ಆರೋಪದಲ್ಲಿ ಯಾವುದೇ ಹುರುಳಿಲ್ಲ :ಅಧ್ಯಕ್ಷ ದೇವರಾಜು
----------------------
ಹುಳಿಯಾರು: ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ತಿರುಮಲಾಪುರ ಗ್ರಾಮ ಪಂಚಾಯ್ತಿಗೆ ಶೌಚಾಲಯಗಳ ನಿರ್ಮಾಣಕ್ಕಾಗಿ ಒಟ್ಟು ೧೨ ಲಕ್ಷ ಅನುದಾನದಲ್ಲಿ ಸಧ್ಯ ೪ ಲಕ್ಷ ರೂ ಮಾತ್ರವೇ ಬಿಡುಗಡೆಯಾಗಿದ್ದು ಸಭೆಯಲ್ಲಿ ತೀರ್ಮಾನಿಸಿದಂತೆ ಫಲಾನುಭವಿಗಳಿಗೆ ಹಣ ಬಿಡುಗಡೆಮಾಡಲಾಗಿದ್ದು ಈ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರ ಎಂದು ತಿರುಮಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜು ಸ್ಪಷ್ಟೀಕರಣ ನೀಡಿದ್ದಾರೆ.
![]() |
ಶೌಚಾಲಯದ ಹಣ ಬಿಡುಗಡೆಯಾಗಿರುವ ಬಗ್ಗೆ ಹುಳಿಯಾರು ಹೋಬಳಿ ತಿರುಮಲಾಪುರದ ಗ್ರಾಮ.ಪಂ.ಕಛೇರಿಯಲ್ಲಿ ಸ್ಪಷ್ಟಿಕರಣ ನೀಡಿದ ಅಧ್ಯಕ್ಷ ದೇವರಾಜು.ಉಪಾಧ್ಯಕ್ಷ ಮೋಹನ್ ಕುಮಾರ್,ಕಾರ್ಯದರ್ಶಿ ಗಂಗಾಧರಯ್ಯ ಇದ್ದಾರೆ.
ಹುಳಿಯಾರು ಹೋಬಳಿಯ ತಿರುಮಲಾಪುರ ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರದಂದು ಸದಸ್ಯರುಗಳೊಡನೆ ಪತ್ರಿಕಾಗೋಷ್ಟಿ ನಡೆಸಿದ ಅವರು ಎರಡು ದಿನಗಳ ಹಿಂದೆ ಕೆಲವರು ಶೌಚಾಲಯ ಗಳನ್ನು ನಿರ್ಮಿಸಿದ ಹಣ ನೀಡಿಲ್ಲವೆಂದು ಆರೋಪಿಸಿ ಪಂಚಾಯ್ತಿಗೆ ಬೀಗ ಹಾಕಿದ ಘಟನೆ ದುರುದ್ದೇಶ ಪೂರಕ ಎಂದರು.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಯೋಜನೆ ಪ್ರಗತಿಯಲಿದ್ದು ಶೌಚಾಲಯ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಸದ್ಯ ನಾಲ್ಕು ಸಾವಿರ ರೂಗಳಂತೆ ಹಣ ಜಮಾ ಮಾಡಲಾಗಿದೆ ಎಂದರು.
ಸರ್ಕಾರದಿಂದ ಇನ್ನೂ ಆರು ಲಕ್ಷ ರೂಗಳ ಅನುದಾನ ಬಾಕಿಯಿದೆ. ಸರ್ಕಾರದಿಂದ ಅನುದಾನ ವಿಳಂಬವಾಗುತ್ತಿರುವುದರಿಂದ ಫಲಾನುಭವಿಗಳಿಗೆ ಸಮಸ್ಯೆಯಾಗಿದ್ದು ಸದ್ಯ ವಾರದ ಹಿಂದೆ ಬಿಡುಗಡೆಯಾಗಿರುವ ನಾಲ್ಕು ಲಕ್ಷದಷ್ಟು ಅನುದಾನವನ್ನು ಆದ್ಯತೆ ಮೇರೆಗೆ ೩೦ ಮಂದಿಗೆ ತಲಾ ನಾಲ್ಕು ಸಾವಿರ ರೂ ಹಾಗೂ ಇಪ್ಪತ್ತು ಮಂದಿಗೆ ೧೨ ಸಾವಿರದಂತೆ ವಿತರಣೆ ಮಾಡಲಾಗಿದ್ದು, ಬಾಕಿ ಇರುವ ಅನುದಾನದ ಮಂಜೂರಾತಿಗಾಗಿ ಸರ್ಕಾರಕ್ಕೆ ಪತ್ರ ಮುಖೇನ ಪ್ರಸ್ತಾವ ಸಲ್ಲಿಸಲಾಗಿದೆ. ೧೨ಲಕ್ಷದಲ್ಲಿ ಬಾಕಿಯಿರುವ ಆರು ಲಕ್ಷ ಬರುತ್ತಿದ್ದಂತೆಯೆ ಶೌಚಾಲಯ ನಿರ್ಮಿಸಿಕೊಂಡಿರುವ ಎಲ್ಲ ಫಲಾನುಭವಿಗಳಿಗೆ ಅನುದಾನ ನೀಡಲಾಗುವುದು ಎಂದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೊಸಳ್ಳಿ ಕೃಷ್ಣಮೂರ್ತಿ ಮಾತನಾಡಿ ಈ ಹಿಂದಿದ್ದ ಕಾರ್ಯದರ್ಶಿ ರಮೇಶ್ ಅವರ ಅವಧಿಯಲ್ಲೆ ಅನುದಾನ ಬಿಡುಗಡೆಯಾಗಿದ್ದರು ಸಹ ಹಣಕ್ಕಾಗಿ ತಡಮಾಡಿದ್ದಾರೆ.ಹಾಲಿ ಕಾರ್ಯದರ್ಶಿ ಗಂಗಾಧರಯ್ಯನವರು ಏ.೨೭ರಂದು ಪಂಚಾಯ್ತಿಯ ಚಾರ್ಜ್ ವಹಿಸಿಕೊಂಡಿದ್ದು ,ಬರುತ್ತಿದ್ದಂತೆಯೆ ಮೇ.೨ ರಂದು ಸಭೆ ಕರೆದು ಶೌಚಾಲಯದ ಅನುದಾನದ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ ಪಲಾನುಭವಿಗಳ ಪಟ್ಟಿ ತಯಾರು ಮಾಡಿ ಹಣಬಿಡುಗಡೆ ಮಾಡಿದ್ದಾರೆ.
ಅಲ್ಲದೆ ಬರಗಾಲ ಪರಿಸ್ಥಿತಿ ಬಗ್ಗೆ ನಿಗಾವಹಿಸಿ ಕುಡಿಯುವ ನೀರಿನ ಸಮರ್ಪಕ ಬಳಕೆಗೆ ಆಧ್ಯತೆ ನೀಡಿದ್ದಾರೆ.ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಬಿಡುಗಡೆ ಮಾಡಲು ಕಾಮಗಾರಿ ಪರಿಶೀಲಿಸಲು ಮುಂದಾಗಿದ್ದೆ ಅವರ ಮೇಲೆ ವೃಥಾ ಆರೋ ಮಾಡಲು ಕಾರಣವಾಗಿದೆ.ಪಂಚಾಯ್ತಿ ವ್ಯಾಪ್ತಿಯ ಯಾವುದೇ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯೂ ಇಲ್ಲ. ದಿನದ ೨೪ ಗಂಟೆಯೂ ಸ್ಪಂದಿಸುವ ಮನೋಭಾವ ಹೊಂದಿರುವ ಅವರ ಬಗ್ಗೆ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಪ್ರತಿಪಾದಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಮೋಹನ್ ಕುಮಾರ್,ಸದಸ್ಯರಾದ ಪ್ರಕಾಶ್,ಶಂಕ್ರಯ್ಯ, ದಯಾನಂದ ಮೂರ್ತಿ,ಮಾಜಿ ಸದಸ್ಯ ಸುರೇಶ್,ಕಾರ್ಯದರ್ಶಿ ಗಂಗಾಧರಯ್ಯ ಸೇರಿದಂತೆ ಹೊಸಳ್ಳಿ, ನಂದಿಹಳ್ಳಿ, ತೊರೆಸೂರಗೊಂಡನಹಳ್ಳಿ ಗ್ರಾಮಸ್ಥರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ