ಗಾಯಗೊಂಡ ನವಿಲಿಗೆ ದೊರೆಯದ ಚಿಕಿತ್ಸೆ: ಸಾವನ್ನಪ್ಪಿದ ರಾಷ್ಟ್ರ ಪಕ್ಷಿ
--------------------------------------
ಹುಳಿಯಾರು:ಮುಂಜಾನೆಯ ತಂಗಾಳಿಯಲ್ಲಿ ಹುಣುಸೆಮರದಡಿಯಲ್ಲಿ ನರ್ತಿಸುತ್ತಿದ್ದ ನವಿಲಿನ ಮೇಲೆ ನಾಯಿಗಳು ಎರಗಿದ್ದರಿಂದ ಗಾಯಗೊಂಡಿದ್ದ ನವಿಲು ಸಾವನ್ನಪ್ಪಿರುವ ಘಟನೆ ಸಮೀಪದ ಬರಕನಾಳ್ ಗ್ರಾಮದಲ್ಲಿ ಜರುಗಿದೆ.
ಮಂಗಳವಾರ ಮುಂಜಾನೆ ಬರಕನಾಳ್ ಗ್ರಾಮದ ತಿಮ್ಮಯ್ಯನವರ ಮನೆ ಮುಂಭಾಗದ ಹುಣುಸೆಮರದಡಿಯಲ್ಲಿ ನಾಯಿಗಳ ಬೊಗುಳುವಿಕೆ ಕೇಳಿ ಧಾವಿಸಿದ ತಿಮ್ಮಯ್ಯನವರಿಗೆ ನಾಯಿಗಳು ನವಿಲಿನ ಮೇಲೆರೆಗಿ ಬೊಗುಳುತ್ತಿದ್ದ ದೃಶ್ಯ ಕಂಡುಬಂದಿದೆ.
ಕೂಡಲೆ ನಾಯಿಗಳನ್ನು ಓಡಿಸಿ ಗಾಯಗೊಂಡಿದ್ದ ನವಿಲನ್ನು ಚಿಕಿತ್ಸೆಗಾಗಿ ಹುಳಿಯಾರಿನ ಪಶುಆಸ್ಪತ್ರೆಗೆ ಕರೆತಂದಿದ್ದಾರೆ.
ಈ ಬಗ್ಗೆ ಸ್ಥಳಿಯ ಪೋಲಿಸ್ ಗೆ ಹಾಗೂ ಅರಣ್ಯ ಇಲಾಖೆತೆ ಮಾಹಿತಿ ನೀಡಿದ ಅವರು ವೈದ್ಯರಿಗೆ ಫೋನ್ ಮಾಡಿ ಕಾದಿದ್ದಾರೆ.ಸ್ಥಳಕ್ಕೆ ಅರಣ್ಯ ಇಲಾಖೆಯ ಬುಕ್ಕಾಪಟ್ಟಣ ರೇಂಜಿನ ದಸೂಡಿ ಗಸ್ತಿನ ಅರಣ್ಯ ವೀಕ್ಷಕ ರಂಗನಾಥಯ್ಯ ,ಇಮ್ರಾಜ್ ಹಾಗೂ ಗ್ರಾಪಂ ಸದಸ್ಯ ಚಂದ್ರಶೇಖರ್ ಆಗಮಿಸಿದ್ದು ಅವರುಗಳು ಕೂಡ ವೈದ್ಯರನ್ನು ಸಂಪರ್ಕಿಸಿದ್ದಾರೆ.
ನವಿಲಿಗೆ ಚಿಕಿತ್ಸೆ ನೀಡಿಸಿ ಬದುಕಿಸಿ ಕಾಡಿಗೆ ಬಿಡಬಹುದೆಂದು ಬಂದಿದ್ದ ತಿಮ್ಮಯ್ಯನವರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳದಲ್ಲಿದ್ದ ಯುವಕರು ಸಮಯಕ್ಕೆ ಸರಿಯಾಗಿ ವೈದ್ಯರು ದೊರೆತು ಚಿಕಿತ್ಸೆ ದೊರೆತಿದ್ದಲ್ಲಿ ನವಿಲನ್ನು ಬದುಕುಳಿಸಬಹುದ್ದಿತ್ತೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತಿಮ್ಮಯ್ಯನವರ ಈ ಕಾಳಜಿಗೆ ಎಲ್ಲರೂ ಧನ್ಯವಾದ ಹೇಳಬೇಕು.... ಇದೇ ಕಾಳಜಿಯನ್ನು ಪಶುವೈದ್ಯರು ತೋರಿದ್ದರೆ ತಮ್ಮಯ್ಯನವರ ಶ್ರಮ ಸಾರ್ಥಕವಾಗುತ್ತಿತ್ತು....... ಇದನ್ನ ಪಶು ವೈದ್ಯರು ಯೋಚಿಸಬೇಕು...
ಪ್ರತ್ಯುತ್ತರಅಳಿಸಿಖಂಡಿತ Sir
ಅಳಿಸಿಖಂಡಿತ Sir
ಪ್ರತ್ಯುತ್ತರಅಳಿಸಿ