ಹುಳಿಯಾರು:ಪಟ್ಟಣದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೧೬ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಶೇ.೭೬ ಫಲಿತಾಂಶ ಬಂದಿದೆ.೯೮ ವಿದ್ಯಾರ್ಥಿಗಳ ಪೈಕಿ ೭೫ ವಿದ್ಯಾರ್ಥಿಗಳು ಪಾಸಾಗಿದ್ದು ಮಂಜುಳ.ಆರ್ ೫೩೭ ಹಾಗೂ ಎಲ್.ಆರ್.ಕಿರಣ್ ೫೧೭ ಅಂಕಗಳಿಸಿ ವಾಣಿಜ್ಯ ವಿಭಾಗಕ್ಕೆ ಮುಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ೩೭ ವಿದ್ಯಾರ್ಥಿಗಳ ಪೈಕಿ ೨೦ ವಿದ್ಯಾರ್ಥಿಗಳು ಪಾಸಾಗಿದ್ದು ಶೇ.೫೪ರಷ್ಟು ಫಲಿತಾಂಶ ಬಂದಿದೆ.ಪ್ರಮೋದ್ ಪಾಲ್ ೫೬೬ ಅಂಕಗಳಿಸಿದರೆ ಹೆಚ್.ವೈ.ಕಮಲ ೫೧೬ ಅಂಕಗಳನ್ನು ಗಳಿಸಿದ್ದಾರೆ.
ಕಲಾ ವಿಭಾಗದಿಂದ ೮೩ ವಿದ್ಯಾರ್ಥಿಗಳ ಪೈಕಿ ೪೨ ವಿದ್ಯಾರ್ಥಿಗಳು ಪಾಸಾಗಿದ್ದು ಶೇ.೫೦ ರಷ್ಟು ಫಲಿತಾಂಶ ಬಂದಿದೆ.ವಾಣಿ ೫೧೮ ಅಂಕಗಳನ್ನು ಗಳಿಸಿ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಮೋದ್ ಪಾಲ್ ೫೬೬ಗಳಿಸುವ ಮುಖಾಂತರ ಕಾಲೇಜಿಗೆ ಪ್ರಥಮ ಎನ್ನಿಸಿದ್ದಾನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ