ಹುಳಿಯಾರು :ಮಹರ್ಷಿ ಭಗಿರಥ ಜಯಂತಿಯನ್ನು ಹುಳಿಯಾರಿನ ಪಂಚಾಯ್ತಿಯಲ್ಲಿ ಸರಳವಾಗಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್ ಭಗಿರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ
ತನ್ನ ತಪಸ್ಸಿನ ಬಲದಿಂದ ಸ್ವರ್ಗದಲ್ಲಿದ್ದ ಗಂಗೆಯನ್ನುಭೂಮಿಗೆ ತಂದ ಮಹರ್ಷಿ ಭಗಿರಥರ ಜಯಂತಿಯನ್ನು ಆಚರಿಸಲು ಅವಕಾಶ ದೊರೆತಿರುವುದು ಸೌಭಾಗ್ಯ. ಉಪ್ಪಾರ ಬಂಧುಗಳ ಕುಲಪುರುಷರಾಗಿರುವ ಭಗೀರಥ ಮಹರ್ಷಿಗಳ ಜಯಂತಿಯನ್ನು ಪ್ರತಿ ವರ್ಷ ಸಮಾಜ ಬಂಧುಗಳ ಸಹಯೋಗದಲ್ಲಿ ಪಂಚಾಯ್ತಿಯಲ್ಲಿ ಆಚರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಶೇಖರ್ ರಾವ್, ಕೋಳಿ ಶ್ರೀನಿವಾಸ್,ಪಿಡಿಒ ಸಿದ್ಧರಾಮಣ್ಣ,ಉಪ್ಪಾರ ಸಮಾಜದ ಮುಖಂಡರು,ಗ್ರಾಪಂ ಸಿಬ್ಬಂದಿ,ಸಂಘಸಂಸ್ಥೆಗಳ ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ