
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮಪ್ಪನಹಟ್ಟಿಯ ಶ್ರೀ ಕುಮಾರಸ್ವಾಮಿಯವರ ದೇವಾಲಯದ ನೂತನ ರಾಜಗೋಪುರ ಕಳಸ ಪ್ರತಿಷ್ಟಾಪನ ಮಹೋತ್ಸವವು ಮೇ 7ರಿಂದ 9ರವರೆಗೆ ನಡೆಯಲಿದೆ.
ಮೇ 7ರ ಶನಿವಾರ ಸಾಯಂಕಾಲ ಧ್ವಜಾರೋಹಣದ ಮೂಲಕ ಚಾಲನೆಗೊಳ್ಳಲಿದೆ.
ಮೇ.8ರ ಭಾನುವಾರ ಸ್ವಾಮಿಯವರ ಹೊಳಸೇವೆ ಸಾಯಂಕಾಲ 8ಕ್ಕೆ ಅಜ್ಜಪ್ಪಸ್ವಾಮಿ, ಜಡೇಗೊಂಡದೇವರು, ಬಾಲಕೃಷ್ಣಸ್ವಾಮಿ, ಮಾಳಮ್ಮದೇವಿ, ದೊಡ್ಡಬಾಲದೇವರ ಹಟ್ಟಿ, ಹೊನ್ನೆಮರೆದ ಈರಣ್ಣಸ್ವಾಮಿ, ತಿರುಮಲದೇವರು, ಕರಿಯಮ್ಮದೇವಿ, ಈರಬೊಮ್ಮನಕ್ಕ ದೇವಿ, ಯವರ ಉತ್ಸವ ರಾತ್ರಿ 12ರಿಂದ 2ರವರೆಗೆ ನಡೆಯಲಿದೆ.

ಮೇ.9ರಂದು ಸೋಮವಾರ ಬೆಳಗ್ಗೆ ಅಜ್ಜಪ್ಪಸ್ವಾಮಿಯವರ ನೂತನ ರಾಜಗೋಪುರದ ಕಳಸ ಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.
ಅಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು ಯಾದವ ಸಂಸ್ಥಾನದ ಕೃಷ್ಣಯಾದವಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್‍ಕುಮಾರ್ ಮತ್ತಿತರರು ಉಪಸ್ಥಿತರಿರುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ