ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮೇ 11ರ ಬುಧವಾರ ನಡೆಯಿತು, ಚುನಾವಣೆಯಲ್ಲಿ ಜೆ.ಡಿ.ಎಸ್.ನ ಹೊನ್ನಮ್ಮ ಅಧ್ಯಕ್ಷರಾಗಿ ಹಾಗೂ ಟಿ.ಜಿ ತಿಮ್ಮಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
![]() |
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಜೆ.ಡಿ.ಎಸ್.ನ ಹೊನ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಟಿ.ಜಿ ತಿಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. |
ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 19 ಸ್ಥಾನಗಳಲ್ಲಿ ಜೆ.ಡಿ.ಎಸ್ 11, ಬಿ.ಜೆ.ಪಿ 7, ಹಾಗೂ ಕಾಂಗ್ರೇಸ್ 1 ಸ್ಥಾನದಲ್ಲಿ ಜಯಗಳಿಸಿತ್ತು. ಜೆಡಿಎಸ್ ಗೆ ನಿಚ್ಚಳ ಬಹುಮತ ಇದ್ದುದ್ದರಿಂದ ಆಯ್ಕೆ ಪ್ರಕ್ರಿಯೆ ಸರಾಗವಾಯಿತು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಜೆ.ಸಿ.ಪುರ ತಾ.ಪಂ ಕ್ಷೇತ್ರ ಹೊನ್ನಮ್ಮ, ಬರಗೂರು ಕ್ಷೇತ್ರದ ಚೇತನಾ, ಶೆಟ್ಟಿಕೆರೆ ಕ್ಷೇತ್ರದ ಜಯಮ್ಮ ಹಾಗೂ ಹಂದನಕೆರೆ ಕ್ಷೇತ್ರದ ಚಂದ್ರಕಲಾ ಹೆಸರುಗಳು ಕೇಳಿಬಂದವಾದರೂ ಅಂತಿಮವಾಗಿ ಹೊನ್ನಮ್ಮ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಿದ್ದು ಮಾಳಿಗೆಹಳ್ಳಿ ಕ್ಷೇತ್ರ ಟಿ.ಜಿ.ತಿಮ್ಮಯ್ಯ ಹಾಗೂ ಯಳನಡು ಕ್ಷೇತ್ರದ ಯತೀಶ್ ಹೆಸರುಗಳು ಕೇಳಿಬಂದವು. ಅಂತಿಮವಾಗಿ ಟಿ.ಜಿ.ತಿಮ್ಮಯ್ಯ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ ಕಾರ್ಯ ನಿರ್ವಹಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷ ಸಿ.ಟಿ.ದಯಾನಂದ್, ಮುಖಂಡರಾದ ಸಿ.ಎಸ್.ನಟರಾಜ್, ರೇಣುಕಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ