣದ ಮಲ್ಲಿಕಾರ್ಜುನ ಮೆಡಿಕಲ್ಸ್ ಪಕ್ಕದ ಬಾಲ್ ವಾಲ್ ನಲ್ಲಿ ನೀರು ವ್ಯರ್ಥವಾಗಿ ಹರಿದು ರಸ್ತೆ ಸೇರುತ್ತಿರುವುದು. |
ಪಟ್ಟಣದ ಮೂರನೇ ಬ್ಲಾಕ್ ನ ಮಲ್ಲಿಕಾರ್ಜುನ ಮೆಡಿಕಲ್ ಪಕ್ಕದಲ್ಲಿ ಕಳೆದ ಐದಾರು ತಿಂಗಳಿಂದ ನೀರು ಹರಿಯುತ್ತಿದ್ದರೆ, ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಿರುವ ಪೈಪ್ ಒಡೆದಿದ್ದು ನೀರು ಪೋಲಾಗಿ ಕೆರೆ ಅಂಗಳಕ್ಕೆ ಹರಿಯುತ್ತಿದೆ. ಈ ಬಗ್ಗೆ ಹಲವಾರು ಪಂಚಾಯ್ತಿಯವರ ಗಮಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಹುಳಿಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀರು ಪೂರೈಸುವ ಹಿನ್ನಲೆಯಲ್ಲಿ ಪಕ್ಕದ ಬೋರನಕಣಿವೆ ಜಲಾಶಯದಿಂದ ಹಾಗೂ ಬೋರ್ ವೆಲ್ ಗಳಿಂದ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಈ ಬಾರಿ ಸಮರ್ಪಕವಾಗಿ ಮಳೆಯಾದ ಹಿನ್ನಲೆಯಲ್ಲಿ ಅಂತರ್ಜಲ ಕುಸಿತಕಂಡಿದ್ದು ಜಲಾಶಯ ಹಾಗೂ ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟ ಕುಸಿದು ಇನ್ನೂ ಕೆಲವೇ ತಿಂಗಳಿಗೆ ಆಗುವಷ್ಟು ನೀರು ಮಾತ್ರ ಉಳಿದಿದೆ. ಹೀಗಿದ್ದಾಗ್ಯೂ ಸಹ ಸದ್ಯ ದೊರೆಯುತ್ತಿದುವ ನೀರನ್ನು ಸಮರ್ಪವಾಗಿ ಬಳಕೆ ಮಾಡುವಲ್ಲಿ ಗ್ರಾ.ಪಂ.ನವರು ವಿಫಲಾಗಿದ್ದಾರೆ. ಪಟ್ಟಣದಲ್ಲಿ ಜನ ಕುಡಿಯುವ ಹಾಗೂ ನಿತ್ಯದ ಬಳಕೆ ನೀರಿಗಾಗಿ ಪರಿತಪಿಸುತ್ತಿದ್ದರೂ ಸಹ ಈರೀತಿ ಎಲ್ಲೆಂದರಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿರುವುದು ಜನರಲ್ಲಿ ಅಕ್ರೋಶ ಮೂಡುವಂತೆ ಮಾಡಿದೆ.
ಮಲ್ಲಿಕಾರ್ಜುನ ಮೆಡಿಕಲ್ ಪಕ್ಕದಲ್ಲಿನ ಬಾಲ್ ವಾಲ್ ನಲ್ಲಿ ನಿತ್ಯವೂ ಸುಮ್ಮನೆ ನೀರ್ ಲೀಕ್ ಆಗುತ್ತಿದ್ದು ರಾಜ್ ಕುಮಾರ್ ರಸ್ತೆ ಹಾಗೂ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಹರಿಯುತ್ತಿದೆ. ಜನ , ವಾಹನಗಳು ಈ ನೀರ ಮೇಲೆಯೇ ಸಂಚರಿಸುವಂತಾಗಿದೆ. ಈ ರಸ್ತೆಯಲ್ಲಿ ನಿತ್ಯ ಪಂಚಾಯ್ತಿ ಸದಸ್ಯರು ಓಡಾಡುತ್ತಿದ್ದರೂ ಸಹ ಕಂಡು ಕಾಣದಂತಿದ್ದಾರೆ. ಇನ್ನಾದರೂ ಪಂಚಾಯ್ತಿಯವರು ಎಚ್ಚೆತ್ತು ನೀರು ವ್ಯರ್ಥವಾಗುವುದನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟೆರೆ ಒಳಿತಾಗುತ್ತದೆ ಎನ್ನುತ್ತಾರೆ ನಿವಾಸಿ ಪ್ರವೀಣ್ ಕುಮಾರ್ .
---------
ಹುಳಿಯಾರು ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಸಂಪರ್ಕ ಕಲ್ಪಿಸಿರುವ ನೀರಿನ ಪೈಪ್ ಒಡೆದು ನೀರು ವ್ಯರ್ಥವಾಗಿ ಕೆರೆಗೆ ಸೇರುತ್ತಿದ್ದು , ಖುದ್ದಾಗಿ ನಾನೇ ಹಲವಾರು ಬಾರಿ ಪಿಡಿಓ ಗಮನಕ್ಕೆ ತಂದಿದ್ದರೂ ಸರಿಪಡಿಸಿಲ್ಲ, ನಾವೇ ಕಾಮಗಾರಿ ಮಾಡಿಸಿ ಸರಿಪಡಿಸಿಸಲು ಮುಂದಾದರೆ ವೆಚ್ಚವಾದ ಹಣವನ್ನೂ ಪಾವತಿ ಮಾಡುವುದಿಲ್ಲ : ಕೋಳಿಶ್ರೀನಿವಾಸ್- ಗ್ರಾ.ಪಂ.ಸದಸ್ಯ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ