ಹುಳಿಯಾರು : ೨೦೧೬- ೧೭ ನೇ ಸಾಲಿಗೆ ಸೇರ್ಪಡೆಯಾಗುವ ಮಕ್ಕಳನ್ನು ಗುರುತಿಸುವ ವಿಶೇಷ ದಾಖಲಾತಿ ಆಂದೋಲನ ಜಾಥಾವನ್ನು ಹುಳಿಯಾರು ಹೋಬಳಿ ಬಲ್ಲಪ್ಪನಹಟ್ಟಿಯಲ್ಲಿ ನಡೆಸಲಾಯಿತು.
ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು ೫ ವರ್ಷ ತುಂಬಿದ ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ದಾಖಲಾತಿ ಮಾಡುವಂತೆ ತಾ.ಪಂ. ಸದಸ್ಯ ಪ್ರಸನ್ನಕುಮಾರ್ ಪೋಷಕರಲ್ಲಿ ಮನವಿ ಮಾಡಿದರು. ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿಸುವುದು ನಮ್ಮ ಗುರಿ ಎಂದರು.
ಎಸ್.ಡಿ.ಎಂ.ಸಿ. ಅದ್ಯಕ್ಷ ಚಿತ್ತಪ್ಪ ಶಾಲೆಗೆ ದಾಖಲಾಗುವ ಪೋಷಕರ ಮನೆಗೆ ಕರೆದೊಯ್ದು ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಿದರು.
ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಜಾಥಾದಲ್ಲಿ ದಬ್ಬಗುಂಟೆ ಶಾಲೆಯ ಈರಸಿದ್ದಯ್ಯ, ದಸೂಡಿ ಕ್ಲಸ್ಟರ್ ಸಿ.ಆರ್.ಪಿ. ರಘುನಂದನ್, ದೈ. ಶಿಕ್ಷಕ ರಾಜಣ್ಣ, ಸಹ ಶಿಕ್ಷಕ ಮೃತ್ಯುಂಜಯ, ಪ್ರಬಾರಿ ಮು.ಶಿ.ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
![]() |
ಹುಳಿಯಾರು ಹೋಬಳಿ ಬಲ್ಲಪ್ಪನಹಟ್ಟಿಯಲ್ಲಿ ೨೦೧೬- ೧೭ ನೇ ಸಾಲಿಗೆ ಸೇರ್ಪಡೆಯಾಗುವ ಮಕ್ಕಳನ್ನು ಗುರುತಿಸುವ ವಿಶೇಷ ದಾಖಲಾತಿ ಆಂದೋಲನ ಜಾಥಾ ನಡೆಸಲಾಯಿತು. |
ಎಸ್.ಡಿ.ಎಂ.ಸಿ. ಅದ್ಯಕ್ಷ ಚಿತ್ತಪ್ಪ ಶಾಲೆಗೆ ದಾಖಲಾಗುವ ಪೋಷಕರ ಮನೆಗೆ ಕರೆದೊಯ್ದು ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಿದರು.
ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಜಾಥಾದಲ್ಲಿ ದಬ್ಬಗುಂಟೆ ಶಾಲೆಯ ಈರಸಿದ್ದಯ್ಯ, ದಸೂಡಿ ಕ್ಲಸ್ಟರ್ ಸಿ.ಆರ್.ಪಿ. ರಘುನಂದನ್, ದೈ. ಶಿಕ್ಷಕ ರಾಜಣ್ಣ, ಸಹ ಶಿಕ್ಷಕ ಮೃತ್ಯುಂಜಯ, ಪ್ರಬಾರಿ ಮು.ಶಿ.ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ