![]() |
ಹುಳಿಯಾರಿನ ಪ್ರಮೋದ್ ಪಾಲ್ |
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾದ ಈತ ಭೌತಶಾಸ್ತ್ರ ,ರಸಾಯನಶಾಸ್ತ್ರ ,ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದು ಇದು ಕಾಲೇಜಿನ ಇತಿಹಾಸದಲ್ಲೆ ಪ್ರಥಮವಾಗಿದೆ.
ಕನ್ನಡ ದಲ್ಲಿ ೯೫ ಅಂಕ ಹಾಗೂ ಇಂಗ್ಲೀಷ್ ನಲ್ಲಿ ೭೧ ಅಂಕ ಗಳಿಸಿದ್ದು ಒಟ್ಟಾರೆ 566/600 ಅಂಕಗಳಿಸಿದ್ದು ಶೇ94.33 ಗಳಿಸಿರುತ್ತಾನೆ.
ಈತ ಹುಳಿಯಾರು ಸಮೀಪದ ಯಳನಾಡು ಗ್ರಾಮಪಂಚಾಯ್ತಿ ವ್ಯಾಪ್ಯಿಯ ಸಿಂಗಾಪುರ ಗ್ರಾಮದವನಾಗಿದ್ದು ಪೋಷಕರಾದ ದೇವರಾಜು ಹಾಗೂ ಪೇಮಲೀಲಾ ಕೃಷಿಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.ತನ್ನ ಹಳ್ಳಿಯಿಂದ ಸೈಕಲ್ ಮೂಲಕ ಮೂರು ಕಿಮೀ ದೂರದ ಯಳನಾಡುವಿಗೆ ಬಂದು ಅಲ್ಲಿಂದ ಸರ್ಕಾರಿ ಬಸ್ ನಲ್ಲಿ ಹುಳಿಯಾರಿಗೆ ಬರುತ್ತಿದ್ದ ಈತ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೆಸರಾಗಿದ್ದ.ಪ್ರಾಥಮಿಕ ಶಿಕ್ಷಣವನ್ನು ಸಿಂಗಾಪುರ ಗ್ರಾಮದಲ್ಲಿ ,ಪ್ರೌಢಶಿಕ್ಷಣವನ್ನು ಹುಳಿಯಾರಿನ ವಾಸವಿ ಶಾಲೆಯಲ್ಲಿ ಪೂರೈಸಿದ್ದ ಈತ ಹಳ್ಳಿಗಾಡಿನಿಂದ ದೂರದ ಹುಳಿಯಾರಿನ ಸರ್ಕಾರಿ ಕಾಲೇಜಿಗೆ ಓಡಾಡಿಕೊಂಡು ಯಾವುದೇ ಮನೆಪಾಠದ ಸಹಾಯವಿಲ್ಲದೆ ಈ ಮಟ್ಟದ ಅಂಕಗಳಿಸಿರುದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮುಂದೆ ಮೆಡಿಕಲ್ ಓದಿ ಐಎ ಎಸ್ ಮಾಡುವ ಮೂಲಕ ಆಡಳಿತ ಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳುವ ಈತ ತನ್ನ ಸಾಧನೆಗೆ ದೊಡ್ಡಪ್ಪ ರಮೇಶ್,ಹಾಗೂ ಕಾಲೇಜಿನ ಪ್ರತಿಯೊಬ್ಬರು ಶಿಕ್ಷಕರು ಕಾರಣವೆಂದು ಸ್ಮರಿಸುತ್ತಾನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ