ಹುಳಿಯಾರು: ಸಮೀಪದ ದೊಡ್ಡಬಿದರೆಯಲ್ಲಿ ಸೋಮವಾರದಂದು ಹುಚ್ಚುನಾಯಿ ಕಡಿತಕ್ಕೆ ಇಬ್ಬರು ವ್ಯಕ್ತಿಗಳು ಹಾಗೂ ೬ ಕರುಗಳು ಗಾಯಗೊಂಡಿರುವ ಘಟನೆ ಜರುಗಿದೆ.ಕೆರೆಯ ಬಳಿ ಬಹಿರ್ದೆಸೆಗೆ ಹೋಗಿದ್ದ ಪುಟ್ಟಣನವರ ರಾಜಪ್ಪನವರ ಮೇಲೆ ಎರಗಿ ಗಾಯಗೊಳಿಸಿದ ನಾಯಿ ನಂತರ ಮನೆಯ ಮುಂದೆ ಮಲಗಿದ್ದ ೭೦ ವರ್ಷದ ವೃದ್ಧ ಮಾಣಕಿ ಚಿಗನಿಂಗಪ್ಪ ಎಂಬುವವರ ಕಾಲನ್ನು ಬಲವಾಗಿ ಕಚ್ಚಿದೆ.ತೀವ್ರ ರಕ್ರ ಸ್ರಾವವಾಗಿ ನಿತ್ರಾಣರಾಗಿದ್ದ ಚಿಗನಿಂಗಪ್ಪ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕನಾಯಕನಹಳ್ಳಿಗೆ ಕರೆದೊಯ್ಯಲಾಯಿತು..
ಈ ಮಧ್ಯೆ ಮನೆಯ ಆಚೆ ಕಟ್ಟಲಾಗಿದ್ದ ಹಸು ಹಾಗೂ ಎಮ್ಮೆಕರುಗಳನ್ನು ಕಡಿದ ನಾಯಿ ಸಂಜೆಯವರೆಗೂ ಊರತುಂಬಾ ಓಡಾಡಿ ಗ್ರಾಮದಲ್ಲಿ ಭಯದ ವಾತಾವರಣ ಉಂಟುಮಾಡಿತು.ಆಕ್ರೋಷಗೊಂಡ ಜನತೆ ಸಂಜೆ ನಾಯಿಯನ್ನು ದೊಣ್ಣೆಯಿಂದ ಬಡಿದು ಸಾಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ