ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಮ್ಮನವರ ತಿಂಗಳ ಬಾನವನ್ನು ಮಂಗಳವಾರದಂದು ನೂರಾರು ಭಕ್ತಾಧಿಗಳು ಸೇರಿ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಪ್ರತಿ ವರ್ಷದಂತೆ ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ನಡೆದ ಒಂದು ತಿಂಗಳ ತರವಾಯ ತಿಂಗಳ ಬಾನ ನೈವೇದ್ಯ ಕಾರ್ಯಕ್ರಮ ಸಂಪ್ರದಾಯದಂತೆ ಆಚರಿಸಲಾಗುತ್ತಿದ್ದು ಬಾನದ ಪ್ರಯುಕ್ತ ಅಮ್ಮನವರ ಮೂಲಸ್ಥಾನ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಪೂಜೆ,ಅಭಿಷೇಕ ನೆರವೇರಿತು.
ಸಂಜೆ ಸೋಮನನ್ನು ಮೆರವಣಿಗೆ ಮೂಲಕ ಹೊರಡಿಸಿ ಘಟೆ ಉಕ್ಕಿಸಲಾಯಿತು. ಮುಂಜಾನೆಯಿಂದಲೆ ದೇವಾಲಯಕ್ಕೆ ಆಗಮಿಸುತ್ತಿದ್ದ ಮಹಿಳೆಯರು ಮೂಲಸ್ಥಾನದ ದುರ್ಗಮ್ಮನಿಗೆ ತಂಬಿಟ್ಟಿನ ಆರತಿ ಎತ್ತಿ ಬಾನದ ನೈವೇದ್ಯ ಅರ್ಪಿಸಿದರು.
ಅಮ್ಮನವರ ತಿಂಗಳ ಬಾನ ಹಾಗೂ ಅಂಬೇಡ್ಕರ ಜಯಂತಿ ಪ್ರಯುಕ್ತ ಹೊಸಹಳ್ಳಿ ಮಾರುತಿ ಕಲಾ ಬಳಗದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಯಿತು.ಹಿರಿಯ ರಂಗಭೂಮಿ ಕಲಾವಿದ ಶಂಕರಪ್ಪನವರನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ