ಹುಳಿಯಾರು : ಸಮೀಪದ ವಳಗೆರೆಹಳ್ಳಿಯಲ್ಲಿ ಶ್ರೀ ಶನೇಶ್ವರ ಸ್ವಾಮಿಯವರ ೨೦ ನೇ ವರ್ಷದ ಕುಂಭಾಭಿಷೇಕ ಶನಿವಾರದಂದು ಶ್ರದ್ಧಾಭಕ್ತಿಯಿಂದ ನೆರವೇರಿತು.
ಶುಕ್ರವಾರ ಸಂಜೆಯಿದಲೇ ನೆರವೇರಿದ ಧಾರ್ಮಿಕ ಕಾರ್ಯದಲ್ಲಿ ದೇವಾಲಯದ ಮುಂಭಾಗ ಕಾಕವಾಹನ ಪ್ರತಿಷ್ಠಾಪನೆ ,ಪಂಚಕಳಸ ಸ್ಥಾಪನೆ,ನವಗ್ರಹ ಸ್ಥಾಪನೆ ಮಾಡಲಾಯಿತು.
ಶನಿವಾರ ಮುಂಜಾನೆ ಹೆಚ್.ಎಸ್.ಲಕ್ಷ್ಮೀನರಸಿಂಹಯ್ಯನವರ ನೇತೃತ್ವದಲ್ಲಿ ಪುಣ್ಯಾಹ, ದೇವನಾಂದಿ, ನವಗ್ರಹ ಹೋಮ,ಶನೈಶ್ವರ ಹೋಮ,ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆ ನೆರವೇರಿತು.ಪೂರ್ಣಾಹುತಿ ಅರ್ಪಿಸಿ ಮಹಾಮಂಗಳಾರತಿ ಮಾಡಿದ ನಂತರ ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ಮಂಗಳವಾದ್ಯದ ಹಿಮ್ಮೇಳದಲ್ಲಿ ಶ್ರೀ ಶನೇಶ್ವರಸ್ವಾಮಿಗೆ ಹಾಗೂ ಕಳಸಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು.
ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ಕುಂಭಾಭಿಷೇಕವನ್ನು ಕಣ್ತುಂಬಿಕೊಂಡರು.ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ಶನಿಪ್ರಭಾವ ಪೌರಣಿಕ ನಾಟಕ ನಡೆಯಿತು.
ಈ ವೇಳೆ ಕುಲದ ಯಜಮಾನ ಲಕ್ಷ್ಮಣರಾವ್, ದೇವಾಲಯ ಸಮಿತಿಯ ಅಧ್ಯಕ್ಷ ಹನುಮಂತರಾವ್, ಪಾಂಡೋಜಿರಾವ್,ಪರಶುರಾಮ್,ಗಂಗಾಧರ್,ಗ್ರಾಪಂ ಸದಸ್ಯರುಗಳಾದ ಚಂದ್ರಶೇಖರ್ ರಾವ್,ಶಿವಾಜಿ ರಾವ್ ,ಸುಭದ್ರಭಾಯಿ ಭಾಪುರಾವ್ ಮತ್ತಿತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ